November 25, 2026
Mumbai News Kannada
ಮುಂಬಯಿ

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಸುವರ್ಣ ಸಂಭ್ರಮ – ಸರಣಿ ಕಾರ್ಯಕ್ರಮ – 11 ದೀಪೋತ್ಸವ ಪೂಜೆ ಹಾಗೂ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ನಾಮಾರ್ಚನೆ – 2026





















ದಿನಾಂಕ: 21-11-2026, ಶನಿವಾರ

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ, ಮುಂಬ್ರಾ ಮಿತ್ರ ಭಜನಾ ಮಂಡಳಿ (ರಿ.), ಡೊಂಬಿವಲಿ ಇವರ ನಿರ್ವಹಣೆಯಲ್ಲಿ ಸುವರ್ಣ ಸಂಭ್ರಮದ 11ನೇ ಸರಣಿ ಕಾರ್ಯಕ್ರಮವಾಗಿ ‘ದೀಪೋತ್ಸವ ಪೂಜೆ ಹಾಗೂ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ನಾಮಾರ್ಚನೆ’ಯು ಅತ್ಯಂತ ಭಕ್ತಿಭಾವ ಮತ್ತು ಶ್ರದ್ಧೆಯಿಂದ ನೆರವೇರಿತು.

ಮಧ್ಯಾಹ್ನ 4.00ರಿಂದ ಸಂಜೆ 6.30ರವರೆಗೆ ಮಂದಿರದ ಸದಸ್ಯರು ಹಾಗೂ ಭಕ್ತಾದಿಗಳಿಂದ ಶ್ರೀ ವಿಷ್ಣು ಸಹಸ್ರನಾಮ ಪಠಣ ಮತ್ತು ನಾಮಾರ್ಚನೆ ನಡೆಯಿತು. ಸಂಜೆ 6.30ರಿಂದ ಭಜನಾ ಸಂಕೀರ್ತನೆ, ಮಹಾಮಂಗಳಾರತಿ ಹಾಗೂ ಅನ್ನದಾನ ಸೇವೆ ನೆರವೇರಿತು.

ಕಾರ್ತಿಕ ದೀಪೋತ್ಸವದ ಅಂಗವಾಗಿ ಭಕ್ತಾದಿಗಳು 100ಕ್ಕೂ ಅಧಿಕ ತುಪ್ಪದ ದೀಪಗಳನ್ನು ಸಮರ್ಪಿಸಿ ದೀಪ ಸೇವೆಯಲ್ಲಿ ಪಾಲ್ಗೊಂಡರು. ಮಂದಿರದ ಗೌರವಾನ್ವಿತ ಪ್ರಧಾನ ಕೋಶಾಧಿಕಾರಿಗಳಾದ ಶ್ರೀ ಪ್ರವೀಣ್ ಶೆಟ್ಟಿ ಹಾಗೂ ಅವರ ಪರಿವಾರದವರು ಕಾರ್ತಿಕ ದೀಪೋತ್ಸವದ ಸಂಪೂರ್ಣ ಸೇವೆಯನ್ನು ವಹಿಸಿಕೊಂಡು ಸಹಕರಿಸಿದರು. ಅವರ ಈ ಧಾರ್ಮಿಕ ಸೇವೆಯನ್ನು ಗುರುತಿಸಿ ಮಂದಿರದ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.

ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮಗಳ ಅಂಗವಾಗಿ ಆಯೋಜಿಸಲಾದ ಈ ಧಾರ್ಮಿಕ ಕಾರ್ಯಕ್ರಮವು ಭಕ್ತಿಭಾವ, ಶ್ರದ್ಧೆ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.



Related posts

ಕರ್ನಾಟಕ ಸಂಘ ಕಲ್ಯಾಣ ವತಿಯಿಂದ ಶ್ರೀ ರಾಮ ನವಮಿ ಆಚರಣೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ ಬೊರಿವಲಿ-ದಹಿಸರ್ ಸ್ಥಳೀಯ ಕಚೇರಿ ವತಿಯಿಂದ ಗಣರಾಜ್ಯೋತ್ಸವ ಆಚರಣೆ

Mumbai News Desk

ಕಾಲಘೋಡಾ ಸಾಯಿಬಾಬಾ ಪೂಜಾ ಸಮಿತಿಯ 54ನೇ ವಾರ್ಷಿಕ ಮಹಾಪೂಜೆ.

Mumbai News Desk

ಸಾಂತಾಕ್ರೂಜ್   ಶ್ರೀ ಪೇಜಾವರ ಮಠದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥಶ್ರೀಪಾದರ ಪಂಚಮ ಸಮಾರಾಧನಾ ಮಹೋತ್ಸವ,

Mumbai News Desk

ವಿದ್ಯಾ ವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಹಾಗೂ ಸಮ್ಮಾನ ಕಾರ್ಯಕ್ರಮ

Mumbai News Desk

ಬಿಲ್ಲವರ ಅಸೋಸಿಯೇಶನ್ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ವಿಜ್ರಂಭಣೆಯ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk