32 C
Mumbai
April 24, 2026
Mumbai News Kannada
ಪ್ರಕಟಣೆ

ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಮತ್ತು ಕವಿತಾ ಸ್ಪರ್ಧೆ – 2025





ಮುಂಬಯಿ ಸಾಹಿತ್ಯ–ಸಾಂಸ್ಕೃತಿಕ ಹಾಗೂ ಸಾಂಘಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದರೂ, ಕನ್ನಡ ಸಾಹಿತ್ಯ ಲೋಕ ಬಹಳ ನಿರೀಕ್ಷಿಸುತ್ತಿದ್ದ ಸಮಯದಲ್ಲೇ ಇಹಯಾತ್ರೆಯನ್ನು ಮುಗಿಸಿದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಅವರ ಸ್ಮರಣಾರ್ಥವಾಗಿ ಜಗಜ್ಯೋತಿ ಕಲಾವೃಂದವು ಕಳೆದ 27 ವರ್ಷಗಳಿಂದ ಕಥಾ ಮತ್ತು ಕವಿತಾ ಸ್ಪರ್ಧೆ ಆಯೋಜಿಸುತ್ತಿದೆ.

2025 ನೇ ಸಾಲಿನ ಸ್ಪರ್ಧೆಗಾಗಿ ದೇಶದಾದ್ಯಂತದ ಕನ್ನಡ ಮಹಿಳೆಯರಿಗೆ ಮುಕ್ತವಾಗಿರುವ ಈ ಅಖಿಲ ಭಾರತ ಮಟ್ಟದ ಸ್ಪರ್ಧೆಯಲ್ಲಿ, ಕಥಾ ವಿಭಾಗ ಮತ್ತು ಕವಿತಾ ವಿಭಾಗ ತಲಾ ರೂಪಾಯಿ 10,000/- ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರ ನೀಡಲಾಗಲಿದೆ.

ಸ್ಪರ್ಧೆಯ ನಿಯಮಗಳು

  1. ಈ ಸ್ಪರ್ಧೆ ದೇಶದಾದ್ಯಂತದ ಸಮಸ್ತ ಕನ್ನಡ ಮಹಿಳೆಯರಿಗಾಗಿ.
  2. ಕೃತಿಗಳು ಪ್ರಕಟಣೆಗೆ ಸಿದ್ಧವಾಗಿರುವ ಸ್ವರಚಿತ ಕಥಾ/ಕವಿತಾ ಸಂಗ್ರಹವಾಗಿರಬೇಕು.
  3. ಕಥಾ ಸ್ಪರ್ಧಗೆ – ಒಂದು ಕಥಾ ಸಂಕಲನ ಕಳುಹಿಸಬೇಕು.
    ಕವಿತಾ ಸ್ಪರ್ಧೆಗೆ – ಒಂದು ಕವಿತಾ ಸಂಕಲನ ಕಳುಹಿಸಬೇಕು.
    (ಒಬ್ಬ ಸ್ಪರ್ಧಿ ಎರಡೂ ವಿಭಾಗಗಳಲ್ಲಿ ಭಾಗವಹಿಸಬಹುದು.)
  4. ಕಥೆ/ಕವಿತೆಗಳನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಸ್ಪಷ್ಟವಾಗಿ ಬರೆದು/ಟೈಪ್ ಮಾಡಿರಬೇಕು.
    ಕಾರ್ಬನ್ ಪ್ರತಿಗಳು, ಝೆರಾಕ್ಸ್ ಪ್ರತಿಗಳು ಹಾಗೂ ಪ್ರಕಟಿತ ಕೃತಿಗಳನ್ನು ಸ್ವೀಕರಿಸಲಾಗುವುದಿಲ್ಲ.
  5. ಕಥಾ ಸಂಕಲನ – ಕನಿಷ್ಠ 100 ಪುಟಗಳು, ಗರಿಷ್ಠ 130 ಪುಟಗಳ ಮಿತಿಯಲ್ಲಿರಬೇಕು.
  6. ಕವಿತಾ ಸಂಕಲನ – ಕನಿಷ್ಠ 30 ಕವಿತೆಗಳಿರಬೇಕು.
    (ಖಂಡಕಾವ್ಯ, ಚುಟುಕು, ಹನಿಗವನಗಳನ್ನು ಪರಿಗಣಿಸಲಾಗುವುದಿಲ್ಲ.)
  7. ಹಸ್ತಪ್ರತಿಯಲ್ಲಿ ಹೆಸರು ನಮೂದಿಸಬಾರದು.
    ಹೆಸರು, ವಿಳಾಸ, ಪರಿಚಯ, ದೂರವಾಣಿ ಸಂಖ್ಯೆ ಹಾಗೂ ಇತ್ತೀಚಿನ ಭಾವಚಿತ್ರವನ್ನು ಪ್ರತ್ಯೇಕವಾಗಿ ಸೇರಿಸಬೇಕು.
  8. ಪ್ರವೇಶ ಶುಲ್ಕವಿಲ್ಲ.
  9. ಬಂದ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ.
  10. ಪ್ರಶಸ್ತಿ ಪಡೆದ ಕೃತಿಗಳನ್ನು ಮುದ್ರಿಸುವಾಗ ಮುಖಪುಟದ ಮೇಲ್ಭಾಗದಲ್ಲಿ ಹಾಗೂ ಪ್ರಥಮ ಒಳಪುಟದಲ್ಲಿ –
    “ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ/ಕವಿತಾ ಪ್ರಶಸ್ತಿ ವಿಜೇತ ಕೃತಿ – 2025” ಎಂದು ಮುದ್ರಿಸಬೇಕು.
  11. ಪ್ರಶಸ್ತಿ ಪ್ರದಾನ ಸಮಾರಂಭ ವೃಂದದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆಯಲಿದೆ.
  12. ವಿಜೇತರನ್ನು ದೂರವಾಣಿ/ಪತ್ರದ ಮೂಲಕ ಸಂಪರ್ಕಿಸಲಾಗುವುದು.
  13. ಒಮ್ಮೆ ಒಂದು ವಿಭಾಗದಲ್ಲಿ ಪ್ರಶಸ್ತಿ ಪಡೆದವರು, ಅದೇ ವಿಭಾಗದಲ್ಲಿ ಮತ್ತೆ ಭಾಗವಹಿಸಲು ಅವಕಾಶವಿರುವುದಿಲ್ಲ.
  14. ಸ್ಪರ್ಧೆಯ ಕುರಿತು ಯಾವುದೇ ತೀರ್ಮಾನ ಕೈಗೊಳ್ಳುವ ಹಕ್ಕನ್ನು ವೃಂದವು ಕಾಯ್ದಿರಿಸಿಕೊಂಡಿದೆ.
  15. ಅನಾವಶ್ಯಕ ಪತ್ರವ್ಯವಹಾರಕ್ಕೆ ಅವಕಾಶವಿಲ್ಲ. ನಿರ್ಣಾಯಕರ ತೀರ್ಮಾನವೇ ಅಂತಿಮ.
  16. ಕೃತಿಗಳನ್ನು ಕಳುಹಿಸುವ ಕೊನೆಯ ದಿನಾಂಕ : 31.10.2025

ಕೃತಿಗಳನ್ನು ಕಳುಹಿಸಬೇಕಾದ ವಿಳಾಸ

(ವಿಳಾಸವನ್ನು ಇಂಗ್ಲೀಷ್‌ನಲ್ಲಿ ಸ್ಪಷ್ಟವಾಗಿ ಬರೆದು ಕಳುಹಿಸಬೇಕು)

SUKUMAR N. SHETTY
C/o. S. N. Shetty Associates,
Ground Floor, Room No.5,
Neelkanth Sagar CHS,
Mahatma Phule Road,
Opp. Jadhavwadi,
Dombivli West – 421202
📧 Email : mail.sukumar@yahoo.in


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

📞 Santosh P. Shetty – 9892110826 / 9869824709
📞 Vasant Suvarna – 9892833623
📧 Email : santoshpshetty@gmail.com




Related posts

ಜು. 24: ಓಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅಂಧೇರಿ ಪಶ್ಚಿಮದ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಗೆ ಭೇಟಿ

Mumbai News Desk

ಆ. 25. ಬಾಂಬೆ ಬಂಟ್ಸ್ ಅಸೋಷಿಯೇಶನ್ ವತಿಯಿಂದ ವಾರ್ಷಿಕ ಶೈಕ್ಷಣಿಕ ಸಹಾಯ ವಿತರಣಾ,ಯಕ್ಷಗಾನ,ಸಾಧಕರಿಗೆ ಸನ್ಮಾನ

Mumbai News Desk

ಉದ್ಯಾವರ ಶ್ರೀ ಭಗವತಿ ಕ್ಷೇತ್ರ ಮಂಜೇಶ್ವರ : ಡಿ. 14ರಿಂದ 17ರ ತನಕ ನಡಾವಳಿ ಮಹೋತ್ಸವ ಹಾಗೂ ಭೇಟಿ ಉತ್ಸವ

Mumbai News Desk

ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ. ಮೇ27:- ಶನಿ ಜಯಂತಿ ಉತ್ಸವ .ತಿಲದೀಪೋತ್ಸವ.

Mumbai News Desk

ತುಳು ಸಂಘ ಬೋರಿವಲಿ ವತಿಯಿಂದ ನ. 16ರಂದು ಸ್ವಚ್ಛತಾ ಅಭಿಯಾನ

Mumbai News Desk

ಮಾ. 15, ತುಳು ಸಂಘ, ಬೋರಿವಲಿ 15ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

Mumbai News Desk