October 27, 2026
Mumbai News Kannada
ಸುದ್ದಿ

ಹೆಜಮಾಡಿ ದೊಡ್ಡಮನೆ ರಾಮೋಲಾ ಜೆ. ಹೆಜಮಾಡಿ ನಿಧನ



ಹೆಜಮಾಡಿ ದೊಡ್ಡಮನೆ ನಿವಾಸಿ ಶ್ರೀಮತಿ ರಾಮೋಲಾ ಜೆ. ಹೆಜಮಾಡಿ (84) ಅವರು ಜೂನ್ 12ರಂದು ನಿಧನರಾದರು. ಅವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

1990ರ ದಶಕದಲ್ಲಿ ಹೆಜಮಾಡಿಯ ಮಹಿಳೆಯರನ್ನು ಸಂಘಟಿಸಿ ಜೈ ಕರ್ನಾಟಕ ಮಹಿಳಾ ಮಂಡಳಿಯನ್ನು ಸ್ಥಾಪಿಸಿ, ಅದರ ಸ್ಥಾಪಕ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಕಾಳಜಿ ವಹಿಸಿದ್ದರು. ಅನೇಕ ಮಹಿಳೆಯರಿಗೆ ಹೊಲಿಗೆ ತರಬೇತಿ ಹಾಗೂ ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೆರವಾಗಿದ್ದರು.

ಅಲ್ಲದೆ, ಅವರು ಹೆಜಮಾಡಿ ಬಿಲ್ಲವರ ಸಂಘದ ಉಪಾಧ್ಯಕ್ಷೆಯಾಗಿ, ಹೆಜಮಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಿಯಾಗಿ ಹಾಗೂ ದಕ್ಷಿಣ ಕನ್ನಡ–ಕಾಸರಗೋಡು ಜಿಲ್ಲಾ ಒಕ್ಕೂಟದ ಜಿಲ್ಲಾ ಮಹಿಳಾ ಸಂಚಾಲಕಿಯಾಗಿ ವಿವಿಧ ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು.

ಸಾಮಾಜಿಕ, ಮಹಿಳಾ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಅವರ ಸೇವೆ ಸ್ಮರಣೀಯವಾಗಿದ್ದು, ಅವರ ನಿಧನವು ಕುಟುಂಬದವರಿಗೆ, ಬಂಧು-ಬಳಗಕ್ಕೆ ಹಾಗೂ ಹೆಜಮಾಡಿ ಭಾಗದ ಜನತೆಗೆ ಅಪಾರ ನಷ್ಟವನ್ನುಂಟು ಮಾಡಿದೆ.



Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ  ಪ್ರದೀಪ್ ಎಸ್. ಶೆಟ್ಟಿ  ದುಬೈ ಇವರು ಸೇರ್ಪಡೆ

Mumbai News Desk

ಮುಂಬೈ ಮೇಯರ್ ಪಟ್ಟ ಅಲಂಕರಿಸಿದ್ದ ಮೊದಲ ಬಿಜೆಪಿ ನಾಯಕ ಕನ್ನಡಿಗ ಡಾ. ಪ್ರಭಾಕರ್ ಪೈ

Mumbai News Desk

ಮುಂಬೈ : ಗೇಟ್ ವೇ ಆಫ್ ಇಂಡಿಯಾ ಬಳಿ ದೋಣಿ ಮಗುಚಿ ಒಂದು ಸಾವು, 20 ಜನರ ರಕ್ಷಣೆ

Chandrahas

ಯಕ್ಷ ಪ್ರೇಮಿಗಳ, ಕಲಾಭಿಮಾನಿಗಳ ಮನ ಗೆದ್ದ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸದಸ್ಯರ ಯಕ್ಷಗಾನ.

Mumbai News Desk

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಕಾಯ್ದೆ: ಲೋಕಸಭೆಯಲ್ಲಿ 2026ರ ತಿದ್ದುಪಡಿ ಮಸೂದೆ ಅಂಗೀಕಾರ, 10 ವರ್ಷ ಜೈಲು ಮತ್ತು ₹10 ಕೋಟಿವರೆಗೆ ದಂಡ

Mumbai News Desk

ಲಕ್ಷಾಂತರ ವಿದ್ಯಾರ್ಥಿಗಳ ಪಾಲಿನ ಆಶಾಕಿರಣ: ‘ಸ್ಥಾಲರ್‌ಶಿಪ್ ಮಾಸ್ಟರ್’ ನಾರಾಯಣ ನಾಯಕ್‌ಗೆ ಮೂಲತ್ವ ವಿಶ್ವ ಪ್ರಶಸ್ತಿ

Mumbai News Desk