
ಓಂ ಶ್ರೀ ಜಗದೀಶ್ವರಿ ದೇವಸ್ಥಾನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬೊರಿವಲಿ, ಇದರ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ಜ.20 ರಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಜೆ 5:00 ಗಂಟೆಗೆ ಬೊರಿವಲಿ ಪಶ್ಚಿಮದ ಗ್ಯಾನ್ ಅಂಪಿ ಥಿಯೇಟರ್, ಅದಾನಿ ಎಲೆಕ್ಟ್ರಿಸಿಟಿ ಆಫೀಸ್ ನ ಎದುರುಗಡೆ, ಇಲ್ಲಿ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಅಭಿನಯ ಮಂಟಪ ಮುಂಬೈಯ ಕಲಾವಿದರಿಂದ , ಕರುಣಾಕರ ಕೆ ಕಾಪು ಅವರ ನಿರ್ದೇಶನದಲ್ಲಿ ಒಯಿಕ್ ಲಾ ದಿನ ಬರೋಡು ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ನಾಟಕದ ಮಧ್ಯಂತರದಲ್ಲಿ ಸಂಸದ ಗೋಪಾಲ್ ಸಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ.
ಬಿಲ್ಲವರ ಎಸೋಸಿಯೇಷನ್ ಅಧ್ಯಕ್ಷ ಹರೀಶ್ ಜಿ, ಅಮೀನ್, ಭಾರತ್ ಕೋ ಆಪರೆಟಿವ್ ಬ್ಯಾಂಕಿನ ಕಾರ್ಯಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ, ನಿವೃತ್ತ ಎಸಿಪಿ ಡಾ. ಸುಧಾಕರ್ ಪೂಜಾರಿ, ಹೋಟೆಲ್ ರಾಮದೇವ್ ನ ಮಾಲಕ ಕರಿಯಪ್ಪ ಗೌಡ, ಹೋಟೆಲ್ ಉದ್ಯಮಿ,ಸಂಘಟಕ ಮುಂಡಪ್ಪ ಪಯ್ಯಾಡೆ, ಸಾಹಿತಿ, ಬಾಬು ಶಿವ ಪೂಜಾರಿ, ಉದ್ಯಮಿ ರಂಗಪ್ಪ ಗೌಡ, ಭಾರತ್ ಬ್ಯಾಂಕ್ ನ ನಿರ್ದೇಶಕ ಸಂತೋಷ್ ಕೆ ಪೂಜಾರಿ, ಉದ್ಯಮಿ ಸದಾನಂದ ಸಾವಂತ್, ಉದ್ಯಮಿ ಪ್ರಭಾಕರ್ ಶೆಟ್ಟಿ, ಹೋಟೆಲ್ ಉದ್ಯಮಿ ಶೇಖರ್ ಎಂ ಕೋಟ್ಯಾನ್, ಹೋಟೆಲ್ ಉದ್ಯಮಿ ಡಾ.ಹರೀಶ್ ಬಿ ಶೆಟ್ಟಿ,ಆಹಾರ್ ನ ಉಪಾಧ್ಯಕ್ಷ ಡಾಕ್ಟರ್ ಸತೀಶ್ ಶೆಟ್ಟಿ, ಬಿಲ್ಲವರ ಎಸೋಸಿಯೇಶನ್ ಬೊರಿವಲಿ-ದಹಿಸರ್ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್ ಬಿ ಅಮೀನ್, ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಸಾಫಲ್ಯ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.
ಆಡಳಿತ ಸಮಿತಿಯ ಸ್ಥಾಪಕ ಅಧ್ಯಕ್ಷ ಶೇಖರ್ ಇಂದು ಸಾಲ್ಯಾನ್, ಅಧ್ಯಕ್ಷ ಲಕ್ಷ್ಮಣ್ ಎಸ್ ಸಾಲಿಯನ್, ಗೌರವ ಕಾರ್ಯದರ್ಶಿ, ಸಿಏ ಅಭಿಜಿತ್ ಜಿ ಶೆಟ್ಟಿ, ಗೌರವ ಕೋಶಾಧಿಕಾರಿ ಆಶಿಶ್ ಆರ್ ಕೋಟ್ಯಾನ್, ಉಪಾಧ್ಯಕ್ಷ ನರಸಪ್ಪ ಕೆ ಮಾರ್ನಾಡ್, ಜೊತೆ ಕಾರ್ಯದರ್ಶಿ ಸದಾಶಿವ ಎಸ್ ಸಾಲಿಯನ್, ಜೊತೆ ಕೋಶಾಧಿಕಾರಿ ಉಷಾ ಎಸ್ ಮೆಂಡನ್, ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ದಯಾನಂದ ಪೂಜಾರಿ ವಾರಂಗ, ಕಾರ್ಯದರ್ಶಿ ಕರುಣಾಕರ ಕೆ ಕಾಪು, ಸಲಹೆಗಾರರಾದ ವಿಶ್ವನಾಥ್ ಬಿ ಬಂಗೇರ, ರಾಘು ಕೆ ಕೋಟ್ಯಾನ್, ರಜಿತ್ ಸುವರ್ಣ, ಪ್ರವೀಣ್ ವರದಾಕರ್ ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.