November 18, 2026
Mumbai News Kannada
ಪ್ರಕಟಣೆ

ನವೆಂಬರ್ 29ರಂದು ಪಲಾವಾ ಕನ್ನಡಿಗರ ಸಂಘದಿಂದ ರಾಜ್ಯೋತ್ಸವ ಸಮಾರಂಭ





















ಪಲಾವಾ (ಮುಂಬೈ): ಪಲಾವಾ ಕನ್ನಡಿಗರ ಸಂಘದ (PKS) ವತಿಯಿಂದ ನಮ್ಮ ಹೆಮ್ಮೆಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂಭ್ರಮಿಸುವ ‘ರಾಜ್ಯೋತ್ಸವ ಸಮಾರಂಭ’ವನ್ನು ಇದೇ ನವೆಂಬರ್ 29, 2026ರ ಭಾನುವಾರದಂದು ಆಯೋಜಿಸಲಾಗಿದೆ.

ಪಲಾವಾದ ರಿಯೋ ಮೇನ್ ಕ್ಲಬ್ ಹೌಸ್‌ನಲ್ಲಿ (Rio Main Club House) ಈ ಸಂಭ್ರಮದ ಕಾರ್ಯಕ್ರಮ ನಡೆಯಲಿದೆ. “ಬನ್ನಿ, ಒಂದಾಗಿ ಸೇರೋಣ… ಕನ್ನಡದ ಕಂಪನ್ನು ಪಲಾವಾದಾದ್ಯಂತ ಪಸರಿಸೋಣ!” ಎಂಬ ಆಶಯದೊಂದಿಗೆ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.



















ಈ ಕಾರ್ಯಕ್ರಮಕ್ಕೆ ಕನ್ನಡಿಗರೆಲ್ಲರೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಹೆಮ್ಮೆಯನ್ನು ಮೆರೆದು ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದು ಪಲಾವಾ ಕನ್ನಡಿಗರ ಸಂಘದ ಪಿಕೆಎಸ್ ಕೋರ್ ಕಮಿಟಿ (PKS Core Committee) ಪ್ರೀತಿಪೂರ್ವಕವಾಗಿ ವಿನಂತಿಸಿಕೊಂಡಿದೆ. ಕಾರ್ಯಕ್ರಮದ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Related posts

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (27/07/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಮಾ. 1ರಂದು ಮೊಗವೀರ ಮಹಾಜನ ಸೇವಾ ಸಂಘ ಡೊಂಬಿವಲಿ ಸ್ಥಳೀಯ ಸಮಿತಿ: ದಶಮಾನೋತ್ಸವ ಸಮಾರೋಪ

Mumbai News Desk

ಅ 11: ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ವತಿಯಿಂದ ಆಟಿದ ಸೊಗಸ್ ಕಾರ್ಯಕ್ರಮ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ

Mumbai News Desk

ಜ. 5 : ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆ ನಾಲಾಸೋಪಾರ, 29ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ

Mumbai News Desk

ನ. 24 ರಂದು ಶ್ರೀ ಮಹಾದೇವಿ ಮಂತ್ರದೇವತೆ ಸನ್ನಿಧಿ (ರಿ.) ಮುಲುಂಡ್ ಪಶ್ಚಿಮ – 2ನೇ ವರ್ಷದ ಗಗ್ಗರ ಸೇವೆ

Mumbai News Desk