October 12, 2026
Mumbai News Kannada
ತುಳುನಾಡು

ಕೋಸ್ಟಲ್ ಫಿಲ್ಮ್ ಅವಾರ್ಡ್ಸ್: “ಜೈ” ತುಳು ಚಿತ್ರದ ನಟನೆಗೆ ಅಕ್ಷರ್ ಜಗನ್ನಾಥ್ ಶೆಟ್ಟಿ ಬಾಳಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ



ಮಂಗ‌ಳೂರಿನ ಮುಲ್ಕಿ ಸುಂದರ್ ರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ಸ್ಯಾಂಡಿಸ್ ಕಂಪನಿಯ ಆಶ್ರಯದಲ್ಲಿ ಜರುಗಿದ ಪ್ರತಿಷ್ಠಿತ ಕೋಸ್ಟಲ್ ಫಿಲಂ ಅವಾರ್ಡ್ಸ್ ಸಮಾರಂಭದಲ್ಲಿ ಬಾಲನಟ ಅಕ್ಷರ್ ಜೆ. ಶೆಟ್ಟಿ ಅವರಿಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ ಲಭಿಸಿದೆ. ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿಬಂದ “ಜೈ” ತುಳು ಸಿನಿಮಾದಲ್ಲಿನ ಅದ್ಭುತ ಅಭಿನಯಕ್ಕಾಗಿ ಅಕ್ಷರ್ ಜೆ. ಶೆಟ್ಟಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಶಸ್ತಿ ವಿಜೇತ ಬಾಲನಟ ಅಕ್ಷರ್ ಜೆ. ಶೆಟ್ಟಿ ಅವರು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರು ಹಾಗೂ ಪತ್ರಿಕಾ ಮಾಧ್ಯಮ ರಂಗದಲ್ಲಿ ಸುದೀರ್ಘ ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಜಗನ್ನಾಥ್ ಶೆಟ್ಟಿ ಬಾಳ ಅವರ ಸುಪುತ್ರನಾಗಿದ್ದಾರೆ. ಚಿತ್ರರಂಗದ ಗಣ್ಯರು ಹಾಗೂ ಕಲಾಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಭವ್ಯ ಸಮಾರಂಭದಲ್ಲಿ ಬಾಲಪ್ರತಿಭೆಯ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಶುಭ ಹಾರೈಸಲಾಗಿದೆ.



Related posts

ಹೆಜಮಾಡಿ ಗರಡಿಯ ಕಾರ್ಣಿಕ: ನೇಮೋತ್ಸವದಲ್ಲಿ ಕಳವಾಗಿದ್ದ ಸರ 24 ಗಂಟೆಯಲ್ಲೇ ಪತ್ತೆ; ವಾರಸುದಾರರಿಗೆ ಹಸ್ತಾಂತರ

Mumbai News Desk

ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತುಪೌಳಿ ಕಾಮಗಾರಿಗೆ ಶಿಲಾ ಮುಹೂರ್ತ

Mumbai News Desk

*ಕಲಾ ಸಾಧನ ಸಂಸ್ಥೆ ಸಮರ್ಪಿಸಿದ ಸ್ವರದಾರ ಸಂಗೀತ ಹಬ್ಬ, ಸಂಗೀತ ಆರೋಗ್ಯಕ್ಕೆ ಔಷಧಿ ಇದ್ದಂತೆ;: ಐಕಳ ಹರೀಶ್ ಶೆಟ್ಟಿ*

Mumbai News Desk

ಪೊಲಿಪು ಕಾಂಚನ್ ಮೂಲಸ್ಥಾನ – ನಾಗರ ಪಂಚಮಿ ಆಚರಣೆ, ವಾರ್ಷಿಕ ಮಹಾಸಭೆ,ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ

Mumbai News Desk

ಧಾಖಲೆಯೊಂದಿಗೆ ತಿರುವೈಲು ಕಂಬಳ ಸಂಪನ್ನ: ಮುಂಬೈಯ ಪುರೋಹಿತರಾದ ಪ್ರವೀಣ್ ಭಟ್ ಅವರಿಗೆ ಸನ್ಮಾನ

Mumbai News Desk

ಪಡುಬಿದ್ರಿಯಲ್ಲಿ ಸೆರಾಕೇರ್ ವತಿಯಿಂದ ಸಡಗರದ ‘ಆಟಿದೊಂಜಿ ದಿನ’

Mumbai News Desk