ಸರಣಿ ಕಾರ್ಯಕ್ರಮ – 13
ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಇದರ ಸಂಚಾಲಕರಾದ ಮುಂಬ್ರಾ ಮಿತ್ರ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ 13ನೇ ಸರಣಿ ಕಾರ್ಯಕ್ರಮವಾಗಿ ಮಹಾರಾಷ್ಟ್ರದ ತುಳು ಕನ್ನಡಿಗರ ಪುರುಷರಿಗಾಗಿ ಕ್ರಿಕೆಟ್ ಪಂದ್ಯಕೂಟವನ್ನು ಆಯೋಜಿಸಲಾಗಿದೆ.
ಈ ಪಂದ್ಯಕೂಟವು ದಿನಾಂಕ 27 ಡಿಸೆಂಬರ್ 2026, ಭಾನುವಾರ, ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಡೊಂಬಿವಲಿ ಪಶ್ಚಿಮದ ಜುನ್ನ ಡೊಂಬಿವಲಿ ಖಾಡಿ ಮೈದಾನದಲ್ಲಿ ನಡೆಯಲಿದೆ.
ಪಂದ್ಯಕೂಟದಲ್ಲಿ ಭಾಗವಹಿಸಲು ಮೊದಲಿಗೆ ನೋಂದಾಯಿಸಿಕೊಳ್ಳುವ 12 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಆಸಕ್ತ ತಂಡಗಳು ನಿಗದಿತ ದಿನಾಂಕದೊಳಗೆ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ.
ಪ್ರವೇಶ ಶುಲ್ಕ ಮತ್ತು ಬಹುಮಾನಗಳು
• ನೋಂದಣಿ ಶುಲ್ಕ: ₹3,000
• ಪ್ರಥಮ ಬಹುಮಾನ: ₹25,000 ನಗದು ಹಾಗೂ ಆಕರ್ಷಕ ಟ್ರೋಫಿ
• ದ್ವಿತೀಯ ಬಹುಮಾನ: ₹15,000 ನಗದು ಹಾಗೂ ಆಕರ್ಷಕ ಟ್ರೋಫಿ
ಇದಲ್ಲದೆ, ಪ್ರತಿ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗುವುದು. ಹಾಗೆಯೇ ಉತ್ತಮ ಕ್ಷೇತ್ರರಕ್ಷಕ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ ಹಾಗೂ ಪಂದ್ಯ ಪುರುಷ ಪ್ರಶಸ್ತಿಗಳನ್ನು ನೀಡಿ ಆಟಗಾರರನ್ನು ಗೌರವಿಸಲಾಗುವುದು.
ಪಂದ್ಯಾವಳಿಯ ನಿಯಮಗಳು :-
- ಪಂದ್ಯಕೂಟದಲ್ಲಿ ಮಹಾರಾಷ್ಟ್ರದ ತುಳು- ಕನ್ನಡಿಗ ಆಟಗಾರರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
- ಮೈದಾನದಲ್ಲಿ ಆಟಗಾರರ ಮೂಲ ಆಧಾರ್ ಕಾರ್ಡ್ ಕಡ್ಡಾಯ ಮತ್ತು ಆಯೋಜಕರೊಂದಿಗೆ ಪರಿಶೀಲನೆಯ ಜವಾಬ್ದಾರಿ ಆ ತಂಡದ ನಾಯಕನದ್ದಾಗಿರುತ್ತ
- ಎಲ್ಲಾ ಆಟಗಾರರು ಟ್ರ್ಯಾಕ್ ಪ್ಯಾಂಟ್, ಕ್ರೀಡಾ ಜೆರ್ಸಿ ಮತ್ತು ಕ್ರೀಡಾ ಶೂಗಳನ್ನು ಕಡ್ಡಾಯವಾಗಿ ಧರಿಸಿರಬೇಕು.
- ಪ್ರತಿ ತಂಡದಲ್ಲಿ 11 ಆಟಗಾರರು ಹಾಗೂ 4 ಬದಲಿ ಆಟಗಾರರಿಗೆ ಅವಕಾಶವಿರುತ್ತದೆ.
- ಈ ಪಂದ್ಯಕೂಟವು 4 ಓವರ್ ನದ್ದು ಆಗಿದ್ದು ನಾಲ್ಕು ಎಸೆತಗಾರರಿರಬೇಕು ಹಾಗೂ ಮೊದಲ ಓವರ್ ಕಡ್ಡಾಯವಾಗಿ ಪವರ್ ಪ್ಲೇ ಆಗಿರುತ್ತದೆ.
- ಪ್ರತಿ ಆಟಗಾರರಿಗೆ ಒಂದು ತಂಡದಲ್ಲಿ ಮಾತ್ರ ಆಡಲು ಅವಕಾಶ.
- ಪ್ರತಿ ತಂಡವು ಸಮಯಕ್ಕೆ ಅರ್ಧ ಗಂಟೆ ಮುಂಚಿತವಾಗಿ ಮೈದಾನದಲ್ಲಿ ಹಾಜರಿರಬೇಕು.
- ರಿಟೈರ್ಡ್ ಹರ್ಟ್ ಆದ ದಾಂಡಿಗನಿಗೆ ಮರಳಿ ಆಡುವ ಅವಕಾಶವಿದೆ.
- ಪ್ರತಿ ಪಂದ್ಯಕ್ಕೆ 30 ನಿಮಿಷಗಳ ಕಾಲಮಿತಿ ಇರುತ್ತದೆ.
- ನೋ-ಬಾಲ್ ಎಸೆತಕ್ಕೆ ಫ್ರೀ ಹಿಟ್ ನೀಡಲಾಗುತ್ತದೆ.
- ಪಂದ್ಯ ಟೈ ಆದರೆ, ಮೊದಲು ಬ್ಯಾಟಿಂಗ್ ಮಾಡಿದ ತಂಡವನ್ನು ವಿಜೇತ ತಂಡವೆಂದು ಘೋಷಿಸಲಾಗುತ್ತದೆ.
- ಪ್ರವೇಶ ಶುಲ್ಕವನ್ನು ಮುಂಗಡವಾಗಿ ನೋಂದಣಿ ಸಮಯದಲ್ಲಿ ಭರಿಸ ತಕ್ಕದು
- ಪಂದ್ಯ ಮುಗಿದ ನಂತರ ಯಾವುದೇ ರೀತಿಯ ಪ್ರತಿಭಟನೆ ಅಥವಾ ದೂರುಗಳಿಗೆ ಅವಕಾಶ ಇಲ್ಲ.
- ತೀರ್ಪುಗಾರರ ತೀರ್ಮಾನ ಅಂತಿಮ ಹಾಗೂ ಪಂದ್ಯಾವಳಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಪೂರ್ವ ಸೂಚನೆ ಇಲ್ಲದೆ ಬದಲಾಯಿಸುವ ಹಕ್ಕನ್ನು ಆಯೋಜಕರು ಕಾಯ್ದಿರಿಸಿಕೊಂಡಿದೆ.
- ನೋಂದಣಿ ಸಮಯದಲ್ಲಿ ತಂಡವು ಸಂಪೂರ್ಣ ಪ್ರವೇಶ ಶುಲ್ಕವನ್ನು ಪಾವತಿಸಿರಬೇಕು.
ನೋಂದಣಿ ಮತ್ತು ವಿವರಗಳಿಗೆ ಸಂಪರ್ಕಿಸಿ :-
• ಉಜ್ವಲ್ ಕುಮಾರ್: 9744835998
• ಶಿಶಿರ್ ಸಾಲಿಯಾನ್: 9867473469
• ಕೀರ್ತಿರಾಜ್ ಸುವರ್ಣ: 9743579803
ನೋಂದಣಿಗೆ ಕೊನೆಯ ದಿನಾಂಕ: 14 ಡಿಸೆಂಬರ್ 2026
ತುಳು ಕನ್ನಡಿಗರ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ಹಾಗೂ ಸೌಹಾರ್ದವನ್ನು ವೃದ್ಧಿಸುವ ಈ ಕ್ರಿಕೆಟ್ ಪಂದ್ಯಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮಂದಿರದ ಗೌರವ ಪ್ರದಾನ ಕಾರ್ಯದರ್ಶಿ ಸಚಿನ್ ಜಿ. ಪೂಜಾರಿ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.



