ಮೀರಾರೋಡ್: ಇಲ್ಲಿನ ಖ್ಯಾತ ಹಾಗೂ ಗೌರವಾನ್ವಿತ ದಂತವೈದ್ಯ ಡಾ. ಅವಿನಾಶ್ ಶೆಟ್ಟಿ (47) ಅವರು ಸೆ. 25ರಂದು ಮುಂಜಾನೆ ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಧಾರವಾಡದ ಪ್ರತಿಷ್ಠಿತ ಎಸ್ಡಿಎಂ (SDM) ದಂತ ಕಾಲೇಜಿನ 1997ನೇ ಬ್ಯಾಚ್ನ ಹಳೆಯ ವಿದ್ಯಾರ್ಥಿಯಾಗಿದ್ದ ಡಾ. ಅವಿನಾಶ್ ಶೆಟ್ಟಿ ಅವರು ದಂತವೈದ್ಯಕೀಯ ಕ್ಷೇತ್ರಕ್ಕೆ ತಮ್ಮನ್ನು ಮುಡಿಪಾಗಿಟ್ಟಿದ್ದರು. ತಮ್ಮ ವೃತ್ತಿಪರ ನೈಪುಣ್ಯತೆ ಹಾಗೂ ಸಹಾನುಭೂತಿಯ ಸೇವೆಯ ಮೂಲಕ ಅಪಾರ ಸಂಖ್ಯೆಯ ರೋಗಿಗಳು, ಸಹೋದ್ಯೋಗಿಗಳು ಮತ್ತು ಆಪ್ತರ ಗೌರವ, ಪ್ರೀತಿಗೆ ಪಾತ್ರರಾಗಿದ್ದರು.
ಶಚ್ಚರಪರಾರಿ ಪದ್ಮನಾಭ ಶೆಟ್ಟಿ ಮತ್ತು ಮಾನಿಲ ಮೇಗಿನ ಮನೆ ಗೀತಾ ಶೆಟ್ಟಿಯವರ ಸುಪುತ್ರರಾದ ಇವರು, ಪತ್ನಿ ಅಕ್ಷತಾ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.



