31.5 C
Mumbai
June 13, 2026
Mumbai News Kannada
ಪ್ರಕಟಣೆ

ಜೂನ್ 14ರಂದು ಅಂಧೇರಿಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಆಯೋಜನೆಯಲ್ಲಿ ವಿವಿಧ ಕಾರ್ಯಕ್ರಮಗಳ ವೈಭವ: ಲೋಗೋ ಅನಾವರಣ ಹಾಗೂ ಆಪ್ ಬಿಡುಗಡೆ





ಮುಂಬೈನ ಮೊಗವೀರ ವ್ಯವಸ್ಥಾಪಕ ಮಂಡಳಿಯು (ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ – 2012) ಮುಂಬೈನ ಅಂಧೇರಿ (ಪಶ್ಚಿಮ) ವಲಯದಲ್ಲಿರುವ ಎಂವಿಎಂ ಶೈಕ್ಷಣಿಕ ಸಂಕೀರ್ಣದ ಮೊಗವೀರ ಭವನದಲ್ಲಿ 2026ರ ಜೂನ್ 14ರ ಭಾನುವಾರದಂದು ಬೆಳಿಗ್ಗೆ 11:30 ಕ್ಕೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಸಿದೆ.
ಈ ಭವ್ಯ ಸಮಾರಂಭದಲ್ಲಿ ಮೊಗವೀರ ಆಪ್ ಉದ್ಘಾಟನೆ, 125ನೇ ವರ್ಷದ ಲೋಗೋ ಅನಾವರಣ, ಔಷಧಿಗಳ ಮೇಲೆ 25% ರಿಯಾಯಿತಿ ಘೋಷಣೆ ಹಾಗೂ 125ನೇ ವರ್ಷದ ಮೊಗವೀರ ಮನವಿ ಪತ್ರ ಫಾರಂ ಬಿಡುಗಡೆ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳು ಜರುಗಲಿವೆ.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ಗಣೇಶ್ ಕಾಂಚನ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ದಿವ್ಯ ಶಿಪ್ಪಿಂಗ್ ಮತ್ತು ಕ್ಲಿಯರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮುಂಬೈನ ವ್ಯವಸ್ಥಾಪಕ ನಿರ್ದೇಶಕರಾದ ವೇದಪ್ರಕಾಶ್ ಶ್ರಿಯಾನ್, ಬಗ್ವಾಡಿ ಹೊಬಳಿಯ ಮೊಗವೀರ ಮಹಾಜನ ಸೇವಾ ಸಂಘದ ಗೌರವಾನ್ವಿತ ಅಧ್ಯಕ್ಷರಾದ ಸುರೇಶ್ ಕಾಂಚನ್ ಮತ್ತು ಮಾಜಿ ಅಧ್ಯಕ್ಷರಾದ ಗೋಪಾಲ್ ಪುತ್ರನ್ ಅವರು ಉದ್ಘಾಟಕರಾಗಿರುವರು.
ಅತಿಥಿಗಳಾಗಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಇದರ ಮಾಜಿ ಅಧ್ಯಕ್ಷರಾದ ಮಹಾಬಲ ಕುಂದರ್, ಪ್ರಸ್ತುತ ಅಧ್ಯಕ್ಷರಾದ ಸಂತೋಷ್ ಪುತ್ರನ್ ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷರಾದ ಅಜಿತ್ ಜಿ. ಸುವರ್ಣ ಅವರು ಭಾಗವಹಿಸಲಿದ್ದಾರೆ.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷರುಗಳಾದ ಬಿ. ಕೆ. ಪ್ರಕಾಶ್ ಮತ್ತು ದಯಾವತಿ ಸುವರ್ಣ, ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ದಿಲೀಪ್‌ಕುಮಾರ್ ಮುಲ್ಕಿ ಹಾಗೂ ಗೌರವಾನ್ವಿತ ಕೋಶಾಧಿಕಾರಿ ದೇವ್‌ರಾಜ್ ಕುಂದರ್, ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷರಾದ ಪ್ರಜ್ವಲ್ ಸಾಲ್ಯಾನ್ ಮತ್ತು ಕಾರ್ಯದರ್ಶಿ ಪ್ರೀತಿ ಶ್ರಿಯಾನ್, ಹಾಗೂ ಯುವ ವಿಭಾಗದ ಕಾರ್ಯಧ್ಯಕ್ಷರಾದ ಸೋಹಿಲ್ ಶ್ರಿಯಾನ್ ಮತ್ತು ಕಾರ್ಯದರ್ಶಿ ಪ್ರಾಪ್ತಿ ಸುವರ್ಣ ಅವರು ಸಮಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.



Related posts

ಶ್ರೀ ಶ್ರೀ ರಮಾನಂದ ಗುರೂಜಿ ಮುಂಬೈ ಭೇಟಿ

Mumbai News Desk

ಮಾಲಾಡ್ ಶ್ರೀ ವರ ಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗ, ಪೆ 18ರಂದು   ಅರಶಿನ ಕುಂಕುಮ

Mumbai News Desk

ಮಾರ್ಚ್ 26-27ರಂದು ಕಾಪುವಿನ 3 ಮಾರಿಗುಡಿಯಲ್ಲಿ ‘ಕಾಲವಧಿ ಸುಗ್ಗಿ ಮಾರಿಪೂಜೆ’

Mumbai News Desk

ಜಗಜ್ಯೋತಿ ಕಲಾವೃಂದ ಮುಂಬಯಿ : ಫೆ. 9ರಂದು 38ನೇ ವಾರ್ಷಿಕೋತ್ಸವ, ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ

Mumbai News Desk

ಸೆ. 22 ರಿಂದ ಅ 2 ರ ವರೆಗೆ ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ 11ನೇ ವರ್ಷದ ಶರನ್ನವರಾತ್ರಿ ಮಹೋತ್ಸವ

Mumbai News Desk

ಫೆ. 02 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತದಾನ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ

Mumbai News Desk