September 1, 2026
Mumbai News Kannada
ಮುಂಬಯಿ

ಹಟ್ಟಿಯಂಗಡಿ ಮೇಳದ ಮುಂಬಯಿ ಪ್ರವಾಸ: ಗಾಣೇಕರ್ ನಾಟ್ಯಾಲಯದಲ್ಲಿ ಉದ್ಘಾಟನೆ






​ಮುಂಬಯಿ: ಶ್ರೀ ಸಿದ್ದಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಇದರ 12ನೇ ವರ್ಷದ ತಿರುಗಾಟದ ಅವಧಿಯಲ್ಲಿ ಮುಂಬಯಿ ಪ್ರವಾಸ ಕೈಗೊಳ್ಳಲಾಗಿದ್ದು, ಜುಲೈ 10ರ ಶುಕ್ರವಾರ ಥಾಣೆಯ ಡಾ. ಕಾಶೀನಾಥ್ ಗಾಣೇಕರ್ ನಾಟ್ಯಾಲಯದಲ್ಲಿ ಉದ್ಘಾಟನೆ ನಡೆಯಿತು.
​ಥಾಣೆ ವರ್ತಕ ನಗರ ಕನ್ನಡ ಸಂಘದ ಆಶ್ರಯದಲ್ಲಿ ಮೂಡಿಬಂದ ಈ ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ವಿದ್ವಾಂಸರು, ಉದ್ಯಮಿಗಳು ಹಾಗೂ ಕಲಾ ಪೋಷಕರಾದ ಪೊಲ್ಯ ಉಮೇಶ್ ಶೆಟ್ಟಿಯವರು ಪ್ರಾಯೋಜಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪೊಲ್ಯರು, “ಯಕ್ಷಗಾನವು ನಮ್ಮ ಸಂಸ್ಕೃತಿಯ ಆರಾಧನೆಯನ್ನು ಮಾಡುವಂತಹ ಕರಾವಳಿಯ ಪ್ರಸಿದ್ಧ ಕಲೆಯಾಗಿದೆ. ಕಲಾವಿದರ ಶ್ರಮದ ಮೂಲಕ ಪೌರಾಣಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಅದ್ಭುತ ಕೆಲಸವನ್ನು ಯಕ್ಷಗಾನವು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಹಾಗಾಗಿ ಈ ಮಹಾನಗರದಲ್ಲಿ ಇಂತಹ ವಿಶಿಷ್ಟ ಪ್ರದರ್ಶನಗಳಿಗೆ ಮತ್ತಷ್ಟು ಅವಕಾಶಗಳನ್ನು ಒದಗಿಸಿಕೊಡಬೇಕಾಗಿದೆ” ಎಂದರು.
​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಥಾಣೆಯ ಉದ್ಯಮಿ ಗಿಳಿಯಾರು ರತ್ನಾಕರ ಶೆಟ್ಟಿ, ಕಲಾಜಗತ್ತು ವಿಜಯ್ ಕುಮಾರ್, ವರ್ತಕ ನಗರ ಕನ್ನಡ ಸಂಘದ ಅಧ್ಯಕ್ಷರಾದ ಶೇಖರ ಶೆಟ್ಟಿ, ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಶಿವಪ್ರಸಾದ್ ಪೂಜಾರಿ, ಮೋಹನ್ ರೈ ಕರ್ನೂರು, ಹಿರಿಯ ಕಲಾಪೋಷಕ ಸಿ.ಎಂ. ಶೆಟ್ಟಿ, ಮಾಜಿ ಅಧ್ಯಕ್ಷ ಜಯಂತ್ ಶೆಟ್ಟಿ, ನವೀನ್ ಶೆಟ್ಟಿ, ರತ್ನಾಕರ ಶೆಟ್ಟಿ ಹೊಸೂರು ಮುಂತಾದವರು ಉಪಸ್ಥಿತರಿದ್ದರು.
​ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಮೇಳದ ಪ್ರಸಿದ್ಧ ಭಾಗವತರಾದ ಆನಂದ ಅಂಕೋಲ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.



Related posts

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದಸಮಾಜದ ವಿದ್ಯಾರ್ಥಿಗಳಿಗಾಗಿ ಏರ್ಪಟ್ಟ ಚಿತ್ರಕಲಾ ಸ್ಪರ್ಧೆ :

Mumbai News Desk

ಭಾಯಂದ‌ರ್  ಶ್ರೀ ಹನುಮಾನ್ ಭಜನಾ ಮಂಡಳಿ ವತಿಯಿಂದ ಸುಧಾಕರ್  ಶೆಟ್ಟಿ ಬಿಯಾಳಿ ಮಂದಾರ್ತಿಯವರ ಮುಂದಾಳತ್ವದಲ್ಲಿ  ಯಕ್ಷಗಾನ ‘ನಾಗಶ್ರೀ’ 

Mumbai News Desk

ಸ್ಮಿತಾ ಬೆಳ್ಳೂರ್ ಯವರು  ಸಂಗೀತ  ಕಛೇರಿ ಮೂಲಕ ಸಂಗೀತಕಲಾ ರಸಿಕರನ್ನು ಮನಮೋಹಕಗೊಳಿಸಿದರು

Mumbai News Desk

ಹಿಂದಿ ಹೇರಿಕೆ ಆರೋಪದ ನಡುವೆ ತ್ರಿಭಾಷಾ ನೀತಿಯನ್ನು ರದ್ದುಗೊಳಿಸಿದ ಮಹಾರಾಷ್ಟ್ರ ಸರಕಾರ

Mumbai News Desk

ವಡಾಲದ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಗೆ ಎಸ್ ಎಸ್ ಸಿ ಯಲ್ಲಿ ಶೇಕಡ 100% ಫಲಿತಾಂಶ.

Mumbai News Desk

ವೀರಕೇಸರಿ ಮೀರಾಭಾಯಂದರ್ ವತಿಯಿಂದ ಬಹುಮಾನ ವಿತರಣೆ, ಸನ್ಮಾನ ಕಾರ್ಯಕ್ರಮ.

Mumbai News Desk