October 12, 2026
Mumbai News Kannada
ಸುದ್ದಿ

ಡಲ್ಲಾಸ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ಭವ್ಯ ಗುರುವಂದನೆ



ಭಗವದ್ಗೀತೆ ವಿಶ್ವಮಾನವತೆಯ ಕಲ್ಯಾಣಕ್ಕಾಗಿ; ಶ್ರೀಕೃಷ್ಣನ ಮೂಲಕ ಬೆಸೆಯುವ ಸಂಬಂಧಗಳೇ ಸಾರ್ಥಕ: ಪುತ್ತಿಗೆ ಶ್ರೀಗಳು

ಡಲ್ಲಾಸ್ (ಅಮೆರಿಕ), ಅ. 12: ಉಡುಪಿ ಶ್ರೀಕೃಷ್ಣ ಮಠದ ಐತಿಹಾಸಿಕ ಚತುರ್ಥ ವಿಶ್ವ ಗೀತಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿ, ಪರ್ಯಾಯೋತ್ತರ ವಿಶ್ವಸಂಚಾರ ಕೈಗೊಂಡಿರುವ ಪರಮಪೂಜ್ಯ ಯತಿಕುಲ ಚಕ್ರವರ್ತಿ ಡಾ. ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಡಲ್ಲಾಸ್‌ನಲ್ಲಿ ಭಕ್ತರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಭವ್ಯ ಗುರುವಂದನೆ ಸಲ್ಲಿಸಲಾಯಿತು.

ಗುರುವಂದನೆಯನ್ನು ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದ ಶ್ರೀಪಾದರು, “ಭಗವದ್ಗೀತೆ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ; ಅದು ಸಮಸ್ತ ವಿಶ್ವದ ಕಲ್ಯಾಣಕ್ಕಾಗಿ ಶ್ರೀಕೃಷ್ಣನು ನೀಡಿದ ದಿವ್ಯಜ್ಞಾನ. ಜೀವನದ ಸಮಸ್ಯೆಗಳನ್ನು ಧೈರ್ಯ ಮತ್ತು ವಿವೇಕದಿಂದ ಎದುರಿಸಲು ಗೀತೆ ಮಾರ್ಗದರ್ಶನ ನೀಡುತ್ತದೆ. ಕುಟುಂಬದ ಪ್ರತಿಯೊಂದು ಸಂಬಂಧವನ್ನೂ ಶ್ರೀಕೃಷ್ಣನ ಅನುಗ್ರಹವೆಂದು ಭಾವಿಸಿದಾಗ ಬದುಕು ಸಾರ್ಥಕವಾಗುತ್ತದೆ. ನಮ್ಮ ವಿಶ್ವ ಗೀತಾ ಪರ್ಯಾಯದಲ್ಲಿ ಜಗತ್ತಿನ ವಿವಿಧ ದೇಶಗಳ ಭಕ್ತರು ಪಾಲ್ಗೊಂಡಿದ್ದು, ಕೋಟಿ ಗೀತಾ ಲೇಖನ ಯಜ್ಞದಲ್ಲಿ ಕೆಲವರು ಹತ್ತು, ಇಪ್ಪತ್ತು, ನೂರು ಬಾರಿ ಗೀತೆ ಬರೆದು ಅಪಾರ ಆನಂದ ಅನುಭವಿಸಿರುವುದು ಗೀತೆಯ ಮಹಿಮೆಗೆ ಸಾಕ್ಷಿಯಾಗಿದೆ” ಎಂದರು.

“ವೇಗವಾಗಿ ಬೆಳೆಯುತ್ತಿರುವ ಡಲ್ಲಾಸ್‌ನಲ್ಲಿ ಶ್ರೀಕೃಷ್ಣ ವೃಂದಾವನವು ವಿಶಾಲವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಯಾಗಬೇಕು. ಇದಕ್ಕಾಗಿ ಮತ್ತೊಂದು ವಿಶಾಲವಾದ ಸ್ಥಳವನ್ನು ಪರಿಶೀಲಿಸಲಾಗುತ್ತಿದ್ದು, ಆದಷ್ಟು ಶೀಘ್ರದಲ್ಲಿ ದೊಡ್ಡ ಜಾಗದಲ್ಲಿ ಸುಂದರವಾದ ಶ್ರೀಕೃಷ್ಣ ವೃಂದಾವನ ನಿರ್ಮಾಣವಾಗಲಿ. ಮುಂದಿನ ಪೀಳಿಗೆಯ ಕಲ್ಯಾಣಕ್ಕಾಗಿ ಈ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ಕಾರ್ಯಕ್ಕೆ ಸಹಕರಿಸುತ್ತಿರುವ ಎಲ್ಲ ಮಹನೀಯರ ಮೇಲೂ ಶ್ರೀಕೃಷ್ಣನ ಪೂರ್ಣಾನುಗ್ರಹವಿರಲಿ. ನೀವು ನಮಗೆ ಸಲ್ಲಿಸಿದ ಗೌರವವೆಲ್ಲವನ್ನೂ ಶ್ರೀಕೃಷ್ಣನ ಚರಣಗಳಿಗೆ ಸಮರ್ಪಿಸುತ್ತೇವೆ” ಎಂದು ಶ್ರೀಪಾದರು ಆಶೀರ್ವದಿಸಿದರು.

ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ಎರಡು ವರ್ಷಗಳ ಕಾಲ ನಿರಂತರ ಶ್ರೀಕೃಷ್ಣ ಪೂಜೆ ನೆರವೇರಿಸಿದ ಶ್ರೀಪಾದರ ತಪಸ್ಸು, ಸರಳತೆ, ಕರುಣೆ ಹಾಗೂ ವಿಶ್ವವ್ಯಾಪಿ ಧಾರ್ಮಿಕ ಸೇವೆಯನ್ನು ಶ್ಲಾಘಿಸಿದರು. ಗುರುಗಳು ಆರಂಭಿಸಿದ ಸಂಸ್ಥೆಗಳನ್ನು ಉಳಿಸಿ ಬೆಳೆಸುವುದೇ ನಿಜವಾದ ಗುರುಸೇವೆ ಎಂದು ಅಭಿಪ್ರಾಯಪಟ್ಟರು.

ಶ್ರೀ ಪುತ್ತಿಗೆ ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನ ಆಚಾರ್ಯ ಅವರು ಚತುರ್ಥ ವಿಶ್ವ ಗೀತಾ ಪರ್ಯಾಯದ ಮಹತ್ವ ಹಾಗೂ ಪ್ರಮುಖ ಸಾಧನೆಗಳನ್ನು ವಿವರಿಸಿದರು.



Related posts

ನಗರದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಸದಾನಂದ ಶೆಟ್ಟಿ ಅವರಿಗೆ ಬೆಸ್ಟ್ ಡಾಕ್ಟರ್ ಆಫ್ ಮುಂಬೈ 2025 ಪುರಸ್ಕಾರ.

Mumbai News Desk

ಕರ್ನಾಟಕ ಸಂಘ ಪನ್ವೆಲ್ ರಾಜ್ಯೋತ್ಸವ ದಿನಾಚರಣೆ .

Mumbai News Desk

ಕಾಪು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಶಕ್ತಿ ಯೋಜನೆಯ ಅಡಿಯಲ್ಲಿ 500 ಕೋಟಿ ಪ್ರಯಾಣ – ಸಂಭ್ರಮ ಆಚರಣೆ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (16/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ದುಬಾಯಿಯಲ್ಲಿ ಸಾಧಕರಿಗೆ ಸಂಮಾನದ ಜೊತೆ ದಶಮಾನದ ಸಂಭ್ರಮಜೂ.29 ರಂದು ಏಳು ಮಂದಿ ಸಾಧಕರಿಗೆ ಸನ್ಮಾನ ಮೂರು ಸಾಧಕ ಸಂಸ್ಥೆಗಳಿಗೆ ಗೌರವ

Mumbai News Desk

ಶಾಲಾ ಹಂತದಲ್ಲೇ ಈಜು ಕಲಿಕೆ – ಮೂಲತ್ವ ವಿಶ್ವ ಪ್ರಶಸ್ತಿ ಸ್ವೀಕರಿಸಿದ ಮುಳುಗು ತಜ್ಞ ಈಶ್ವರ ಮಲ್ಪೆ ಸಲಹೆ

Mumbai News Desk