33 C
Mumbai
October 7, 2026
Mumbai News Kannada
ಮುಂಬಯಿ

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಸುವರ್ಣ ಸಂಭ್ರಮ – ಸರಣಿ ಕಾರ್ಯಕ್ರಮ – 7 ಮಹಿಳಾ ವಿಭಾಗದ ವತಿಯಿಂದ ಹೂವಿನ ರಂಗೋಲಿ ಸ್ಪರ್ಧೆ – 2026



ಡೊಂಬಿವಲಿ, ಅ. 4: ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ, ಮುಂಬ್ರಾ ಮಿತ್ರ ಭಜನಾ ಮಂಡಳಿ (ರಿ.) ಇವರ ನಿರ್ವಹಣೆಯಲ್ಲಿ ಮಹಿಳಾ ವಿಭಾಗದ ವತಿಯಿಂದ ಡೊಂಬಿವಲಿ ಪರಿಸರದ ಮಹಿಳೆಯರಿಗಾಗಿ ಹೂವಿನ ರಂಗೋಲಿ ಸ್ಪರ್ಧೆಯನ್ನು ಮೊಗವೀರ ವ್ಯವಸ್ಥಾಪಕ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ವಿವಿಧ ಬಗೆಯ ಆಕರ್ಷಕ ಹೂವಿನ ರಂಗೋಲಿಗಳನ್ನು ರಚಿಸಿ ನೆರೆದವರ ಗಮನ ಸೆಳೆದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದ್ಮಶಾಲಿ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ಯಶೋದಾ ಶೆಟ್ಟಿಗಾರ್ ಹಾಗೂ ಸಮಾಜ ಸೇವಕಿ ಶ್ರೀಮತಿ ಪುಷ್ಪಾ ಭಾಸ್ಕರ್ ಕಾಂಚನ್ ಅವರು ಆಗಮಿಸಿದ್ದರು. ಶ್ರೀಮತಿ ಸ್ಮಿತಾ ಅಭಿಷೇಕ್ ನಾಯ್ಕ್ ಅವರು ತೀರ್ಪುಗಾರರಾಗಿ ಸಹಕರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂದಿರದ ಉಪಾಧ್ಯಕ್ಷರಾದ ಶ್ರೀ ಅರವಿಂದ್ ಪದ್ಮಶಾಲಿ ಅವರು ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಚಂದ್ರಶೇಖರ್ ಸಾಲ್ಯಾನ್, ಗೌರವಾಧ್ಯಕ್ಷ ಶ್ರೀ ನಿತಿನ್ ಪ್ರಕಾಶ್ ಪುತ್ರನ್, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ ಹಾಗೂ ಕೋಶಾಧಿಕಾರಿ ಶ್ರೀ ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿ ಶ್ರೀಮತಿ ಯಶೋದಾ ಶೆಟ್ಟಿಗಾರ್ ಅವರು ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವಕ್ಕೆ ಶುಭ ಹಾರೈಸಿದರು. ಮತ್ತೋರ್ವ ಅತಿಥಿ ಶ್ರೀಮತಿ ಪುಷ್ಪಾ ಭಾಸ್ಕರ್ ಕಾಂಚನ್ ಅವರು ಹೂವಿನ ರಂಗೋಲಿಯ ಮಹತ್ವವನ್ನು ತಿಳಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರ ಉತ್ಸಾಹ ಮತ್ತು ಪ್ರತಿಭೆಯನ್ನು ಶ್ಲಾಘಿಸಿದರು.

ತೀರ್ಪುಗಾರರಾದ ಶ್ರೀಮತಿ ಸ್ಮಿತಾ ಅಭಿಷೇಕ್ ನಾಯ್ಕ್ ಅವರು ಮಾತನಾಡಿ, “ಹೂವಿನ ರಂಗೋಲಿ ಸ್ಪರ್ಧೆಯು ಅತ್ಯಂತ ಪೈಪೋಟಿಯಿಂದ ಕೂಡಿತ್ತು. ಇಂತಹ ಸ್ಪರ್ಧೆಗಳಲ್ಲಿ ತೀರ್ಪು ನೀಡುವುದು ಕಷ್ಟಕರವಾಗುತ್ತದೆ. ಆದರೆ ಗೆಲುವನ್ನು ನಿರ್ಧರಿಸಲು ಸೋಲನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಇಲ್ಲಿ ಸೋಲು–ಗೆಲುವಿಗಿಂತ ಭಾಗವಹಿಸುವಿಕೆಯೇ ಮುಖ್ಯ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು” ಎಂದು ಶುಭ ಹಾರೈಸಿದರು.

ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸುವರ್ಣ ಸಂಭ್ರಮದ ಅಂಗವಾಗಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು. “ಮಂದಿರದ ವಿಜ್ಞಾಪನಾ ಪತ್ರ ಈಗಾಗಲೇ ಬಿಡುಗಡೆಗೊಂಡಿದ್ದು, ಸುವರ್ಣ ಸಂಭ್ರಮದ ಕಾರ್ಯಕ್ರಮಗಳಿಗಾಗಿ ಸುಮಾರು ₹60 ಲಕ್ಷ ನಿಧಿ ಸಂಗ್ರಹಣೆಯ ಗುರಿ ಹೊಂದಲಾಗಿದೆ. ಈ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಮಹಿಳಾ ವಿಭಾಗದ ವತಿಯಿಂದ ಉತ್ತಮ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ಸಂತಸ ತಂದಿದೆ” ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಅರವಿಂದ್ ಪದ್ಮಶಾಲಿ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರನ್ನು ಅಭಿನಂದಿಸಿ, ಮುಂದಿನ ಸುವರ್ಣ ಸಂಭ್ರಮದ ಕಾರ್ಯಕ್ರಮಗಳಲ್ಲಿಯೂ ಇದೇ ರೀತಿಯ ಸಹಕಾರ ಮತ್ತು ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಪ್ರಮಾಣಪತ್ರ ವಿತರಣೆಯ ಪಟ್ಟಿಯನ್ನು ವಾಚಿಸುವಲ್ಲಿ ಶ್ರೀಮತಿ ಸಪ್ನಾ ಮರಕಲ್ ಅವರು ಸಹಕರಿಸಿದರು. ನಂತರ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಹುಮಾನ ವಿಜೇತರ ಹೆಸರುಗಳನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಚಂದ್ರಶೇಖರ್ ಸಾಲ್ಯಾನ್ ಅವರು ಘೋಷಿಸಿದರು.

ಸ್ಪರ್ಧೆಯ ಫಲಿತಾಂಶ:

  • ಪ್ರಥಮ: ಸಾಕ್ಷಿ ಜಗದೀಶ್ ಕರ್ಕೇರ
  • ದ್ವಿತೀಯ: ಪೂರ್ಣಿಮಾ ಸಂಜೀವ ಕರ್ಕೇರ
  • ತೃತೀಯ: ಶೋಭಾ ಪಿ. ಭಟ್
  • ಸಮಾಧಾನಕರ ಬಹುಮಾನ: ಸುನಂದಾ ವಿಲಾಸ್ ದೇವಧರ್, ಧನಾಲಿ ನಿತಿನ್ ಪುತ್ರನ್, ಹಿತಿಶಾ ವೆಂಕಟೇಶ್ ಕಾಂಚನ್, ತೃಪ್ತಿ ಲಕ್ಷ್ಮಣ್ ಕುಲಾಲ್ ಹಾಗೂ ಸುನಿತಾ ಛತ್ರ.

ಕಾರ್ಯಕ್ರಮವನ್ನು ಶ್ರೀಮತಿ ಪ್ರಫುಲ್ಲ ದಿನೇಶ್ ಶೆಟ್ಟಿ ಪಡುಕುಡೂರು ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಅತಿಥಿಗಳ ಪರಿಚಯವನ್ನು ಶ್ರೀಮತಿ ಸುಪ್ರಿಯಾ ಸಚಿನ್ ಪೂಜಾರಿ, ಶ್ರೀಮತಿ ಚೇತನಾ ಶರದ್ ಕೋಟ್ಯಾನ್ ಹಾಗೂ ಶ್ರೀಮತಿ ಸುಜಾತಾ ವಸಂತ್ ಶೆಟ್ಟಿ ಅವರು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಚಂದ್ರಶೇಖರ್ ಸಾಲ್ಯಾನ್ ಅವರ 60ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಸವಿತಾ ಚಂದ್ರಶೇಖರ್ ದಂಪತಿಯನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶ್ರೀಮತಿ ಪೂರ್ಣಿಮಾ ಸಂಜೀವ ಕರ್ಕೇರ ಅವರು ಧನ್ಯವಾದ ಸಮರ್ಪಿಸಿದರು. ಲಘು ಉಪಹಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.



Related posts

ಶ್ರೀ ನಾರಾಯಣ ಗುರು ಭಜನಾ ಮಂಡಳಿ, ಕಾಂದಿವಲಿ ಬಿಲ್ಲವರ ಆಯೋಜನೆಯಲ್ಲಿ ಶನೀಶ್ವರ ಪಾರಾಯಣ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಪೂಜೆ!

Mumbai News Desk

ಸದ್ಗುರು ಶ್ರೀ ಅನಿರುದ್ಧ ಉಪಾಸನಾ ಟ್ರಸ್ಟಿನ ಮೀರಾರೋಡ್ ಉಪಾಸನಾ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ.

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ 66ನೇ ವಾರ್ಷಿಕ ಮಹಾಸಭೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ: ವೈದ್ಯಕೀಯ ನೆರವು ಹಾಗೂ ವಿದ್ಯಾರ್ಥಿವೇತನ ವಿತರಣೆ ಸಮಾರಂಭ

Mumbai News Desk

ಭಾರತ್ ಬ್ಯಾಂಕ್ ನ ಮಲಾಡ್ ಪೂರ್ವದ ಕೊಂಕಣಿಪಾಡದ ಶಾಖೆಗೆ 10 ನೇ ವರ್ಷದ ಸಂಭ್ರಮ.

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಂಸ್ಥೆಯ 11 ನೇ ವಾರ್ಷಿಕೋತ್ಸವ ಸಂಭ್ರಮ.

Mumbai News Desk