October 10, 2026
Mumbai News Kannada
ಕ್ರೀಡೆ

ವಿಶ್ವ ಬ್ಯಾಡ್ಮಿಂಟನ್ ದಿನಾಚರಣೆ: ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಪ್ರಥಮ ಬ್ಯಾಡ್ಮಿಂಟನ್ ಪಂದ್ಯಾಟ ಯಶಸ್ವಿ




​ಮುಂಬೈ, ಜು. 5: ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ), ಮುಂಬೈ ವತಿಯಿಂದ ವಿಶ್ವ ಬ್ಯಾಡ್ಮಿಂಟನ್ ದಿನಾಚರಣೆಯ ಅಂಗವಾಗಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ‘ಕೆವಿಎ ಬ್ಯಾಡ್ಮಿಂಟನ್ ಪಂದ್ಯಾಟ–2026’ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಂಘದ ಯುವ ವಿಭಾಗದ ನೇತೃತ್ವದಲ್ಲಿ ನಡೆದ ಈ ಕ್ರೀಡಾ ಉತ್ಸವಕ್ಕೆ ಮಹಿಳಾ ವಿಭಾಗ ಹಾಗೂ ಆಡಳಿತ ಸಮಿತಿಯ ಸಂಪೂರ್ಣ ಸಹಕಾರ ಲಭಿಸಿತು.
​ಬೊರಿವಲಿ ಪೂರ್ವದ ಟಿಎಸ್‌ಜಿ ಸ್ಪೋರ್ಟ್ಸ್ ಅರೆನಾದಲ್ಲಿ ನಡೆದ ಈ ಪಂದ್ಯಾಟವು, ಮುಂಬೈ ನಗರದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ‘ರೆಡ್ ಅಲರ್ಟ್’ ಘೋಷಣೆಯಾಗಿದ್ದರೂ ಅಭೂತಪೂರ್ವ ಸ್ಪಂದನೆ ಪಡೆಯಿತು. ಸ್ಪರ್ಧಿಗಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ಅಧಿಕೃತ ಆರೋಗ್ಯ ಮತ್ತು ವೈದ್ಯಕೀಯ ಸಹಭಾಗಿಯಾಗಿ ಮೀರಾರೋಡಿನ ವೊಕ್ಹಾರ್ಡ್ ಆಸ್ಪತ್ರೆ ಸಂಸ್ಥೆಯು ಸಹಕಾರ ನೀಡಿತು.
​18 ವರ್ಷದೊಳಗಿನ ಬಾಲಕ-ಬಾಲಕಿಯರ ಸಿಂಗಲ್ಸ್, 19ರಿಂದ 39 ವರ್ಷದ ಪುರುಷ ಹಾಗೂ ಮಹಿಳೆಯರ ಸಿಂಗಲ್ಸ್, 40 ವರ್ಷ ಮೇಲ್ಪಟ್ಟವರ ಸಿಂಗಲ್ಸ್, ಪುರುಷರ ಡಬಲ್ಸ್, ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಒಟ್ಟು 82 ಸ್ಪರ್ಧಿಗಳು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.



ಮುಂಜಾನೆ 10 ಗಂಟೆಗೆ ಪಂದ್ಯಾಟದ ಉದ್ಘಾಟನಾ ಸಮಾರಂಭವು ಸಂಘದ ಅಧ್ಯಕ್ಷರಾದ ರವೀಶ್ ಜಿ. ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಪಂದ್ಯಾಟವನ್ನು ಉಡುಪಿಯ ಹಂಸಿನಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಕಿಶೋರ್ ಆರ್. ಆಚಾರ್ಯ ಉದ್ಘಾಟಿಸಿದರು. ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ವರ್ಷಪೂರ್ತಿ ಹಮ್ಮಿಕೊಳ್ಳುತ್ತಿರುವ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಶ್ಲಾಘಿಸಿದ ಅವರು, “ಬ್ಯಾಡ್ಮಿಂಟನ್ ಮೇಲಿನ ನನ್ನ ಅಭಿರುಚಿಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ಸಂತಸದ ಸಂಗತಿಯಾಗಿದೆ. ಮುಂಬೈನ ವಿಶ್ವಕರ್ಮ ಸಮಾಜದ ಪ್ರತಿಭಾವಂತ ಕ್ರೀಡಾಪಟುಗಳನ್ನು ಒಂದೇ ವೇದಿಕೆಯಲ್ಲಿ ನೋಡುವುದು ವಿಶೇಷ ಅನುಭವ” ಎಂದರು. ವೇದಿಕೆಯಲ್ಲಿ ಯುವ ವಿಭಾಗದ ಕಾರ್ಯಾಧ್ಯಕ್ಷ ಸಂದೇಶ್ ಆಚಾರ್ಯ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ವೀಣಾ ಎಸ್. ಆಚಾರ್ಯ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಸದಸ್ಯೆಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಯುವ ವಿಭಾಗದ ಶಿವಾನಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.


ಬಹುಮಾನ ವಿತರಣಾ ಸಮಾರಂಭದಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಆಡಳಿತಾಧಿಕಾರಿ ಹಾಗೂ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುರಸ್ಕಾರ ಪುರಸ್ಕೃತ ಭವಾನಿಶಂಕರ್ ವಿ. ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾಜದ ಕ್ರೀಡಾ ಹಾಗೂ ಸಾಂಸ್ಕೃತಿಕ ಬೆಳವಣಿಗೆಗಾಗಿ ಶೀಘ್ರದಲ್ಲೇ ಸ್ವಂತ ‘ವಿಶ್ವಕರ್ಮ ಭವನ’ ನಿರ್ಮಾಣವಾಗಬೇಕಾದ ಅಗತ್ಯವನ್ನು ಒತ್ತು ನೀಡಿ ಹೇಳಿದ ಅವರು, ಈ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
​ಮತ್ತೊಬ್ಬ ಅತಿಥಿ, ರೆಡ್ ಬುಲ್ ಇಂಡಿಯಾದ ಸೇಲ್ಸ್ ಮತ್ತು ಬಿಸಿನೆಸ್ ಡೆವಲಪ್‌ಮೆಂಟ್ ವಿಭಾಗದ ಅಧಿಕಾರಿ, ರಾಜ್ಯ ಮಟ್ಟದ ಚಿನ್ನದ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ ಹಾಗೂ ರಾಷ್ಟ್ರೀಯ ಮಟ್ಟದ ಪಿಕಲ್‌ಬಾಲ್ ಪದಕ ವಿಜೇತ ರಿತೇಶ್ ಆಚಾರ್ಯ ಮಾತನಾಡಿ, “ಯುವ ಪ್ರತಿಭೆಗಳಿಗೆ ಇಂತಹ ಕ್ರೀಡಾ ವೇದಿಕೆಗಳು ಅತ್ಯಗತ್ಯ. ಸಮಾಜದಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಇಂತಹ ಪಂದ್ಯಾಟಗಳು ಅವರಿಗೆ ಉತ್ತಮ ಅವಕಾಶ ಕಲ್ಪಿಸುತ್ತವೆ” ಎಂದು ಅಭಿಪ್ರಾಯಪಟ್ಟರು.


​ಯುವ ವಿಭಾಗದ ಅಧ್ಯಕ್ಷ ಸಂದೇಶ್ ಜೆ. ಆಚಾರ್ಯ ಮಾತನಾಡಿ, “ವಿಶ್ವ ಬ್ಯಾಡ್ಮಿಂಟನ್ ದಿನದಂದು ಪ್ರಥಮ ಬಾರಿಗೆ ಈ ಪಂದ್ಯಾಟವನ್ನು ಆಯೋಜಿಸಿರುವುದು ನಮ್ಮ ಸಂಘದ ಹೆಮ್ಮೆಯ ಕ್ಷಣವಾಗಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಸದಸ್ಯರು, ಕ್ರೀಡಾಪಟುಗಳು ಹಾಗೂ ಸ್ವಯಂಸೇವಕರು ತೋರಿದ ಸಮರ್ಪಣಾ ಮನೋಭಾವವೇ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣ. ಮುಂದಿನ ವರ್ಷಗಳಲ್ಲಿ ಇದನ್ನು ಇನ್ನಷ್ಟು ಭವ್ಯವಾಗಿ ವಾರ್ಷಿಕ ಕ್ರೀಡಾ ಉತ್ಸವವಾಗಿ ಬೆಳೆಸುವ ಸಂಕಲ್ಪ ನಮ್ಮದಾಗಿದೆ” ಎಂದರು.


​ಸಂಘದ ಅಧ್ಯಕ್ಷರಾದ ರವೀಶ್ ಜಿ. ಆಚಾರ್ಯ ಅವರು ಅಧ್ಯಕ್ಷೀಯ ಭಾಷಣ ಮಾಡಿ, “ನಮ್ಮ ಯುವಕರು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎಂಬುದನ್ನು ಈ ಕಾರ್ಯಕ್ರಮದ ಮೂಲಕ ತೋರಿಸಿಕೊಟ್ಟಿದ್ದಾರೆ. ನಿಷ್ಠೆಯಿಂದ ಶ್ರಮವಹಿಸಿ ಈ ಪಂದ್ಯಾಟವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಸಂಘದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಫಲರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಶ್ವಕರ್ಮ ಸಮಾಜದ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿ” ಎಂದರು.
​ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಜಿ.ಟಿ. ಆಚಾರ್ಯ, ನಿಟ್ಟೆ ದಾಮೋದರ ಆಚಾರ್ಯ, ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಮೀರಾ ಸುಧಾಕರ್ ಆಚಾರ್ಯ ಹಾಗೂ ಯುವ ವಿಭಾಗದ ಅಧ್ಯಕ್ಷ ಸಂದೇಶ್ ಜೆ. ಆಚಾರ್ಯ ಉಪಸ್ಥಿತರಿದ್ದರು. ಶಿವಾನಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರೆ, ಶಮಿತಾ ಆಚಾರ್ಯ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.


​ಪಂದ್ಯಾಟದ ಫಲಿತಾಂಶ (ವಿಜೇತರ ವಿವರ):
​18 ವರ್ಷದೊಳಗಿನ ಬಾಲಕರ ಸಿಂಗಲ್ಸ್: ಕಾರ್ತಿಕ್ ಆಚಾರ್ಯ (ಪ್ರಥಮ), ಇದಾಂತ್ ಕೊಡವೂರು (ದ್ವಿತೀಯ).
​18 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್: ಐಶ್ವರ್ಯ ಆಚಾರ್ಯ (ಪ್ರಥಮ), ವೈನವಿ ಆಚಾರ್ಯ (ದ್ವಿತೀಯ).
​19–39 ವರ್ಷದ ಪುರುಷರ ಸಿಂಗಲ್ಸ್: ಯು.ವಿ. ಕಿರಣ್ (ಪ್ರಥಮ), ವಿಲೋಹಿತ್ ಪೇಜಾವರ (ದ್ವಿತೀಯ).
​19–39 ವರ್ಷದ ಮಹಿಳೆಯರ ಸಿಂಗಲ್ಸ್: ಶ್ರುತಿ ದುಧಾತ್ (ಪ್ರಥಮ), ಸ್ತುತಿ ಆಚಾರ್ಯ (ದ್ವಿತೀಯ).
​40 ವರ್ಷ ಮೇಲ್ಪಟ್ಟ ಪುರುಷರ ಸಿಂಗಲ್ಸ್: ಭಾಸ್ಕರ್ ಆಚಾರ್ಯ (ಪ್ರಥಮ), ಕಿಶೋರ್ ಆಚಾರ್ಯ (ದ್ವಿತೀಯ).
​40 ವರ್ಷ ಮೇಲ್ಪಟ್ಟ ಮಹಿಳೆಯರ ಸಿಂಗಲ್ಸ್: ಶಶಿಕಲಾ ಆಚಾರ್ಯ (ಪ್ರಥಮ), ವಿಜಯಲಕ್ಷ್ಮಿ ಆಚಾರ್ಯ (ದ್ವಿತೀಯ).
​ಪುರುಷರ ಡಬಲ್ಸ್: ಕಿಶೋರ್ ಆಚಾರ್ಯ ಮತ್ತು ಭಾಸ್ಕರ್ ಆಚಾರ್ಯ ಜೋಡಿ (ಪ್ರಥಮ), ಶರತ್ ಆಚಾರ್ಯ ಮತ್ತು ಆರಿಶ್ ಆಚಾರ್ಯ ಜೋಡಿ (ದ್ವಿತೀಯ).
​ಮಹಿಳೆಯರ ಡಬಲ್ಸ್: ಸಚಿ ಆಚಾರ್ಯ ಮತ್ತು ಶ್ರುತಿ ದುಧಾತ್ ಜೋಡಿ (ಪ್ರಥಮ), ಶಿವಾನಿ ಆಚಾರ್ಯ ಮತ್ತು ಐಶ್ವರ್ಯ ಎ. ಆಚಾರ್ಯ ಜೋಡಿ (ದ್ವಿತೀಯ).
​ಮಿಶ್ರ ಡಬಲ್ಸ್: ಐಶ್ವರ್ಯ ಪಿ. ಆಚಾರ್ಯ ಮತ್ತು ಕಿಶೋರ್ ಆಚಾರ್ಯ ಜೋಡಿ (ಪ್ರಥಮ), ಶರತ್ ಆಚಾರ್ಯ ಮತ್ತು ವಿಜಯಲಕ್ಷ್ಮಿ ಆಚಾರ್ಯ ಜೋಡಿ (ದ್ವಿತೀಯ).


​ಬಹುಮಾನ ವಿತರಣೆ ಹಾಗೂ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು. ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಕ್ರೀಡಾಪಟುಗಳು, ವೈದ್ಯಕೀಯ ಸಹಭಾಗಿಗಳು, ಅತಿಥಿಗಳು, ಪ್ರಾಯೋಜಕರು, ಸ್ವಯಂಸೇವಕರು ಹಾಗೂ ಪ್ರೇಕ್ಷಕರಿಗೆ ಸಂಘದ ಆಡಳಿತ ಸಮಿತಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ, ಮಹಿಳಾ ವಿಭಾಗ ಹಾಗೂ ಯುವ ವಿಭಾಗದವರು ಜಂಟಿಯಾಗಿ ಕೃತಜ್ಞತೆ ಸಲ್ಲಿಸಿದರು.



Related posts

ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವ

Mumbai News Desk

ಜಪಾನ್ ಓಪನ್ 750 ಗೆದ್ದು ಇತಿಹಾಸ ಸೃಷ್ಟಿಸಿದ ಪಿವಿ ಸಿಂಧು: ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ

Mumbai News Desk

ಕುಂದರ್ ಮೂಲಸ್ಥಾನ ಸಭಾ ಮುಂಬಯಿ, ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2025

Mumbai News Desk

ಗುವಾಹಾಟಿಯಲ್ಲಿ ರನ್‌ಗಳ ಚಂಡಮಾರುತ – ಕ್ರಿಕೆಟ್ ದಾಖಲೆ ಪುಸ್ತಕಗಳನ್ನೇ ಹೊಸದಾಗಿ ಬರೆದ ಭಾರತ!

Mumbai News Desk

ಡಬ್ಲ್ಯೂ ಐ ಎಫ್ ಎ ಅಂತರ್ ಜಿಲ್ಲಾ ಸಬ್ ಜ್ಯೂನಿಯರ್ ಫುಟ್ಬಾಲ್ ಪಂದ್ಯಾಟ, ಸಮರ್ಥ್ ರೈ ಅವರ ಅದ್ಬುತ ಆಟದಿಂದ ಮುಂಬಯಿ ತಂಡಕ್ಕೆ ಜಯ.

Mumbai News Desk

ಸುರತ್ಕಲ್ ಬಂಟ್ಸ್ ಕ್ರಿಕೆಟ್ ಜೆರ್ಸಿ ಹಾಗೂ ಟ್ರೋಫಿ ಅನಾವರಣ

Mumbai News Desk