October 17, 2026
Mumbai News Kannada
ಪ್ರಕಟಣೆ

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್: ಜುಲೈ 19ರಂದು ಆಷಾಢ ಹಬ್ಬ ಆಚರಣೆ




​ಮುಂಬಯಿ: ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಪೂರ್ವ ಇದರ ಮಹಿಳಾ ವಿಭಾಗದ ವತಿಯಿಂದ ಆಟಿ ತಿಂಗಳ ಆಷಾಢ ಹಬ್ಬದ ಆಚರಣೆಯು ಜುಲೈ 19ರಂದು ಮಧ್ಯಾಹ್ನ 4 ಗಂಟೆಗೆ ಮಲಾಡ್ ಪೂರ್ವದ ಪುಷ್ಪ ಪಾರ್ಕ್‌ನಲ್ಲಿರುವ ಉತ್ಕರ್ಷ ವಿದ್ಯಾಮಂದಿರದಲ್ಲಿ ನಡೆಯಲಿದೆ. ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಎನ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಈ ಆಚರಣೆ ಜರುಗಲಿದೆ.
​ಈ ಸಮಾರಂಭಕ್ಕೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಪರವಾಗಿ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ. ಆಚಾರ್ಯ, ಕಾರ್ಯದರ್ಶಿ ಶೀಲಾ ಎಂ. ಪೂಜಾರಿ, ಕೋಶಾಧಿಕಾರಿ ನಳಿನಿ ಪಿ. ಕರ್ಕೆರ, ಉಪ ಕಾರ್ಯಾಧ್ಯಕ್ಷರುಗಳಾದ ಗೀತಾ ಜೆ. ಮೆಂಡನ್, ಲಲಿತಾ ಎಸ್. ಗೌಡ ಮತ್ತು ಸಂಧ್ಯಾ ಎಸ್. ಪ್ರಭು ವಿನಂತಿಸಿದ್ದಾರೆ.
​ಹಾಗೂ ಜೊತೆ ಕಾರ್ಯದರ್ಶಿಗಳಾದ ಭಾರತಿ ಎಸ್. ಆಚಾರ್ಯ ಮತ್ತು ವಿದ್ಯಾ ಡಿ. ಆಚಾರ್ಯ, ಜೊತೆ ಕೋಶಾಧಿಕಾರಿಗಳಾದ ಶೋಭಾ ಎಲ್. ರಾವ್ ಮತ್ತು ವಿದ್ಯಾ ಎಸ್. ನಾಯಕ್, ಸಲಹಾ ಸಮಿತಿಯ ಸದಸ್ಯರುಗಳಾದ ಮೋಹಿನಿ ಜೆ. ಶೆಟ್ಟಿ ಮತ್ತು ರತ್ನ ಡಿ. ಕುಲಾಲ್, ಕಾರ್ಯಕಾರಿ ಸಮಿತಿ ಮತ್ತು ಯುವ ವಿಭಾಗದ ಎಲ್ಲಾ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.



Related posts

ಜುಲೈ 19: ಜಯ ಸಿ. ಸುವರ್ಣ ಅಭಿಮಾನಿ ಬಳಗದಿಂದ ‘ಮರಿಯಾಲದ ಮಿನದನ’ ಆಟಿ ಕಾರ್ಯಕ್ರಮ

Mumbai News Desk

ಸೆ.7 ರಂದು ಕಲ್ಯಾಣ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಭವ್ಯ ಸಮಾರಂಭ

Mumbai News Desk

ಮೀರಾ ರೋಡ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೂ.14 : 35ನೇ ವಾರ್ಷಿಕ ಮಹಾಪೂಜೆ

Mumbai News Desk

ಸೆ. 22 ರಿಂದ ಅ 2 ರ ವರೆಗೆ ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ 11ನೇ ವರ್ಷದ ಶರನ್ನವರಾತ್ರಿ ಮಹೋತ್ಸವ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ :ಜ. 7 ರಂದು 36ನೇ ವಾರ್ಷಿಕೋತ್ಸವ

Mumbai News Desk

ಮಾರ್ಚ್ 9 ರಂದು ಕರ್ನಾಟಕ ಸಂಘ ಡೊಂಬಿವಲಿ : ಮಹಿಳಾ ವಿಭಾಗದ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ ಹಾಗೂ ವೈದ್ಯಕೀಯ ವಿಚಾರ ಸಂಕಿರಣ. 

Mumbai News Desk