October 14, 2026
Mumbai News Kannada
ಪ್ರಕಟಣೆ

ಡೊಂಬಿವಲಿಯಲ್ಲಿ ಅ. 16ರಂದು ಮರಾಠಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ



ಡೊಂಬಿವಲಿ: ಡಾ. ಶ್ರೀಕಾಂತ್ ಶಿಂಧೆ ಫೌಂಡೇಶನ್ ವತಿಯಿಂದ ಡೊಂಬಿವಲಿ ಪೂರ್ವದ ದತ್ತನಗರದ ಡಿ.ಎನ್.ಸಿ. ಸ್ಕೂಲ್ ಮೈದಾನದಲ್ಲಿ ಅಕ್ಟೋಬರ್ 11 ರಿಂದ 20ರವರೆಗೆ ಆಯೋಜಿಸಲಾಗಿರುವ ನವರಾತ್ರೋತ್ಸವದಲ್ಲಿ ಶಿವಸೇನೆ ದಕ್ಷಿಣ ಭಾರತೀಯ ವಿಭಾಗದ ವತಿಯಿಂದ ಅಕ್ಟೋಬರ್ 16ರಂದು ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀದೇವಿಯ ಮಹಾಮಂಗಳಾರತಿ ನಡೆಯಲಿದೆ.

ಅಕ್ಟೋಬರ್ 16ರ ಶುಕ್ರವಾರದಂದು ಸಂಜೆ 6:00 ಗಂಟೆಯಿಂದ ಆರಂಭವಾಗುವ ಈ ಸಾಂಸ್ಕೃತಿಕ ಸಂಭ್ರಮದಲ್ಲಿ ಕರ್ನಾಟಕದ ಕರಾವಳಿಯ ಪರಂಪರಾಗತ ಕಲೆಯಾದ ಯಕ್ಷಗಾನವನ್ನು ಮರಾಠಿ ಭಾಷೆಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಕಲ್ಯಾಣ್–ಡೊಂಬಿವ್ಲಿ ವ್ಯಾಪ್ತಿಯಲ್ಲಿ ಮರಾಠಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಶ್ರೀ ಭೈರವಿ ಯಕ್ಷ ಸದನದ ಕಲಾವಿದರು ‘ಶ್ರೀದೇವಿ ಮಹಾತ್ಮೆ ಮಹಿಷಾಸುರ ಮರ್ದಿನಿ’ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ.

ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಶ್ರೀಕಾಂತ್ ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿ ಆಯೋಜಿಸಲಾಗಿರುವ ಈ ಉತ್ಸವದಲ್ಲಿ, ಶಿವಸೇನೆ ದಕ್ಷಿಣ ಭಾರತೀಯ ವಿಭಾಗದ (ಡೊಂಬಿವಲಿ, ಠಾಣೆ ಜಿಲ್ಲೆ) ಅವರು ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದಾರೆ.

ಈ ಅಪರೂಪದ ಸಾಂಸ್ಕೃತಿಕ ಪ್ರಸ್ತುತಿಗೆ ಸಾರ್ವಜನಿಕರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರೋತ್ಸಾಹಿಸಬೇಕಾಗಿ ಪದಾಧಿಕಾರಿಗಳಾದ ಅನುಪಮಾ ಶೆಟ್ಟಿ ಹಾಗೂ ಸುಭಾಷ್ ಶೆಟ್ಟಿ ಇನ್ನಂಜೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಹೂಡೆಯಲ್ಲಿ ಜುಲೈ 19 ರಂದು ವೈಭವದ “ಆಟಿದ ಐಸಿರಿ ತುಳುವೆರೆ ಬದ್ಕ್‌”

Mumbai News Desk

ಗುರುನಾರಾಯಣ ಯಕ್ಷಗಾನ ಮಂಡಳಿಯ ಭಾಗವತರಾದ ಗಂಗಾಧರ್ ಸುವರ್ಣ ಅವರ ಕಲಾ ಸೇವೆಗೆ 25 ವರ್ಷ, ಆಗಸ್ಟ್ 2ರಂದು ”ಯಕ್ಷ ಸಂಭ್ರಮ’

Mumbai News Desk

ಡಿ. 03. ಥಾಣೆಯಲ್ಲಿ ಪ್ರಸಾದ್ ಪೂಜಾರಿ ಕಲ್ಯಾ ಇವರ ಸೇವೆಯಲ್ಲಿ ಮಂತ್ರ ದೇವತೆಯ 6ನೇ ವಾರ್ಷಿಕ ಪೂಜೆ ಹಾಗೂ ನೇಮೋತ್ಸವ

Mumbai News Desk

ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಹೆಜಮಾಡಿ : ಜ. 25ಕ್ಕೆ ವಾರ್ಷಿಕ ಬಂಡಿ ನೇಮೋತ್ಸವದ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಸಾವರ್ಕರ್ ನಗರ್ -ಥಾಣೆ : ಎ. 13ಕ್ಕೆ ಮಾಸಿಕ ಸಂಕ್ರಮಣ ಪೂಜೆ, ಶ್ರೀ ಶನೀಶ್ವರ ಗ್ರಂಥ ಪಾರಾಯಣ

Mumbai News Desk

ಕನ್ನಡ ಸಂಘ ಸಯನ್ ವತಿಯಿಂದ ಅಗಸ್ಟ್ 3 ರಂದು ಯಕ್ಷಗಾನ ತಾಳಮದ್ದಳೆ

Mumbai News Desk