ಯಾವುದೇ ಸಂಘ ಸಂಸ್ಥೆಯನ್ನು ಹುಟ್ಟು ಹಾಕುವ ಉದ್ಧೇಶ ಅದು ಜನಸಾಮಾನ್ಯರಿಗೆ ಮುಟ್ಟುವಂತಾಗಬೇಕು, ಅದರ ಧ್ಯೇಯಗಳು ಉತ್ತಮ ಗುರಿಯನ್ನು ಹೊಂದಿದ್ದು ಸಮಾಜಕ್ಕೆ ಅನುಕೂಲವಾಗಬೇಕು. ಆಗಲೇ ಆ ಸಂಸ್ಥೆಯು ಸಾರ್ಥಕತೆಯನ್ನು ಪಡೆಯಲು ಸಾಧ್ಯ. ಅಂತಹ ಒಳ್ಳೆಯ ವಿಚಾರದಿಂದ ಪ್ರಾರಂಭವಾದ ಸಂಸ್ಥೆ ತುಲುವೆರೆ ಕಲ. ತುಳು ಭಾಷೆಯನ್ನು ಉಳಿಸಿ ಬೆಳೆಸಿ ಅದಕ್ಕೊಂದು ಮಾನ್ಯತೆ ಸಿಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು , ಅದರ ಪರಿಮಳ ವಿಶ್ವದಾದ್ಯಂತ ಪಸರಿಸಬೇಕು ಎನ್ನುವ ಕಳಕಳಿಯನ್ನು ಹೊಂದಿದ ಸಂಸ್ಥೆ . ಸುಮಾರು ಮೂರು ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಈ ಸಂಸ್ಥೆ ಆನೇಕ ಕಾರ್ಯಗಳನ್ನು ಮಾಡಿ ಯಶಸ್ವಿಗಳಿಸಿ ತುಳು ಭಾಷೆಯ ವಿಕಾಸಕ್ಕಾಗಿ ಸ್ಪಂದಿಸುತ್ತಿದ್ದು ಜನಮೆಚ್ಚುಗೆಯನ್ನು ಪಡೆದಿರುತ್ತದೆ. ಮಾತೃಭಾಷೆಯ ವೃದ್ಧಿಗಾಗಿ ಇದರ ಉಪವಿಭಾಗ ತುಲುವೆರೆ ಕಲ ಬೊಂಬೈ ಎಗ್ಗೆ ಮುಂಬೈಯಲ್ಲಿ ಸ್ಥಾಪನೆಗೊಂಡಿರಯವುದು ಸಂತೋಷದ ವಿಷಯವಾಗಿದೆ. ಮುಂಬೈಯಲ್ಲಿ ಕೂಡಾ ತುಳು ಬಾಷೆಯನ್ನು ಉಳಿಸಿ ಬೆಳೆಸಿ ಹೊರನಾಡಿನಲ್ಲೂ ಅದರ ಅಸ್ಮಿತೆಯನ್ನು ವಿಸ್ತರಿಸಬೇಕು ಎನ್ನುವ ಕಾಳಜಿಯಿಂದ ಹುಟ್ಟು ಹಾಕಿದೆ ಎನ್ನುವುದೇ ಹೆಮ್ಮೆಯ ಸಂಗತಿ. ಈ ಸಂಸ್ಥೆಯ ಚೊಚ್ಚಲ ವಾರ್ಷಿಕೋತ್ಸವವು ಇದೇ ಅಗಸ್ಟ್ 30 ರಂದು ಡೊಂಬಿವಿಲಿಯ ಪ್ರೀತಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಮುಂಬೈಯ ತುಳು ಕನ್ನಡಿಗ ಕವಿ- ಕವಯತ್ರಿಯರಿಗಾಗಿ ಹಾಸ್ಯ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ . ಆ ಪ್ರಯುಕ್ತ ಬಾಗವಹಿಸಲು ಆಸಕ್ತಿಯುಳ್ಳವರು ಜುಲೈ 5 ರ ಒಳಗೆ ಕೆಳಗಿನ ಈ ನಂಬರಿಗೆ ಸಂಪರ್ಕ ಮಾಡಿ ಹೆಸರು ನೋಂದಾವಣೆ ಮಾಡಿಕೊಳ್ಳಬೇಕಾಗಿ ವಿನಂತಿಸುತ್ತೇವೆ.
ಪ್ರಪುಲ್ಲ ಶೆಟ್ಟಿ( ಕಾರ್ಯಾಧ್ಯಕ್ಷೆ) 90296 66675
ಶೋಭಾ ಎಸ್.ಶೆಟ್ಟಿ ( ಕಾರ್ಯದರ್ಶಿ) 9702211551.
ಸವಿತಾ ಸಾಲ್ಯಾನ್ (ಜೊತೆ ಕಾರ್ಯದರ್ಶಿ) 98928 50309
ಮೈನಾ ಶೆಟ್ಟಿ ( ಕೋಶಾಧಿಕಾರಿ) 93210 97128
ಕುಮುದಾ ಶೆಟ್ಟಿ ( ಸಾಹಿತ್ಯ ಸಮಿತಿ)9619026965




