29 C
Mumbai
September 27, 2026
Mumbai News Kannada
ಮುಂಬಯಿ

ಮೀರಾ ರೋಡ್: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 36ನೇ ವಾರ್ಷಿಕ ಮಹಾಪೂಜೆ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ




​ಚಿತ್ರ-ವರದಿ: ದಿನೇಶ್ ಕುಲಾಲ್


​ಮೀರಾ ರೋಡ್, ಜೂ. 19: ಇಲ್ಲಿನ ಮೀರಾ ಗಾವ್, ಮೀರಾ ಸೊಸೈಟಿಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 36ನೇ ವಾರ್ಷಿಕ ಮಹಾಪೂಜೆಯು ಜೂನ್ 14ರಂದು ಅತ್ಯಂತ ಭಕ್ತಿ-ಸಂಭ್ರಮದೊಂದಿಗೆ ಸಂಪನ್ನಗೊಂಡಿತು.


​ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶಿಮಂತೂರು ಮಜಲಗುತ್ತು ಬಾಬಾ ರಂಜನ್ ಶೆಟ್ಟಿ ಅವರ ಯಜಮಾನಿಕೆಯಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿದವು. ವಾಮಂಜೂರು ಕೃಷ್ಣರಾಜ ಉಪಾಧ್ಯಾಯ ತಂತ್ರಿಯವರ ಮಾರ್ಗದರ್ಶನದಲ್ಲಿ, ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಸಾಣೂರು ಸಾಂತಿಂಜ ಜನಾರ್ಧನ ಭಟ್ ಅವರ ನೇತೃತ್ವದಲ್ಲಿ ಅರ್ಚಕ ಸಾಣೂರು ಮಾಧವ ಭಟ್ ಹಾಗೂ ವಿಪ್ರ ಬಾಂಧವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು.
​

​ಬೆಳಿಗ್ಗೆ: ಶ್ರೀ ಗಣಪತಿ ಯಾಗ, ನವಕ ಕಲಶಾಭಿಷೇಕ, ಪ್ರಸನ್ನ ಪೂಜೆ.
​ಸಂಜೆ: ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಮತ್ತು ಸ್ಥಳೀಯ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ.
​ರಾತ್ರಿ: ಕುಂಟಾಡಿ ಸುರೇಶ್ ಭಟ್ ಅವರ ನೇತೃತ್ವದಲ್ಲಿ ಉತ್ಸವ ಬಲಿ ಹಾಗೂ ಮಹಾಮಂಗಳಾರತಿ ನೆರವೇರಿತು.
​


ಈ ಮಹಾಪೂಜೆಯಲ್ಲಿ ವಿಜಯ ಆರ್. ಭಂಡಾರಿ, ಡಾ. ಅರುಣೋದಯ ರೈ ಮತ್ತು ಪರಿವಾರದವರು, ಉದಯ ಶೆಟ್ಟಿ ಪೆಲತೂರು, ರಾಜೇಶ್ ಶೆಟ್ಟಿ ಕಾಪು, ಸುನಿಲ್ ಶೆಟ್ಟಿ, ಹರೀಶ್ ರೈ ಸೇರಿದಂತೆ ಹಲವು ಗಣ್ಯರು, ಹೋಟೆಲ್ ಉದ್ಯಮಿಗಳು, ವಿವಿಧ ಸಮಾಜ ಬಾಂಧವರು, ಕಾರ್ಮಿಕರು ಹಾಗೂ ವಿವಿಧ ಭಜನಾ ಮಂಡಳಿಗಳ ಸದಸ್ಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ತೀರ್ಥಪ್ರಸಾದ ಸ್ವೀಕರಿಸಿದರು.


​ಪೂಜಾ ಕಾರ್ಯಕ್ರಮಗಳ ಯಶಸ್ಸಿಗಾಗಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಸ್ಥಾಪಕ ಸದಸ್ಯರಾದ ದಿವಂಗತ ವಿಶ್ವನಾಥ್ ಪೂಂಜ ಅವರ ಪರಿವಾರದವರು, ಕೃಷ್ಣ ಶೆಟ್ಟಿ, ಕಾರ್ಯದರ್ಶಿ ಪ್ರಮೋದ್ ಮಾತ್ರೆ, ಅನಿಲ್ ಕೆ. ಶೆಟ್ಟಿ, ಪ್ರಸನ್ನ ಶೆಟ್ಟಿ ಕುರ್ಕಾಲ್, ಸುಂದರ ಶೆಟ್ಟಿಗಾರ್, ಪ್ರಸನ್ನ ಬಿ. ಶೆಟ್ಟಿ, ಆನಂದ್ ಶೆಟ್ಟಿ ಐಕಳ, ವೆಂಕಟೇಶ್ ಪಾಟೀಲ್, ಚಂದ್ರ ಶೆಟ್ಟಿ ಶಿಮಂತೂರು ಮಜಲಗುತ್ತು ಹಾಗೂ ಶ್ರೀ ಮಹಾಲಿಂಗೇಶ್ವರ ಟ್ರಸ್ಟ್ ಮತ್ತು ಮೀರಾ ಸೊಸೈಟಿಯ ಸರ್ವ ಪದಾಧಿಕಾರಿಗಳು ಹಾಗೂ ಸದಸ್ಯರು ಸಂಪೂರ್ಣ ಸಹಕಾರ ನೀಡಿದರು.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ದೇವಿಕಾ ಸುರೇಶ್ ಪೂಜಾರಿ ಗೆ ಶೇ 92% ಅಂಕ.

Mumbai News Desk

ಒಕ್ಕಲಿಗರ ಸಂಘದ ಮಹಾರಾಷ್ಟ್ರ ಪದಾಧಿಕಾರಿಗಳು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ, ಮುಂಬೈಯಲ್ಲಿ ಒಕ್ಕಲಿಗರ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಭರವಸೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರೀಕ್ಷಾ ಪುಷ್ಪರಾಜ್ ಪೂಂಜಾ ಗೆ ಶೇ 93.20 ಅಂಕ.

Mumbai News Desk

ಡೊಂಬಿವಲಿಯಲ್ಲಿ ಮಹಿಳೆಯರ ಹಳದಿ-ಕುಂಕುಮ ಸಂಭ್ರಮ: ಸಾಂಪ್ರದಾಯಿಕ ಉಡುಗೆ, ನೃತ್ಯದ ಮೆರುಗು

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಗಣರಾಜ್ಯೋತ್ಸವ ಆಚರಣೆ.

Mumbai News Desk

ಬಂಟರ ಸಂಘ ಮುಂಬಯಿಯ ಡೊಂಬಿವಲಿ ಪ್ರಾದೇಶಿಕ ಸಮೀತಿಯ ಮಹಿಳಾ ವಿಭಾಗದ ವತಿಯಿಂದ ಅರಷಿಣ ಕುಂಕುಮ ಹಾಗೂ ಆರೋಗ್ಯಕುರಿತು ವಿಚಾರ ಸಂಕಿರಣ.

Mumbai News Desk