
ವೈದಿಕರು ತಮ್ಮವೃತ್ತಿಯ ಸಾಧನೆಯೊಂದಿಗೆ ಸಮಾಜಕಲ್ಯಾಣದ ಧ್ಯೇಯವನ್ನು ಹೊಂದಿರಬೇಕು ” ~ ವಿಧ್ವಾನ್ ಕಾಳಿದಾಸ್ ರಾಮ್ ಸಾವಯ್ಕರ್.
✒️ ಸುದ್ದಿ ವಿವರ : ಪಿ.ಆರ್.ರವಿಶಂಕರ್ 8483980035
ವೈದಿಕ ತಳಹದಿಯ ಮೇಲೆ ಸಾರಸ್ವತ ಬ್ರಾಹ್ಮಣ ಸಮಾಜದ ವೈದಿಕರ ಉನ್ನತಿ ಹಾಗೂ ಏಳಿಗೆಯ ಧ್ಯೇಯೋದ್ದೇಶಗಳಿಂದ ಸ್ಥಾಪನೆಗೊಂಡ ಸಂಸ್ಥೆ ” ಸಾರಸ್ವತ ವೈದಿಕ ಸೇವಾ ಪ್ರತಿಷ್ಟಾನಮ್ ( ರಿ) ಇದರ ಮೂರನೆಯ ವಾರ್ಷಿಕ ಸದಸ್ಯರ ಸಮಾವೇಶ ಕಾರ್ಯಕ್ರಮವು ಗೋವಾ ಪ್ರಾಂತ್ಯದ ಪ್ರಿಯೋಲ್ ನಲ್ಲಿಯ ಇತಿಹಾಸ ಪ್ರಸಿದ್ಧ ಮಂಗೇಶಿ ಕ್ಷೇತ್ರದಲ್ಲಿ ಜರಗಿತು.
ಜೂನ್ ತಿಂಗಳ ತಾ.7 ಹಾಗೂ ತಾ.8 ರಂದು ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಿದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ , ಗೋವಾ, ಕೇರಳ ಹಾಗೂ ಕರ್ನಾಟಕದ ವಿವಿಧ ಊರುಗಳಿಂದ ಆಗಮಿಸಿದ ವೈದಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವೈದಿಕರ ವಾರ್ಷಿಕ ಸಮಾವೇಶದಲ್ಲಿನ ಧಾರ್ಮಿಕ ಅನುಷ್ಟಾನದ ಅಂಗವಾಗಿ ಶ್ರೀ ಮಂಗೇಶಿ ಸನ್ನಿಧಾನದಲ್ಲಿ ಶ್ರೀ ರುದ್ರಾನುಷ್ಟಾನವು ಜರಗಿತು. ಈ ಸಂದರ್ಭದಲ್ಲಿ ಸಂಸ್ಕೃತ ವೇದಾಧ್ಯಯನ ಕಲಿಸಿಕೊಟ್ಟು ಮಾರ್ಗದರ್ಶನ ನೀಡಿದ ವಿಧ್ವಾನ್ ಶ್ರೀ ಗುರು ಕಾಳಿದಾಸ ರಾಮ್ ಸಾವೈಕರ್ ಇವರನ್ನು ಶಿಷ್ಯ ಸಮೂಹದ ವತಿಯಿಂದ ಗುರುಪೂಜೆಯನ್ನು ಜರಗಿಸಿ ಗೌರವಿಸಲಾಯಿತು. ಬಳಿಕ ಆಶೀರ್ವಚನ ನೀಡಿದ ಗುರು ಸಾವೈಕರ್ “ವೈದಿಕ ವೃತ್ತಿಯನ್ನು ದೇವರೆಂದು ನಂಬಿದ , ತನ್ನ ಬದುಕು ಇರುವುದೇ ವೈದಿಕ ಅನುಷ್ಟಾನಗಳಲ್ಲಿ ಎಂಬುದನ್ನು ಮನಗಂಡ ವೈದಿಕರು ತಮ್ಮ ವೃತ್ತಿ ಸಾಧನೆಯ ಜೊತೆ ಜೊತೆಗೆ ಸಮಾಜ ಕಲ್ಯಾಣದ ಧ್ಯೇಯವನ್ನು ಹೊಂದಿರುವುದು ಅಬಿನಂದನೀಯ. ಸಮಾಜಪರ ಕಾರ್ಯಕ್ರಮಗಳಲ್ಲಿ ಸಾರ್ಥಕತೆಯನ್ನು ಕಾಣುವ ವೈದಿಕರ ಜವಾಬ್ದಾರಿಯು ಅತೀ ದೊಡ್ಡದು ” ಎಂದು ನುಡಿದರು.
ಎರಡು ದಿನದ ವಿಧಿವತ್ತ ಹಾಗೂ ವಿಜೃಂಭಣೆಯ ಕಾರ್ಯಕ್ರಮದ ವ್ಯವಸ್ಥಾಪನೆ ಹಾಗೂ ಯಶಸ್ಸಿನಲ್ಲಿ ಹಲವಾರು ವೈದಿಕರು ಶ್ರಮ ವಹಿಸಿ ಸಹಕರಿಸಿದ್ದರು. ಲೋಕಕಲ್ಯಾಣಕ್ಕಾಗಿ ಜರಗಿದ ಈ ವಿಶೇಷ ಅನುಷ್ಟಾನವು ಸಾಂಗವಾಗಿ ಜರಗುವಲ್ಲಿ ಶ್ರೀ ಮಂಗೇಶಿ ಸನ್ನಿಧಾನದ ಆಡಳಿತ ಮಂಡಳಿಯು ಆಗಮಿಸಿದ್ದ ಎಲ್ಲರಿಗೂ ಉಚಿತವಾಗಿ ವಸತಿ , ಕಾರ್ಯಕ್ರಮದ ಸಭಾಂಗಣ , ಪಾಕಶಾಲೆ ಹಾಗೂ ಯಜ್ಞ ಶಾಲೆಯನ್ನು ಒದಗಿಸಿ ಸಹಕರಿಸಿದ್ದರು.
ಇತ್ತೀಚೆಗೆ ಜರಗಿದ 10 ನೇ ತರಗತಿಯ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಪ್ರತಿಭೆಗಳಾದ ಕು. ಸಾನ್ವಿ ವಸಂತ್ ರೇಖಾ ಭಟ್ (97.28%) , ಪ್ರಣಮ್ಯ ಸುಗುಣಾ ಪೂರ್ಣೆಶ್ ಭಟ್ (98%) ಮತ್ತು ಶ್ರೀನಿವಾಸ್ ದಯಾನಂದ ಭಟ್ ( 93%) ಇವರನ್ನು ಸಭೆಯಲ್ಲಿ ಶ್ರೀಫಲ , ಗಂಧಪ್ರಸಾದ – ಸ್ಮರಣಿಕೆ ಗಳನ್ನಿತ್ತು ಸತ್ಕರಿಸಲಾಯಿತು. ಸಂಪೂರ್ಣ ಸಹಕಾರ ನೀಡಿ ಎರಡು ದಿನದ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ಮಂಗೇಶ್ ಸನ್ನಿಧಾನದ ಆಡಳಿತ ಮಂಡಳಿಯವರಿಗೂ ವೈದಿಕ ಪ್ರತಿಷ್ಟಾನದ ವತಿಯಿಂದ ಸಭೆಯಲ್ಲಿ ಗೌರವಿಸಿ ಕೃತಜ್ಞತೆಗಳನ್ನು ಅರ್ಪಿಸಲಾಯಿತು.
ಪ್ರಸ್ತುತಃ ಮುಂದಿನ ಐದು ವರ್ಷಗಳ ಕಾಲಾವಧಿಯ ನೂತನ ಆಡಳಿತ ಮಂಡಳಿಯ ಆಯ್ಕೆಯ ಪ್ರಕ್ರಿಯೆ ಜರಗಿದ್ದು ಶ್ರೀ ಸುರೇಶ್ ಭಟ್ ( ಗೋರೆಗಾಂವ್ ಮುಂಬೈ) ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದು , ಇತರ ಪದಾಧಿಕಾರಿಗಳ ಆಯ್ಕೆಯು ಸರ್ವಾನುಮತದಿಂದ ನಡೆಯಿತು
ಉಪಾಧ್ಯಕ್ಷರು: ದಯಾನಂದ ಭಟ್ , ಕಾರ್ಯದರ್ಶಿ: ವಿಷ್ಣುಮೂರ್ತಿ ಭಟ್
ಉಪಕಾರ್ಯದರ್ಶಿ: ನಾಗೇಶ್ ಭಟ್ ,
ಕೋಶಾಧಿಕಾರಿ: ರವಿಚಂದ್ರ ಭಟ್ ,
ಜೊತೆ ಕೋಶಾಧಿಕಾರಿ: ಹರಿ ಭಟ್ ಅಡಪಾಡಿ
ಧಾರ್ಮಿಕ ಕಾರ್ಯದರ್ಶಿ: ಉಮೇಶ್ ಭಟ್ ಖಾನಾಪುರ
ಜೊತೆ ಧಾರ್ಮಿಕ ಕಾರ್ಯದರ್ಶಿ. ಮಧುಸೂಧನ್ ಭಟ್,
ಕ್ರೀಡಾ ಕಾರ್ಯದರ್ಶಿ: ಶ್ರೀಕಾಂತ್ ಭಟ್ ಸುಳ್ಯ (ಗೋವಾ)
ಸಾಂಸ್ಕೃತಿಕ ಕಾರ್ಯದರ್ಶಿ: ರಂಜಿತ್ ಭಟ್ ಬೆಂಗಳೂರು ,
ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀಕಾಂತ್ ಭಟ್ ಅರ್ಬಿ(ಗೋವಾ)
ಸಂಘಟನಾ ಕಾರ್ಯದರ್ಶಿ ಗಳು:
ಉಮಾನಾಥ ಭಟ್ ಮುಂಬೈ , ಮಹೇಶ್ ಭಟ್ ಪುತ್ತೂರು ಮತ್ತು
ಶ್ರೀ ರವೀಶ್ ಭಟ್ ಸಗ್ರಿ ,
ಸದಸ್ಯರು : ಬಾಲಸುಬ್ರಹ್ಮಣ್ಯ ಭಟ್ , ವಸಂತ ಭಟ್ ಮುಂಬೈ, ಜಗನ್ನಾಥ್ ಭಟ್ ಗೋವಾ ಮತ್ತು ಸುದರ್ಶನ ಭಟ್
ಸುದ್ದಿ ವಿವರ : ಪಿ.ಆರ್.ರವಿಶಂಕರ್ ಮುಂಬೈ
8483980035




