
ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮುಂಬಯಿ, ಇದರ ಆಶ್ರಯದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜುಲೈ 20, ಶನಿವಾರ ಥಾಣೆ ಪಶ್ಚಿಮ ನವೋದಯ ಜ್ಯೂನಿಯರ್ ಕಾಲೇಜ್ ನ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಈ ಸಂಧರ್ಭ ಶ್ರೀ ಮಹಾ ಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದರ್ತಿ ಇದರ ಕಲಾವಿದರು ‘ ಮಹಾಶಕ್ತಿ ವೀರಭದ್ರ’ ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಲಿರುವರು.
ಯಕ್ಷಗಾನದ ಮಧ್ಯಂತರದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮುಂಬೈ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ.
ಸಂಘದ ಗೌರವ ಅಧ್ಯಕ್ಷ ಸುರೇಶ್ ಆರ್ ಕಾಂಚನ್ ಕಾರ್ಯಕ್ರಮದ ಉದ್ಘಾಟಕರಾಗಿರುವರು.
ಮುಖ್ಯ ಅತಿಥಿಗಳಾಗಿ ಗೋಪಾಲ ಎಸ್ ಪುತ್ರನ್ (ಈಕ್ವೀಟಿ ಗ್ರೂಪ್ ಆಫ್ ಹೋಟೆಲ್ಸ್ ), ಮಹಾಬಲ ಕುಂದರ್ ( ಮುತ್ತ ಪ್ಲಾಸ್ಟಿಕ್ ಇಂಡಸ್ಟ್ರೀಸ್ ), ರಮೇಶ್ ಬಂಗೇರ( ಸಿಒ ಡಾಲ್ಫಿನ್ ಮೆರಿಟೈಮ್ ಏಜೆನ್ಸಿ ಪ್ರೈವೇಟ್ ಲಿಮಿಟೆಡ್ ), ಪ್ರದೀಪ್ ಚಂದನ್, ಕಾರ್ಯಧ್ಯಕ್ಷರು ಪೆರಿಮೆಂಟ ಬಯೋಟೆಕ್ ), ಸಂತೋಷ್ ಪುತ್ರನ್ (ಮ್ಯಾನೇಜಿಂಗ್ ಪಾರ್ಟ್ನರ್ ಎಸ್ಎ ಗ್ರೂಪ್ ಅಫ್ ಹೊಟೇಲ್ಸ್ ), ಕಿಶೋರ್ ಬಂಗೇರ (ಮಾಲಕರು,ಬಂಗೇರ ಓವರ್ಸೀಸ್), ರತ್ನಾಕರ ಚಂದನ್ ( ಮ್ಯಾನೇಜಿಂಗ್ ಪಾರ್ಟ್ನರ್ ಸ್ಟೇಟಸ್ ಗ್ರೂಪ್ ಹೋಟೆಲ್ಸ್ ), ನ್ಯಾಯವಾದಿ ಚಂದ್ರ ಕೆ ನಾಯ್ಕ(ನ್ಯಾಯವಾದಿಗಳು, ಹೈಕೋರ್ಟ್ )
ಇವರು ಉಪಸ್ಥಿತರಿರುವರು.
ಈ ಸಂಧರ್ಭ ಹೆಸರಾಂತ ಯಕ್ಷಗಾನ ಕಲಾವಿದ ಉಪ್ಪುಂದ ನಾಗೇಂದ್ರ ರಾವ್, ಇವರನ್ನು ಸನ್ಮಾನಿಸಲಾಗುವುದು.
ಕಲಾಭಿಮಾನಿಗಳು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳುವಂತ್ತೆ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ, ಇದರ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ಗೌರವ ಕಾರ್ಯದರ್ಶಿ ಗಣೇಶ್ ಮೆಂಡನ್, ಗೌರವ ಕೋಶಾಧಿಕಾರಿ ಸತೀಶ್ ಶ್ರೀಯಾನ್ ಮತ್ತು ಪದಾಧಿಕಾರಿಗಳು, ಸರ್ವ ಸದಸ್ಯರು ವಿನಂತಿಸಿದ್ದಾರೆ.