October 12, 2026
Mumbai News Kannada
ಸುದ್ದಿ

ಕುಲಾಲ ಸಮಾಜದ ಮಹಾದಾನಿ ಸುನಿಲ್ ಸಾಲ್ಯಾನ್ ಪ್ರಾಯೋಜಕತ್ವದಲ್ಲಿ ಬ್ಯಾಂಕಾಕ್, ಥೈಲ್ಯಾಂಡ್ ಪ್ರವಾಸ



ಮುಂಬೈ: ಕುಲಾಲ ಸಂಘ ಮುಂಬೈನ ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ, ಮಹಾದಾನಿ ಸುನಿಲ್ ಸಾಲ್ಯಾನ್ ದಂಪತಿ ವರ್ಷದಲ್ಲಿ ಹಲವಾರು ಬಾರಿ ದೇಶ-ವಿದೇಶಗಳಿಗೆ ಹಿರಿಯ ನಾಗರಿಕರು ಹಾಗೂ ಪ್ರವಾಸಾಸಕ್ತರನ್ನು ಅತಿ ಕಡಿಮೆ ವೆಚ್ಚದಲ್ಲಿ, ಇನ್ನು ಕೆಲವರಿಗೆ ತಮ್ಮ ಸ್ವಂತ ಖರ್ಚಿನಲ್ಲೇ ಪ್ರವಾಸ ಕಲ್ಪಿಸುವ ಯೋಜನೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಈ ಬಾರಿ ಥೈಲ್ಯಾಂಡ್‌ನ ಬ್ಯಾಂಕಾಕ್ ಮತ್ತು ಪಟ್ಟಾಯ ಪ್ರವಾಸವನ್ನು ಅಕ್ಟೋಬರ್ 7ರಿಂದ 12ರವರೆಗೆ ಆಯೋಜಿಸಲಾಗಿತ್ತು. ಅಲ್ಲಿನ ಪ್ರಸಿದ್ಧ ಬೌದ್ಧ ದೇವಾಲಯಗಳು, ಚಿನ್ನದ ಹೊಳಪಿನ ಅರಮನೆಗಳು, ಆಧುನಿಕ ಕಟ್ಟಡಗಳು, ಚಾವೋ ಫ್ರಯಾ ನದಿಯ ಸೌಂದರ್ಯ ಹಾಗೂ ದೀಪಾಲಂಕಾರದ ರಮಣೀಯ ತಾಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿತ್ತು. ಈ ಪ್ರವಾಸದಲ್ಲಿ ಮುಂಬೈ ಮತ್ತು ಮಂಗಳೂರಿನ ಕುಲಾಲ ಸಮಾಜದ ಹಿರಿಯ ನಾಗರಿಕರು ಹಾಗೂ ಯುವ ಸಮುದಾಯದವರು ಪಾಲ್ಗೊಂಡಿದ್ದರು. ಪ್ರವಾಸಿಗರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ, ಕೆಲವರಿಗೆ ಸುನಿಲ್ ಸಾಲ್ಯಾನ್ ಅವರೇ ಸಂಪೂರ್ಣ ವೆಚ್ಚ ಭರಿಸಿ ಈ ಪ್ರವಾಸವನ್ನು ಆಯೋಜಿಸಿದ್ದರು.

ತಮ್ಮ ಆದಾಯದ ಬಹುಪಾಲನ್ನು ಸಮಾಜದ ಬಾಂಧವರ ಆರ್ಥಿಕ ನೆರವಿಗೆ, ಹಿರಿಯ ನಾಗರಿಕರ ಪ್ರವಾಸಕ್ಕೆ ಹಾಗೂ ಅನಾಥಾಶ್ರಮಗಳಿಗೆ ಧನಸಹಾಯ ನೀಡಲು ಮೀಸಲಿಡುತ್ತಾ ಬಂದಿರುವ ಸುನಿಲ್ ಸಾಲ್ಯಾನ್ ಮತ್ತು ದೇವಕಿ ಸಾಲ್ಯಾನ್ ದಂಪತಿ, ಕುಲಾಲ ಸಂಘ ಮುಂಬೈನ ಬಹುಕೋಟಿ ವೆಚ್ಚದ ಮಂಗಳೂರಿನ ‘ಕುಲಾಲ ಭವನ’ ನಿರ್ಮಾಣಕ್ಕೂ ಅತ್ಯಂತ ದೊಡ್ಡ ಮೊತ್ತದ ದೇಣಿಗೆ ನೀಡಿದ್ದಾರೆ.



Related posts

ಕುತ್ಯಾರು ವಿದ್ಯಾದಾಯಿನಿ ಹಿ.ಪ್ರಾ.ಶಾಲೆ ಶತಸಂವತ್ಸರೋತ್ಸವ

Mumbai News Desk

ಕೊಂಕಣ ರೈಲು ಮಾರ್ಗ ದ್ವಿಗುಣಗೊಳಿಸುವಂತೆ ಕೇಂದ್ರಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

Mumbai News Desk

ಆಯೋದ್ಯ ಶ್ರೀರಾಮ ಮಂದಿರದಲ್ಲಿ ಹರೀಶ್ ಪೂಜಾರಿ ಅವರಿಂದ ಸೇಕ್ಸೋಪೋನ್ ವಾದನ

Mumbai News Desk

SSLC ಪರೀಕ್ಷೆ : 90% ಅಂಕ ಪಡೆದ ನವ್ಯ ಎನ್ ಸುವರ್ಣ

Mumbai News Desk

ರಕ್ತದಾನ ಸೇವೆಯ ಧ್ಯೇಯದೊಂದಿಗೆ ಮಸ್ಕತ್‌ಗೆ ಸತೀಶ್ ಸಾಲ್ಯಾನ್

Mumbai News Desk

ದುಬಾಯಿಯಲ್ಲಿ ಸಾಧಕರಿಗೆ ಸಂಮಾನದ ಜೊತೆ ದಶಮಾನದ ಸಂಭ್ರಮಜೂ.29 ರಂದು ಏಳು ಮಂದಿ ಸಾಧಕರಿಗೆ ಸನ್ಮಾನ ಮೂರು ಸಾಧಕ ಸಂಸ್ಥೆಗಳಿಗೆ ಗೌರವ

Mumbai News Desk