30 C
Mumbai
September 19, 2026
Mumbai News Kannada
ಸುದ್ದಿ

ಮುಂಬೈ : ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಪ್ರವೇಶ ಪ್ರಾರಂಭ





*ಮುಂಬೈಯ ಪ್ರತಿಷ್ಟಿತ ಜಾತಿಯ ಸಂಸ್ಥೆಗಳಲ್ಲಿ ಒಂದಾದ ಬಿಲ್ಲವರ ಅಸೋಸಿಯೇಶನ್ ಇದು ನಡೆಸಿಕೊಂಡು ಬರುತ್ತಿರುವ *ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯು* 1961ರಲ್ಲಿ ಪ್ರಾರಂಭಗೊಂಡು ಈದೀಗ 66ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಈ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡಲಾಗುತ್ತಿದೆ.ಶೈಕ್ಷಣಿಕ ವರ್ಷ 2026-2027ರ ಪ್ರವೇಶ ಪ್ರಕ್ರಿಯು ಪ್ರಾರಂಭಗೊಂಡಿದೆ. ಈ ಶಾಲೆಯಲ್ಲಿ ಹೊಸದಾಗಿ ಪ್ರವೇಶ ಪಡೆಯುವ ಆಸಕ್ತ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಶಾಲೆಗೆ ಪ್ರಶಸ್ತಿ ಪಡೆದ ಹೆಗ್ಗಳಿಕೆ

ನಮ್ಮ ಶಾಲೆಯ ವಿದ್ಯಾರ್ಥಿಗಳು ಹತ್ತನೇ ವರ್ಗದ ಬೋರ್ಡ ಪರೀಕ್ಷೆಯಲ್ಲಿ ಹನ್ನೆರಡು ಬಾರಿ ನೂರು ಫಲಿತಾಂಶ ಪಡೆದು ಪ್ರಗತಿ ಪಥದತ್ತ ಸಾಗಿಕೊಂಡು ಬರುತ್ತಿರುವ ಸಾಧನೆಯನ್ನು ಪರಿಗಣಿಸಿ Maharashtra Education Today.Com ವತಿಯಿಂದ 2023-2024 ರಲ್ಲಿ ರಾಷ್ಟ್ರ ಮಟ್ಟದ ವಿಶೇಷವಾಗಿ ಜ್ಯೂರಿ ಅವಾರ್ಡ ಮತ್ತು 2024-2025 ರಲ್ಲಿ ಬೆಸ್ಟ್ ಸ್ಕೂಲ್ ಡೈನಾಮಿಕ್ ಅವಾರ್ಡ್ ದೊರಕಿದೆ.

☀️ಮಾತೃ ಸಂಸ್ಥೆಯಿಂದ ಉಚಿತ ಶಿಕ್ಷಣ☀️

ಮಾತೃ ಸಂಸ್ಥೆಯು ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡುವ ಮೂಲಕ ಸಹಕರಿಸಲಾಗುತ್ತದೆ.ನಮ್ಮ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪಠ್ಯ ಪುಸ್ತಕ, ಯೂನಿಫಾರ್ಮ, ಬಸ್ಸು ಪಾಸ, ಮತ್ತು ಟ್ರೈನ ಪಾಸ್ ಮತ್ತು ಮಾಸುಮ್ ಪರಿವಾರದ ಕಡೆಯಿಂದ ಅಲ್ಪೋಪಹಾರ ನೀಡಿ ಸಹಕರಿಸುತ್ತದೆ. ಅಷ್ಟೇ ಅಲ್ಲದೇ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತಿದೆ.ಮತ್ತು ರಜೆಯ ಸಮಯದಲ್ಲಿಯೂ ವಿಶೇಷ ಕ್ಲಾಸುಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗುತ್ತದೆ. ನಮ್ಮ ಮಾತೃ ಸಂಸ್ಥೆಯು ಶಾಲೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕೊಡುತ್ತದೆ. ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಮಾಸುಮ ಸಂಸ್ಥೆಯ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಸಂಪೂರ್ಣ ಫೀಸು ಕೊಡಿಸಿ ಕಾಲೇಜು ಶಿಕ್ಷಣ ಪಡೆಯಲು ಅನುಕೂಲ ಮಾಡಿ ಕೊಡಲಾಗುತ್ತದೆ.

ಪ್ರತಿಭಾ ವಿದ್ಯಾರ್ಥಿಗಳಿಗೆ ಚಿನ್ನದ ಪದಕ☀️

ನಮ್ಮ ಶಾಲೆಯ ವಿದ್ಯಾರ್ಥಿಗಳು 10ನೇ ಬೋರ್ಡ ಪರೀಕ್ಷೆಯಲ್ಲಿ ಪಾಸಾಗಿ ಹತ್ತು ಬಾರಿ ನೂರು ಫಲಿತಾಂಶ ಪಡೆದ ಹಿರಿಮೆ ಈ ಶಾಲೆಗಿದೆ.ನಮ್ಮ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯರು ಹತ್ತನೇ ಬೋರ್ಡ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರೆ,ಅಂತಹ ಪ್ರತಿಭಾವಂತ
ವಿದ್ಯಾರ್ಥಿಗಳಿಗೆ ಶಾಲೆಯ ವಾರ್ಷಿಕೋತ್ಸವದಲ್ಲಿ ದಿ ಎಂ ಬಿ.ಕುಕ್ಯಾನ್ ಪ್ರಾಯೋಜಿತ ಚಿನ್ನದ ಪದಕವನ್ನು
ಮಾತೃ ಸಂಸ್ಥೆಯ ಅಧ್ಯಕ್ಷರಿಂದ ಕೊಟ್ಟು ಗೌರವಿಸಲಾಗುತ್ತದೆ. ಶಾಲೆಯಲ್ಲಿ ವಾರ್ಷಿಕ ಕ್ರಿಡೋತ್ಸವ,ಮಾಸುಮ ಸಂಸ್ಥೆಯು ಆಯೋಜಿಸುತ್ತಿ
ರುವ ಅಂತರ್ ರಾತ್ರಿ ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವ ಮತ್ತು ಸಾಂಸ್ಕೃತಿಕವಾಗಿ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ವಾರ್ಷಿಕ ಪಿಕ್ನಿಕ್ ವ್ಯವಸ್ಥೆಯನ್ನು ಕೂಡ ಮಾಡಲಾಗುವುದು.ನಮ್ಮ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯು ಮೂರು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಬಾಳಿಗೆ ಬೆಳಕು ಹರಿಸಿದೆ.

ಕಲಿಕೆಗೆ ವಯಸ್ಸಿನ ನಿರ್ಬಂಧವಿಲ್ಲ

ನಮ್ಮ ರಾತ್ರಿ ಪ್ರೌಢ ಶಾಲೆಯಲ್ಲಿ 8ನೇ ವರ್ಗದಿಂದ 10ನೇ ವರ್ಗದವರಿಗೆ ಪ್ರೌಢ ಶಿಕ್ಷಣವನ್ನು ನೀಡಲಾಗುತ್ತಿದೆ.ವಿದ್ಯಾರ್ಥಿಗಳಿಗೆ ವಿಷಯಕ್ಕನುಸಾರ ನುರಿತ ಅಧ್ಯಾಪಕರಿಂದ ಬೋಧನೆಯನ್ನು ನೀಡಲಾಗುತ್ತಿದೆ.ರಾತ್ರಿ ಶಾಲೆಯ ಕಲಿಯುವ ವಿದ್ಯಾರ್ಥಿಗಳಿಗೆ ವಯಸ್ಸಿನ ನಿರ್ಬಂಧವಿಲ್ಲ. ಕಲಿಕೆಯಲ್ಲಿ ಅರ್ಧದಲ್ಲಿ ಬಿಟ್ಟು ವಿದ್ಯಾರ್ಥಿಗಳು ಕೂಡಾ ನಮ್ಮ ರಾತ್ರಿ ಶಾಲೆಗೆ ಸೇರಿ ಶಿಕ್ಷಣವನ್ನು ಮುಂದುವರಿಸಬಹುದಾಗಿದೆ.
ನಮ್ಮ ಶಾಲೆಯಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರು ಮತ್ತು ಹಿರಿಯರು ಕೂಡಾ ಅಭ್ಯಾಸ ಮಾಡುತ್ತಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಕಲಿತು ಪ್ರಸ್ತುತ ಉನ್ನತ ಮಟ್ಟದ ಕೋರ್ಸ್ ತಗೆದುಕೊಂಡು ವ್ಯಾಸಂಗ ಮಾಡುತ್ತಿದ್ದಾರೆ.

2026-2027 ರ ಶೈಕ್ಷಣಿಕ ವರ್ಷದ ಪ್ರವೇಶ ಪಡೆಯಲು ಆಸಕ್ತಿ ವಿದ್ಯಾರ್ಥಿಗಳಿಂದ ಜೂಲೈ 31ರವರೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಬಿಲ್ಲವರ ಅಸೋಸಿಯೇಶನ್ ಇದರ ಗೌರವ ಪ್ರದಾನ ಕಾರ್ಯದರ್ಶಿ ಹರೀಶ ಜಿ ಸಾಲಿಯಾನ್ (9833818123) ಶಾಲಾ ಸಮಿತಿಯ ಕಾರ್ಯಧ್ಯಕ್ಷ ರವಿ ಸನಿಲ್ (9820067621) ಶಾಲಾ ಸಮಿತಿಯ ಸಲಹೆಗಾರ ರವೀಂದ್ರ ಅಮೀನ್ (9820249499) ಮುಖ್ಯಾಧ್ಯಾಪಕ ಮಲ್ಲಿಕಾರ್ಜುನ ಬಡಿಗೇರ (9892325894) ಶಿಕ್ಷಕ ಸಿದ್ಧಾರಾಮ ದಸಮಾನೆ (9920330649) ಕ್ಲಾರ್ಕ್ ನಮಿತಾ ಸುವರ್ಣ (8689856939) ಇವರನ್ನು ಸಂಪರ್ಕಿಸಬಹುದು.

ಶಾಲೆಯ ವಿಳಾಸ ಮತ್ತು ಸಮಯ
GURU NARAYANA NIGHT HIGH SCHOOL C/O MUNICIPAL SCHOOL BUILDING NEAR H/EAST WARD OFFICE PRABHAT COLONY SANTACRUZ (EAST) MUMBAI -400055-ಶಾಲೆಯ ಸಮಯ ಸಾಯಂಕಾಲ 6ರಿಂದ ರಾತ್ರಿ 10.00ರ ತನಕ ಇರುತ್ತದೆ.ಈ ವಿಳಾಸಕ್ಕೆ ಸಂಪರ್ಕಿಸಿ ಜುಲೈ 31ರ ಒಳಗೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು.



Related posts

ಉಡುಪಿ : ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಮಗುಚಿ ಆತಂಕ: ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ತಪ್ಪಿದ ಭಾರಿ ಅನಾಹುತ

Mumbai News Desk

*ಬಂಟರ ಯಾನೆ ನಾಡವರ ಮಾತೃ ಸಂಘ: ಅಧ್ಯಕ್ಷರಾಗಿ ಕೆ ಅಜಿತ್ ಕುಮಾರ್ ರೈ ಮಾಲಾಡಿ ಪುನರಾಯ್ಕೆ*

Mumbai News Desk

ಹಾಸ್ಯ ನಟ ರಾಕೇಶ್‌ ಪೂಜಾರಿ ಮನೆಗೆ ಕೊನೆಗೂ ರಿಷಬ್‌ ಶೆಟ್ಟಿ ದಂಪತಿ ಭೇಟಿ

Mumbai News Desk

ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಬಿಲ್ಲವ ಸಮಾಜದ ಮುಖಂಡರಿಂದ ಅಭಿನಂದನೆ

Mumbai News Desk

ಡಹಾಣೂವಿನ ಸಮಾಜ ಸೇವಕ ಅಶೋಕ್  ಎಸ್. ಶೆಟ್ಟಿ ಉಳೆಪಾಡಿ ಇವರಿಗೆ ಸನ್ಮಾನ.

Mumbai News Desk

ತುರ್ತು ವಿನಂತಿ: ಕಾಣೆಯಾಗಿರುವ ನಿಶಾಂತ್ ಬಂಗೇರ ಅವರ ಪತ್ತೆಗೆ ಸಹಕರಿಸಿ

Mumbai News Desk