October 12, 2026
Mumbai News Kannada
ಪ್ರಕಟಣೆ

ಮೇ 31, 2026 ರಂದು ಕುಮಾರಿ ಲಿಖಿತಾ ರತ್ನಾಕರ ಕರ್ಕೇರರ ಭರತನಾಟ್ಯಂ ಪ್ರಥಮ ರಂಗ ಪ್ರವೇಶ



ಕಳೆದ ಐದು ವರ್ಷಗಳಿಂದ ಬೆಂಗಳೂರಿನ ಸಾಫ್ಟ್‌ವೇರ್‌ ಕಂಪೆನಿಯೊಂದಲ್ಲಿ ಕ್ವಾಲಿಟಿ ಎನಲಿಸ್ಟರಾಗಿ ದುಡಿಯತ್ತಿರುವ ಕುಮಾರಿ ಲಿಖಿತಾ ರತ್ನಾಕರ ಕರ್ಕೇರರಿಗೆ ಕಛೇರಿಯ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಬಿಡುವು ಮಾಡಿಕೊಂಡು ಭರತನಾಟ್ಯ ಕಲಿಯಬೇಕೆಂಬ ಹಂಬಲವಿತ್ತು. ಅದಕ್ಕಾಗಿಯೇ ಅವರು ಬೆಂಗಳೂರಿನ ಹ್ರೀಮ್‌ಕರಿ ಸ್ಕೂಲ್‌ ಆಫ್‌ ಡಾನ್ಸ್‌ ಶಾಲೆಗೆ ಪ್ರವೇಶ ಪಡೆದರು. ಅಲ್ಲಿ ಕಳೆದ ಎರಡು ವರ್ಷಗಳಿಂದ ಗುರುಗಳಾದ ಆಚಾರ್ಯ ಪ್ರತಿಭಾ ಸತ್ಯವಾನನ್‌ರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ಈಗ ಲಿಖಿತಾರ ಭರತನಾಟ್ಯಂ ಪ್ರಥಮ ರಂಗಪ್ರವೇಶ ಕಾರ್ಯಕ್ರಮವನ್ನು ಇದೇ ರವಿವಾರ ಮೇ 31. 2026 ರಂದು ಬೆಳಗ್ಗೆ ಗಂಟೆ 10-15ಕ್ಕೆ ಬೆಂಗಳೂರಿನ ಮಲ್ಲೆಶ್ವರಂನಲ್ಲಿರುವ ಸೇವಾ ಸದನ ಸಭಾಗೃಹದಲ್ಲಿ ಆಯೋಜಿಸಲಾಗಿದೆ. ಇದರ ಕೊರಿಯೊಗ್ರಫಿಯು ಪ್ರತಿಭಾ ಸತ್ಯವಾನನ್‌ರದ್ದಾಗಿದ್ದು ನಟ್ಟುವಾಂಗಮ್‌ಲ್ಲಿ ಕೂಡಾ ಅವರೇ ಸಹಕರಿಸುತ್ತಾರೆ. ವೋಕಲ್‌ ವಿದೂಷಿ ಹರ್ಷಿತಾ ವಿದ್ಯಾರದ್ದಾಗಿದ್ದು ಮೃದಂಗನಲ್ಲಿ ವಿದ್ವಾನ್‌ ಜನಾರ್ಧನ, ಕೊಳಲಿನಲ್ಲಿ ವಿದ್ವಾನ್‌ ಸ್ಕಂದ ಕುಮಾರ್‌ ಸಾಥ್‌ ನೀಡುತ್ತಾರೆ.
ಭರತನಾಟ್ಯಂ ಪ್ರಥಮ ರಂಗ ಪ್ರವೇಶವು ಭರತನಾಟ್ಯವನ್ನು ಕಲಿಯುತ್ತಿರುವವರಿಗೆ ಮಾತ್ರವಲ್ಲದೆ ಅವರ ಹೆತ್ತವರಿಗೂ ಒಂದು ಅವಿಸ್ಮರಣೀಯ ಅನುಭವವಾಗಿರುತ್ತದೆ. ಇದು ಸಾರ್ವಜನಿಕರ ಮುಂದೆ ತಮ್ಮ ಕಲಾ ಪ್ರೌಢಿಮೆಯನ್ನು ಪ್ರಸ್ತುತಪಡಿಸುವ ಒಂದು ಸುವರ್ಣಾಕಾಶವಾಗಿದೆ.
ಕ್ರೀಡೆಗಳಲ್ಲೂ ವಿಶೇಷ ಆಸಕ್ತಿ ಹೊಂದಿರುವ ಬಹುಮುಖ ಪ್ರತಿಭೆಯ ಕುಮಾರಿ ಲಿಖಿತಾ ಕಾಪುವಿನ ದಿ. ರತ್ನಾಕರ ಎಸ್‌. ಕರ್ಕೇರ ಮತ್ತು ಹೆಜಮಾಡಿ ಶ್ರೀಮತಿ ಸವಿತಾ ಆರ್‌. ಕರ್ಕೇರರ ಸುಪುತ್ರಿ. ಈ ಕಾರ್ಯಕ್ರಮಲ್ಲಿ ಕಲಾಪ್ರೇಮಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಕೇಳಿಕೊಳ್ಳಲಾಗಿದೆ. ಕಾರ್ಯಕ್ರಮದ ನಂತರ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಹಚ್ಚಿನ ವಿವರಗಳಿಗಾಗಿ 9819321186 ಈ ನಂಬ್ರದಲ್ಲಿ ಸೋಮನಾಥ ಎಸ್‌.ಕರ್ಕೇರನ್ನುಸಂಪರ್ಕಿಸಬಹುದಾಗಿದೆ.



Related posts

ನಮ ಜವನೆರ್ (ರಿ) ಮೀರಾ ಭಾಯಾಂದರ್: “ಶ್ರೀ ಕೃಷ್ಣ ಜನ್ಮೋತ್ಸವ 2026” ಪೂರ್ವಭಾವಿ ಸಭೆ

Mumbai News Desk

ಶಹಾಡ್: ಇಂದು (ಜುಲೈ 17)’ಜಾಂಬವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ

Mumbai News Desk

ವಿದ್ಯಾವಿಹಾರ್ ಪಶ್ಚಿಮದ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ : ಜುಲೈ 11ರಂದು ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ.

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ : ಡಿ. 15ರಂದು ಕಲ್ಲುರ್ಟಿ -ಪಂಜುರ್ಲಿ -ಗುಳಿಗ ದೈವದ ನೇಮ (ಕೋಲ )

Mumbai News Desk

ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಮುಂಬಯಿ ಬಿಲ್ಲವರಿಂದ ಎ. 25ರಂದು ಭಜನಾ ಮಂಡಳಿ ಉದ್ಘಾಟನೆ

Mumbai News Desk

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ, ಇರಾನಿ ಕಾಲೋನಿ ಮಲಾಡ್.ಭಕ್ತಿ ಸಂಭ್ರಮದೊಂದಿಗೆ ಶನಿ ಜಯಂತಿ ಆಚರಣೆ.

Mumbai News Desk