32 C
Mumbai
March 7, 2026
Mumbai News Kannada
ಸುದ್ದಿ

ಕುಂಬಳೆ : ಡಿವೈಎಫ್ಐ ಪ್ರ‌ಮುಖ ನಾಯಕಿ, ಯುವ ನ್ಯಾಯವಾದಿ ರಂಜಿತಾ ಆತ್ಮಹತ್ಯೆಗೆ ಶರಣು





ಕುಂಬಳೆಯ ಡಿವೈಎಫ್ಐ ಪ್ರ‌ಮುಖ ನಾಯಕಿ, ಮಹಿಳಾ ಅಸೋಸಿಯೇಷನ್ ಏರಿಯಾ ಸಮಿತಿ ಅಧ್ಯಕ್ಷೆ, ಖ್ಯಾತ ಯುವ ನ್ಯಾಯವಾದಿ ಕುಂಬಳೆ ನಿವಾಸಿ ರಂಜಿತಾ (34) ಮೃತಪಟ್ಟಿದ್ದಾರೆ.
ಡಿವೈಎಫ್ಐ ಬ್ಲಾಕ್ ಘಟಕ ಖಜಾಂಜಿ ಮತ್ತು ವನಿತಾ ಸೇವಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿದ್ದ ಅವರು ಕುಂಬಳೆ ಪ್ರದೇಶದಿಂದ ಸಿಪಿಐ ಎಂ ನ ಸಮರ್ಥ, ಪ್ರಗಲ್ಭ ನಾಯಕಿಯಾಗಿ ಬೆಳೆದು ಬರುತಿದ್ದರು. ಮೃತದೇಹದ ಬಳಿಯಿಂದ ಚೀಟಿ ದೊರೆತಿದ್ದು ತನ್ನ ವೈಯ್ಯಕ್ತಿಕ ಕಾರಣ ಆತ್ಮಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ .
ಪಕ್ಷದ ಸಂಘಟನಾ ಕಾರ್ಯಕ್ರಮ, ಸಭೆ ನಿಮಿತ್ತ ನಿನ್ನೆ ಸಂಜೆ 5ರ ತನಕವೂ ಕಾರ್ಯಕರ್ತರನ್ನು ಸಂಪರ್ಕಿಸಿ ಲವಲವಿಕೆಯಿಂದ ಮಾತಾಡಿದ್ದ ಅವರು ದಿಢೀರನೆ ಆತ್ಮಹತ್ಯೆ ಮಾಡಿರುವುದು ಪಕ್ಷ ಸಂಘಟನಾ ಕಾರ್ಯಕರ್ತರನ್ನು ನಿಬ್ಬೆರಗಾಗಿಸಿದೆ. ಇವರ ಸಹೋದರ ಸಕ್ರಿಯ ಸಿಪಿಐ ಎಂ ಕಾರ್ಯಕರ್ತ, ರಿಕ್ಷಾ ಚಾಲಕ ಅಜಿತ್ ನಾಲ್ಕೈದು ವರ್ಷದ ಹಿಂದೆ ಕಡಸಲದಲ್ಲಿ ಸಂಬಂಧಿಯೊಬ್ಬರ ಮದುವೆಗೆ ಹೋದವರು ಪಕ್ಕದ ನೇತ್ರಾವತಿ ನದಿಯಲ್ಲಿ ಈಜುತ್ತಿದ್ದಾಗ ಮುಳುಗಿದ ಮಿತ್ರನನ್ನು ರಕ್ಷಿಸುವ ವಿಫಲ ಯತ್ನದಲ್ಲಿ ಮುಳುಗಿ ಮೃತಪಟ್ಟಿದ್ದರು. ರಂಜಿತಾ ಕುಂಬಳೆಯ ಚಂದ್ರಕಾರ್ನವರ ಪುತ್ರಿ ಹಾಗೂ ಸುಜಿತ್ ಬೆಳ್ಚಪ್ಪಾಡರ ಸಹೋದರಿ ಆಗಿರುತ್ತಾಳೆ.



Related posts

ಭಿವಂಡಿ:ಹಿರಿಯ ಹೋಟೆಲ್ ಉದ್ಯಮಿ ಸಮಾಜ ಸೇವಕ ದೇವು ಎಸ್ ಪೂಜಾರಿ ನಿಧನ

Mumbai News Desk

ಕುಲಾಲ ಭವನ ಉದ್ಘಾಟನೆ: ದಾನಿಗಳು ಮತ್ತು ಗಣ್ಯರಿಗೆ ಕುಲಾಲ ಸಂಘ ಮುಂಬೈ ವತಿಯಿಂದ ಗೌರವ ಸನ್ಮಾನ

Mumbai News Desk

ಶೆರೋನ್ ಶೆಟ್ಟಿ ಐಕಳರವರ ಮಹಾಕುಂಭಾಶ್ವಮೇಧ ಕೃತಿ ಬಿಡುಗಡೆ ಸಮಾರಂಭ

Mumbai News Desk

ಇಂದು ಭಾರತ್ ಬಂದ್ : ದೇಶಾದ್ಯಂತ ವ್ಯಾಪಕ ಪ್ರತಿಭಟನೆ! ಏನೇನಿರುತ್ತೆ, ಏನಿರಲ್ಲ?: ಇಲ್ಲಿದೆ ಸಂಪೂರ್ಣ ಮಾಹಿತಿ

Mumbai News Desk

ಪ್ರೇಕ್ಷಕರನ್ನು ಮನರಂಜಿಸಿದ ‌ಕೊಂಕಣಿ ಹಾಸ್ಯ  ನಾಟಕ ‘ ಲಗ್ನಾ ಪಿಶ್ಶ್ಯೆ ‘

Mumbai News Desk

ಐಕ್ಯ ಸ್ವರೂಪಿಣಿ ಕಾಪು ಮಾರಿಯಮ್ಮ ನವ ದುರ್ಗಾ ಲೇಖನಯಜ್ಞ ಪುಸ್ತಕ ವಸಯಿ ದಾಹಣು , ಪ್ರಾದೇಶಿಕ ಸಮಿತಿಯಯಿಂದ  ಭಕ್ತರಿಗೆ ವಿತರಣೆ

Mumbai News Desk