ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ, ದುರ್ಗನಗರ, ಏಣಗುಡ್ಡೆ, ಕಟಪಾಡಿ ಕ್ಷೇತ್ರದಲ್ಲಿ ಈ ಬಾರಿಯೂ ನವರಾತ್ರಿ ಮಹೋತ್ಸವವು ತಾ. 11-10-2026ರ ಭಾನುವಾರದಿಂದ ಆರಂಭಗೊಂಡು, ತಾ. 21-10-2026ರ ಬುಧವಾರದವರೆಗೆ ಜರಗಲಿದೆ. ನವರಾತ್ರಿಯ ಸಂದರ್ಭದಲ್ಲಿ ಪ್ರತಿದಿನವೂ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಜೆ ಭಜನಾ ಕಾರ್ಯಕ್ರಮಗಳು ಜರಗಲಿವೆ.
ತಾ. 17-10-2026ರಂದು ಬೆಳಿಗ್ಗೆ ಪ್ರಾರ್ಥನೆ, ಪಂಚಗವ್ಯ, ಅಗ್ನಿಪ್ರತಿಷ್ಠೆ, ಚಂಡಿಕಾಯಾಗದ ಪ್ರಾರಂಭ, ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ಬಳಿಕ ಮಹಾ ಅನ್ನಸಂತರ್ಪಣೆ ಜರಗಲಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಚೌಡೇಶ್ವರಿ ದೇವಿಯ ದರ್ಶನ ಸೇವೆ ಆರಂಭಗೊಳ್ಳಲಿದೆ.
ತಾ. 20-10-2026ರ ಮಂಗಳವಾರ ರಾತ್ರಿ ಶ್ರೀದೇವಿಯ ಮಹಾಪೂಜೆಯ ನಂತರ ಕಲಶ ವಿಸರ್ಜನೆ ನಡೆಯಲಿದೆ. ತಾ. 21-10-2026ರ ಬುಧವಾರ ವಿಜಯದಶಮಿಯಂದು ಬೆಳಿಗ್ಗೆ 10 ಗಂಟೆಗೆ ಹರಕೆಯ ತುಲಾಭಾರ ಸೇವೆ ನಡೆಯಲಿದೆ.
ನವರಾತ್ರಿ ಮಹೋತ್ಸವದಲ್ಲಿ ಭಕ್ತಾದಿಗಳು ಬಂಧುಮಿತ್ರರೊಂದಿಗೆ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಿ, ಶ್ರೀದೇವಿಯ ಗಂಧಪ್ರಸಾದವನ್ನು ಸ್ವೀಕರಿಸಿ, ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ಸಚಿನ್ ಶೆಟ್ಟಿ ಅವರು ಆತ್ಮೀಯವಾಗಿ ವಿನಂತಿಸಿದ್ದಾರೆ.



