ಮುಂಬಯಿ: ಭಾರತ್ ಬ್ಯಾಂಕ್‌ನಲ್ಲಿ 36 ವರ್ಷಗಳ ಕಾಲ ಸುದೀರ್ಘ ಹಾಗೂ ನಿಷ್ಠಾವಂತ ಸೇವೆ ಸಲ್ಲಿಸಿದ ಶಾಲಿನಿ ವಿ. ಅಮೀನ್ ಅವರು ಅ. 30ರಂದು ಕಾಂದಿವಲಿ ಪೂರ್ವ ಶಾಖೆಯಲ್ಲಿ ಸೇವೆಯಿಂದ ನಿವೃತ್ತರಾಗಿದ್ದಾರೆ.

ಶಾಲಿನಿ ವಿ. ಅಮೀನ್ ಅವರು 02.07.1990ರಂದು ಭಾಂಡೂಪ್ ಶಾಖೆಯಲ್ಲಿ ಭಾರತ್ ಬ್ಯಾಂಕ್ ಸೇವೆಗೆ ಸೇರ್ಪಡೆಗೊಂಡಿದ್ದು, ತಮ್ಮ ಸೇವಾವಧಿಯಲ್ಲಿ ಅಂಧೇರಿ (ಪೂರ್ವ), ಚೆಂಬೂರು, ಘಾಟ್‌ಕೋಪರ್ (ಪಶ್ಚಿಮ), ಮಲಾಡ್, ಗೋರೆಗಾಂವ್ (ಪಶ್ಚಿಮ), ಐ.ಸಿ. ಕಾಲೋನಿ, ಚಾರ್ಕೋಪ್, ದಹಿಸರ್ ಮತ್ತು ಕಾಂದಿವಲಿ (ಪೂರ್ವ) ಮುಂತಾದ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಅವರು ಬ್ಯಾಂಕ್‌ನಲ್ಲಿ 36 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ, ಕಾಂದಿವಲಿ (ಪೂರ್ವ) ಠಾಕೂರ್ ಕಾಂಪ್ಲೆಕ್ಸ್ ಶಾಖೆಯ ಮುಖ್ಯ ಪ್ರಬಂಧಕರಾದ ವೀರೇಂದ್ರ ಕುಂದರ್ ಅವರು ಶಾಲಿನಿ ವಿ. ಅಮೀನ್ ಅವರಿಗೆ ಶುಭ ಹಾರೈಸಿ, ಅವರ ಮುಂದಿನ ಜೀವನ ಸುಖ, ಶಾಂತಿ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಕಾರ್ತಿಕ್ ಪೂಜಾರಿ, ಶ್ರುತಿ ಸುವರ್ಣ ಮತ್ತು ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



