30.9 C
Mumbai
June 8, 2026
Mumbai News Kannada
ಸುದ್ದಿ

ಮೊಗವೀರ ಪ್ರೀಮಿಯರ್ ಲೀಗ್ (MPL 2026): ಹರಾಜು ಪ್ರಕ್ರಿಯೆ ಯಶಸ್ವಿ; ₹4 ಲಕ್ಷಕ್ಕೆ ಕುಂದಾಪುರ ಲೆಜೆಂಡ್ಸ್ ಮುಂಚೂಣಿಯಲ್ಲಿ





ಮುಂಬಯಿ (ಜ. 14): ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ, ಮುಂಬಯಿ) ಇದರ ಆಯೋಜನೆಯಲ್ಲಿ ಜನವರಿ 18ರ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಐತಿಹಾಸಿಕ ಮೊಗವೀರ ಪ್ರೀಮಿಯರ್ ಲೀಗ್ (MPL 2026) ಕ್ರಿಕೆಟ್ ಪಂದ್ಯಾಟವು ನಡೆಯಲಿದೆ.

​ಸಮಾಜದ ಯುವ ಸಮುದಾಯವನ್ನು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಪಂದ್ಯಾಟದ ಆಟಗಾರರ ಹರಾಜು ಪ್ರಕ್ರಿಯೆಯು ಸಂಘದ ಅಧ್ಯಕ್ಷರಾದ ಸಂತೋಷ್ ಕೆ. ಪುತ್ರನ್ ಅವರ ಆಡಳಿತದ ದಹಿಸರ್‌ನ ‘ಹೋಟೆಲ್ ಹ್ಯಾಪಿ’ಯಲ್ಲಿ ಯಶಸ್ವಿಯಾಗಿ ಜರುಗಿತು.

​ಈ ಹರಾಜು ಪ್ರಕ್ರಿಯೆಯಲ್ಲಿ ಸಂಘದ ಗೌರವ ಅಧ್ಯಕ್ಷ ಸುರೇಶ್ ಕಾಂಚನ್, ಅಧ್ಯಕ್ಷ ಸಂತೋಷ್ ಕೆ. ಪುತ್ರನ್, ಮಾಜಿ ಅಧ್ಯಕ್ಷರುಗಳಾದ ಗೋಪಾಲ್ ಪುತ್ರನ್, ರಮೇಶ್ ಬಂಗೇರ, ರಾಜು ಮೆಂಡನ್ ವಂಡ್ಸೆ, ವಿನೋದ್ ಕೋಟ್ಯಾನ್ ಮತ್ತು ಪ್ರಜ್ವಲ್ ಸಾಲಿಯಾನ್, ರಘುರಾಮ್ ಚಂದನ್, ಅವಿನಾಶ್ ಪುತ್ರನ್, ಭಾರತಿ ನಾಯ್ಕ್, ಸುನೀಲ್ ಕುಂದರ್, ರಾಜು ಮೊಗವೀರ, ಪ್ರದೀಪ್ ಚಂದನ್, ಸುರೇಶ್ ತೋಳಾರ್, ನಾಗೇಶ್ ತೋಳಾರ್, ಸುಚಿತ್ರ ಪುತ್ರನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

​ಹರಾಜಾದ ತಂಡಗಳು ಮತ್ತು ಮಾಲಕತ್ವದ ವಿವರ

​ಮೊಗವೀರ ಸಮಾಜದ ಬಂಧುಗಳಿಗಾಗಿ ಆಯೋಜಿಸಲಾದ ಈ ಪಂದ್ಯಾಟದಲ್ಲಿ ಕುಂದಾಪುರ ಮತ್ತು ಉಡುಪಿ ಭಾಗದ ಊರುಗಳ ಹೆಸರಿನ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ. ಹರಾಜಿನಲ್ಲಿ ತಂಡಗಳ ವಿವರ ಹೀಗಿದೆ:

ತಂಡದ ಹೆಸರುಮಾಲಕರುಹರಾಜು ಮೊತ್ತ
ಕುಂದಾಪುರ ಲೆಜೆಂಡ್ಸ್ಗೋಪಾಲ್ ಪುತ್ರನ್ (ಮಾಜಿ ಅಧ್ಯಕ್ಷರು)₹4 ಲಕ್ಷ
ಚಿಕ್ಕನ್ಸಾಲ್ ಚಾಲೆಂಜರ್ಸ್ಸಂತೋಷ್ ಕೆ. ಪುತ್ರನ್ (ಅಧ್ಯಕ್ಷರು)₹3.2 ಲಕ್ಷ
ಸೌಪರ್ಣಿಕ ಮರವಂತೆಸುರೇಶ್ ತೋಳಾರ್ ಮತ್ತು ನಾಗೇಶ್ ತೋಳಾರ್₹3.1 ಲಕ್ಷ
ವಂಡ್ಸೆ ವಾರಿಯರ್ಸ್ರಾಜು ಮೆಂಡನ್ ವಂಡ್ಸೆ (ಮಾಜಿ ಅಧ್ಯಕ್ಷರು)₹2.2 ಲಕ್ಷ
ಉಪ್ಪಿನಕುದ್ರು ಕೋಸ್ಟಲ್ ರೈಡರ್ಸ್ಸುರೇಶ್ ಕಾಂಚನ್ (ಗೌರವ ಅಧ್ಯಕ್ಷರು)₹2.1 ಲಕ್ಷ
ಪಡುಕೋಣೆ ಪ್ಯಾಂಥರ್ಸ್ರಮೇಶ್ ಬಂಗೇರ ಮತ್ತು ವಿನೋದ್ ಕೋಟ್ಯಾನ್₹1.6 ಲಕ್ಷ
ನಾವುಂದ ಸೂಪರ್ ಕಿಂಗ್ಸ್ಮಹಾಬಲ ಕುಂದರ್ (ಮಾಜಿ ಅಧ್ಯಕ್ಷರು)₹1.5 ಲಕ್ಷ
ಸಸಿಹಿತ್ಲು ಸೂಪರ್ ಕಿಂಗ್ಸ್ಪ್ರಜ್ವಲ್ ಸಾಲಿಯಾನ್₹1.1 ಲಕ್ಷ
ತೆಗ್ಗರ್ಸೆ ಟೈಗರ್ಸ್ಸುನಿಲ್ ಕುಂದರ್₹1.1 ಲಕ್ಷ
ಸೇನಾಪುರ ಟೈಟಾನ್ಸ್ಪ್ರದೀಪ್ ಚಂದನ್, ರಾಜೀವ ಚಂದನ್, ಚಂದ್ರ ನಾಯ್ಕ್₹1.1 ಲಕ್ಷ
ಉಡುಪಿ ಫೋರ್ಸ್ಗಣೇಶ್ ಕಾಂಚನ್ (ಅಧ್ಯಕ್ಷರು, ಮೊಗವೀರ ವ್ಯವಸ್ಥಾಪಕ ಮಂಡಳಿ)₹1.1 ಲಕ್ಷ
ಕೋಸ್ಟಲ್ ಕಿಂಗ್ಸ್ ಬಟ್ಟೆಕುದ್ರುಭಾಸ್ಕರ್ ಶ್ರೀಯಾನ್₹1 ಲಕ್ಷ
ಮೊಗವೀರ ರಾಯಲ್ಸ್ಸಂಘದ ಮಹಿಳಾ ವಿಭಾಗ₹1 ಲಕ್ಷ
ಬೈಂದೂರು ಉದ್ದಬೆಟ್ಟುಸಂಘದ ದೊಂಬಿವಿಲಿ ಶಾಖೆ₹1 ಲಕ್ಷ
ಬಾಗ್ವಾಡಿ ಕಿಂಗ್ಸ್ 11ಅವಿನಾಶ್ ಪುತ್ರನ್₹1 ಲಕ್ಷ
ಕುಂದಬಾರಂದಾಡಿ ಸ್ಟ್ರೈಕರ್ಸ್ರಘುರಾಮ್ ಚಂದನ್₹1 ಲಕ್ಷ

​ಜ. 10 ರಂದು ನಡೆದ ಈ ಹರಾಜಿನಲ್ಲಿ ಕುಂದಾಪುರ ಲೆಜೆಂಡ್ಸ್ ತಂಡವು ಅತಿ ಹೆಚ್ಚು ಮೊತ್ತಕ್ಕೆ (₹4 ಲಕ್ಷ) ಹರಾಜಾಗುವ ಮೂಲಕ ಮುಂಚೂಣಿಯಲ್ಲಿದೆ. ಐದು ತಂಡಗಳು ತಲಾ ₹1 ಲಕ್ಷದ ಕನಿಷ್ಠ ಬಿಡ್ ಪಡೆದುಕೊಂಡಿವೆ.

ಜನವರಿ 18ರಂದು ನಗರದ ಗಣ್ಯರ ಉಪಸ್ಥಿತಿಯಲ್ಲಿ ಕ್ರಿಕೆಟ್ ಪಂದ್ಯಾಟವು ಉದ್ಘಾಟನೆಗೊಳ್ಳಲಿದ್ದು, ಸಂಜೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಪ್ರಪ್ರಥಮ ಬಾರಿಗೆ ಜಾತೀಯ ಸಂಘಟನೆಯೊಂದು ಇಷ್ಟು ವ್ಯವಸ್ಥಿತವಾಗಿ ತಂಡಗಳನ್ನು ಹರಾಜು ಮಾಡುವ ಮೂಲಕ ಪಂದ್ಯಾಟ ಆಯೋಜಿಸುತ್ತಿರುವುದು ವಿಶೇಷವಾಗಿದೆ. ಈ ಕ್ರೀಡಾಕೂಟವು ಮೊಗವೀರ ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಮತ್ತು ಯುವಕರನ್ನು ಸಂಘಟನೆಯತ್ತ ಸೆಳೆಯಲು ಸ್ಪೂರ್ತಿಯಾಗಲಿದೆ ಎಂದು ಅಧ್ಯಕ್ಷ ಸಂತೋಷ್ ಕೆ. ಪುತ್ರನ್ ತಿಳಿಸಿದ್ದಾರೆ.



Related posts

ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಬೆಳ್ಳಿ ಹಬ್ಬ ಸಮಾರೋಪ . ವಿಶೇಷ ಸಂಚಿಕೆ ಲೋಕಾರ್ಪಣೆ.

Mumbai News Desk

ವಿಶ್ವನಾಥ ಯು. ಮಾಡಾ ನಿಧನಕ್ಕೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಸಂತಾಪ

Mumbai News Desk

ಶ್ರೀನಿವಾಸ ಜೋಕಟ್ಟೆ ಅವರಿಗೆ ‘ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ’ ಪ್ರದಾನ

Mumbai News Desk

ಶ್ರೀನಿವಾಸ ಜೋಕಟ್ಟೆಯವರ ‘ಅದೆಲ್ಲಾ ಬಿಟ್ಟು’ ಕತಾಸಂಕಲನಕ್ಕೆಕನ್ನಡ ಸಾಹಿತ್ಯ ಪರಿಷತ್ ನ ಕೆ. ವಾಸುದೇವಾಚಾರ್ ದತ್ತಿ ಪ್ರಶಸ್ತಿ

Mumbai News Desk

ಮುಂಬೈ ಮೇಯರ್ ಪಟ್ಟ ಅಲಂಕರಿಸಿದ್ದ ಮೊದಲ ಬಿಜೆಪಿ ನಾಯಕ ಕನ್ನಡಿಗ ಡಾ. ಪ್ರಭಾಕರ್ ಪೈ

Mumbai News Desk

ಪಿಯುಸಿ ವಿಜ್ಞಾನ ವಿಭಾಗ ಪರೀಕ್ಷೆ ಕುಮಾರಿ ಜಾನ್ವಿ ರಾಜೇಶ್ ಕುಲಾಲ್ ರವರಿಗೆ 87%_ಅಂಕ

Mumbai News Desk