October 9, 2026
Mumbai News Kannada
ಪ್ರಕಟಣೆ

ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಅಕ್ಟೋಬರ್ 19 ರಂದು ಮಹಾಚಂಡಿಕಾಯಾಗ ಹಾಗೂ ನವರಾತ್ರಿ ಮಹೋತ್ಸವ



ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನ, ಕುಕ್ಕಡಡಿ – ಮಾರಿಗುಡಿಯಲ್ಲಿ ಸ್ವಸ್ತಿ ಶ್ರೀ ಶಾಲಿವಾಹನ ಶಕ ಪರಾಭವ ನಾಮ ಸಂವತ್ಸರದ ತುಲಾ ಮಾಸ ದಿನ 3 ರವಿವಾರ (19-10-2026ನೇ ಸೋಮವಾರ) ನವರಾತ್ರಿ ಪೂಜೆಯ ದುರ್ಗಾಷ್ಟಮಿ ಪರ್ವದಿನದಂದು ಮಹಾಚಂಡಿಕಾಯಾಗ ಜರಗಲಿದೆ. ಶ್ರೀ ಅನಂತಕೃಷ್ಣ ಆಚಾರ್ಯ ಅವರ ಪ್ರಧಾನ ಅರ್ಚಕತ್ವದಲ್ಲಿ ಹಾಗೂ ಕಜೆ ಆರು ಮನೆಯವರ ಆಡಳಿತದೊಂದಿಗೆ ಈ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ಕಾರ್ಯಕ್ರಮದ ವಿವರಗಳ ಪ್ರಕಾರ, ಅಕ್ಟೋಬರ್ 19 ಸೋಮವಾರದಂದು ಬೆಳಿಗ್ಗೆ 8.00 ರಿಂದ ಮಹಾಚಂಡಿಕಾಯಾಗ, ಮಧ್ಯಾಹ್ನ 12.00 ಕ್ಕೆ ಪೂರ್ಣಾಹುತಿ, ಮಹಾಪೂಜೆ ಹಾಗೂ ದೇವಿದರ್ಶನ, ಮಧ್ಯಾಹ್ನ 1.00 ಕ್ಕೆ ಮಹಾ ಅನ್ನಸಂತರ್ಪಣೆ ಮತ್ತು ಸಂಜೆ 5.30 ರಿಂದ ಶ್ರೀ ದುರ್ಗಾನಮಸ್ಕಾರ ಪೂಜೆ ಹಾಗೂ ಸಾಮೂಹಿಕ ಕುಂಕುಮಾರ್ಚನೆ ಸೇವೆ ನೆರವೇರಲಿದೆ. ನವರಾತ್ರಿಯ ಪ್ರತಿ ದಿನ ಬೆಳಿಗ್ಗೆ 6.30 ರಿಂದ 9.00 ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಹಾಗೂ ನವರಾತ್ರಿ ಪೂಜೆ ಜರಗಲಿದೆ.

ಕ್ಷೇತ್ರದಲ್ಲಿ ನವರಾತ್ರಿ ಪ್ರಯುಕ್ತ ನಡೆಯುವ ಭಜನಾ ಕಾರ್ಯಕ್ರಮಗಳ ವಿವರ: 11.10.2026 ಆದಿತ್ಯವಾರ ಬೆಳಿಗ್ಗೆ 6.45 ರಿಂದ 7.30 ಶ್ರೀ ವಿಲೋಚ ಭಜನಾ ಮಂಡಳಿ ಮುಂಡ್ಕೂರು, 7.30 ರಿಂದ 8.15 ಶ್ರೀ ಲಕ್ಷ್ಮಿ ವೆಂಕಟೇಶ ಭಜನಾ ಮಂಡಳಿ ಸಜ್ಜೀರಿಪೇಟೆ; 12.10.2026 ಸೋಮವಾರ ಸಂಜೆ 7.00 ರಿಂದ 8.15 ಶ್ರೀ ಅಶ್ವತ್ಥ ಭಜನಾ ಮಂಡಳಿ ಸಂಕಳಕರಿಯ; 13.10.2026 ಮಂಗಳವಾರ 7.30 ರಿಂದ 8.30 ಶ್ರೀ ಚಾರಂದಾಯ ಬಂಟ ಭಜನಾ ಮಂಡಳಿ ಪಟ್ಟೆ, 8.30 ರಿಂದ 9.45 ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಮುಂಡ್ಕೂರು; 14.10.2026 ಬುಧವಾರ 7.00 ರಿಂದ 8.15 ಶ್ರೀ ಸ್ಕಂದ ಭಜನಾ ಮಂಡಳಿ ಕಡಂದಲೆ; 15.10.2026 ಗುರುವಾರ 7.00 ರಿಂದ 8.15 ಶ್ರೀ ನಿತ್ಯಾನಂದ ಭಜನಾ ಮಂಡಳಿ ತೊಂಡಜ್ಜು; 16.10.2026 ಶುಕ್ರವಾರ 7.00 ರಿಂದ 8.15 ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಕಡಂದಲೆ ; 17.10.2026 ಶನಿವಾರ 7.00 ರಿಂದ 8.15 ಶ್ರೀ ಭಜನಾ ಪ್ರಿಯ ಭಜನಾ ಮಂಡಳಿ ಮುಲ್ಕಿ; 18.10.2026 ಆದಿತ್ಯವಾರ 6.45 ರಿಂದ 8.15 ಶ್ರೀ ಆದಿಶಕ್ತಿ ಭಜನಾ ಮಂಡಳಿ ಉಲುವೆ, 8.15 ರಿಂದ 9.30 ಶ್ರೀ ಸೇವಾ ಭಾರತಿ ತಂಡ ಸಜ್ಜೀರಿಪೇಟೆ; 19.10.2026 ಸೋಮವಾರ 6.45 ರಿಂದ 7.45 ಶ್ರೀ ಮಹಾಮ್ಮಾಯಿ ಭಜನಾ ಮಂಡಳಿ ಸಜ್ಜೀರಿಪೇಟೆ, 7.45 ರಿಂದ 8.45 ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಸಜ್ಜೀರಿಪೇಟೆ, ಮಧ್ಯಾಹ್ನ 2.30 ರಿಂದ 4.00 ಶ್ರೀ ವೈದ್ಯನಾಥ ಭಜನಾ ಮಂಡಳಿ ಅಲಂಗಾರುಗುಡ್ಡೆ, 4.00 ರಿಂದ 5.30 ಶ್ರೀ ಹರಿ ಓಂ ಭಜನಾ ಮಂಡಳಿ ನೆಟ್ಟಿ; 20.10.2026 ಮಂಗಳವಾರ 7.00 ರಿಂದ 8.30 ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿ ಮುತ್ತಿಗೆ, 8.30 ರಿಂದ 10.00 ಶ್ರೀ ಚಾರಂದಾಯ ಮಹಿಳಾ ಭಜನಾ ಮಂಡಳಿ ವಿಲಂಚಿ ಅವರ ಭಜನಾ ಸೇವೆ ಜರಗಲಿದೆ.

ಕಜೆ ಹೊಸಮನೆ ಸುಂದರ ಸಫಲಿಗ (ಅಧ್ಯಕ್ಷರು), ಎಂ. ಜಿ. ಕರ್ಕೇರ (ಗೌರವ ಅಧ್ಯಕ್ಷರು), ಕಜೆ ಪಡುಬೈಲು ಸುರೇಂದ್ರ ಸಾಲ್ಯಾನ್ (ಪ್ರಧಾನ ಕಾರ್ಯದರ್ಶಿ), ಹೆಗ್ಗಡೆ ಕಜೆ ಚಿನ್ನಪ್ಪ ಸಫಲಿಗ (ಉಪಾಧ್ಯಕ್ಷರು), ಕಜೆ ಆಚಿಮನೆ ಉದಯ ಕುಮಾರ್ (ಕೋಶಾಧಿಕಾರಿ), ಕಜೆ ಮಂಗಿಲ್ಮಾರ್ ನಾರಾಯಣ ಸಫಲಿಗ (ಜೊತೆ ಕಾರ್ಯದರ್ಶಿ), ಕಜೆ ಮನೆ ಭುಜಂಗ ಮೂಲ್ಯ (ಜೊತೆ ಕೋಶಾಧಿಕಾರಿ) ಹಾಗೂ ಸಮಿತಿಯ ಸದಸ್ಯರಾದ ಕಜೆ ಪಡುಬೈಲು ಜಯ ಸಾಲ್ಯಾನ್, ಕಜೆ ಮನೆ ಸುರೇಶ್ ವಾಸು ಮೂಲ್ಯ, ಕಜೆ ಆಚಿಮನೆ ಸಂಜೀವ ಶೇರಿಗಾರ್, ಕಜೆ ಮಂಗಿಲ್ಮಾರ್ ದಯಾನಂದ ಸಫಲಿಗ, ಕಜೆ ಹೊಸಮನೆ ಶೇಖರ ಮಂಡನ್ ಮತ್ತು ಹೆಗ್ಗಡೆ ಕಜೆ ಸುಜೀತ್ ಕುಮಾರ್ ಮತ್ತು ಸದಸ್ಯರು ಭಕ್ತಾಧಿಗಳು ನವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ದೇವಿಯ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.



Related posts

ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆ.17ರಂದು ಸಂಕ್ರಮಣ ಹಾಗೂ ನಾಗ ಪಂಚಮಿ ಪೂಜೆ

Mumbai News Desk

ಮಾರ್ಚ್ 1ರಂದು ಗೋರೆಗಾಂವ್ ಕರ್ನಾಟಕ ಸಂಘದ 67ನೇ ನಾಡಹಬ್ಬ ಸಮಾರಂಭ : ವಿಚಾರಗೋಷ್ಠಿ ಮತ್ತು ಸಾಂಸ್ಕೃತಿಕ ವೈಭವ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳಿ ಡೊಂಬಿವಲಿ ಜ.4 ರಂದು  ಸಾಮೂಹಿಕ ಶ್ರೀ ಶನೀಶ್ವರ ಪೂಜೆ

Mumbai News Desk

ಜ. 26 ; ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಯ 15ನೇ ವಾರ್ಷಿಕೋತ್ಸವ

Mumbai News Desk

ಕಲಾಜಗತ್ತಿನ ಆಯೋಜನೆಯಲ್ಲಿ ವಿಶಿಷ್ಟ ಪರಿಕಲ್ಪನೆಯೊಂದಿಗೆ ಮೂಡಿಬಂದು ಜನರನ್ನು ರಂಜಿಸಲಿರುವ “ಬೊಂಬಾಯಿಡ್ ತುಳುನಾಡ್ ” ತುಳು ಉತ್ಸವ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಜೂ. 8 ರಂದು ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯಿಂದ ವಿದ್ಯಾರ್ಥಿವೇತನ,  ವಿಧವೆಯರಿಗೆ ಮತ್ತು ವಿಕಲ ಚೇತನರಿಗೆ ಧನ ಸಹಾಯ 

Mumbai News Desk