July 20, 2026
Mumbai News Kannada
ಪ್ರಕಟಣೆ

ಶ್ರೀ ಸಿದ್ಧಿ ವಿನಾಯಕ ಯಕ್ಷಗಾನ ಮಂಡಳಿ ಮುಂಬಯಿ: ಇಂದು ಘನ್ಸೋಲಿಯಲ್ಲಿ 21ನೇ ವರ್ಷದ ಸಂಭ್ರಮಾಚರಣೆ; ‘ಪಂಜುರ್ಲಿ ಪ್ರತಾಪ’ ಯಕ್ಷಗಾನ ಪ್ರದರ್ಶನ







ನವಿಮುಂಬಯಿ: ಇಪ್ಪತ್ತು ವರ್ಷಗಳ ಹಿಂದೆಯೇ ಮುಂಬಯಿ ಮಹಾನಗರದಲ್ಲಿ ಬಡಗುತಿಟ್ಟಿನ ಯಕ್ಷಗಾನ ರಂಗಕ್ಕೆ ತನ್ನದೇ ಆದ ಆಯಾಮವನ್ನು ನೀಡಬೇಕು ಹಾಗೂ ಕಲೆಯನ್ನು ಉಳಿಸಿ ಬೆಳೆಸಬೇಕು ಎನ್ನುವ ಉದಾತ್ತ ಉದ್ದೇಶದೊಂದಿಗೆ ಕಲಾ ಸಂಘಟಕ ಸುರೇಶ್ ಬರ್ಕಲ್ ಮಕ್ಕಿ ಮುಂತಾದವರ ಮುಂದಾಳತ್ವದಲ್ಲಿ ಹುಟ್ಟುಹಾಕಿದ ‘ಶ್ರೀ ಸಿದ್ಧಿ ವಿನಾಯಕ ಯಕ್ಷಗಾನ ಮಂಡಳಿ ಮುಂಬಯಿ’ ಯಕ್ಷ ಕಲಾ ಸಂಸ್ಥೆಯು ಇದೀಗ ತನ್ನ ಇಪ್ಪತ್ತೊಂದನೇ ವರ್ಷದ ಸಂಭ್ರಮದಲ್ಲಿದೆ.
ಈ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ನವಿಮುಂಬಯಿಯ ಘನ್ಸೋಲಿಯಲ್ಲಿರುವ ಶ್ರೀ ಮೂಕಾಂಬಿಕಾ ದೇವಾಲಯದ ಸಹಕಾರದಲ್ಲಿ, ಇಂದು ತಾ. 20-07-2026ರ ಸೋಮವಾರ ಸಂಜೆ 5.45 ರಿಂದ ಘನ್ಸೋಲಿಯ ಶ್ರೀ ಮೂಕಾಂಬಿಕಾ ದೇವಾಲಯದ ಸನ್ನಿಧಾನದಲ್ಲಿ ಭವ್ಯ ಯಕ್ಷಗಾನ ಪ್ರದರ್ಶನ ಹಾಗೂ ಸಭಾ ಕಾರ್ಯಕ್ರಮ ಜರುಗಲಿದೆ.

‘ಪಂಜುರ್ಲಿ ಪ್ರತಾಪ’ ಯಕ್ಷಗಾನ ವೈಭವ

ಇದೇ ಸಂದರ್ಭದಲ್ಲಿ ಶ್ರೀ ಸಿದ್ಧಿ ವಿನಾಯಕ ಯಕ್ಷಗಾನ ಮಂಡಳಿ ಮುಂಬಯಿ ಆಶ್ರಯದಲ್ಲಿ, ಶ್ರೀ ಸುರೇಶ್ ರಾವ್ ಬಾಕೂರು ವಿರಚಿತ ‘ಪಂಜುರ್ಲಿ ಪ್ರತಾಪ’ ಎಂಬ ಪುಣ್ಯ ಕಥಾ ಭಾಗವು ಯಕ್ಷಗಾನ ರೂಪದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಪ್ರದರ್ಶನದಲ್ಲಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳದ ಅತಿಥಿ ಕಲಾವಿದರು ಭಾಗವಹಿಸಿ ಕಲಾ ರಸದೌತಣ ನೀಡಲಿದ್ದಾರೆ.

ಸಭಾ ಕಾರ್ಯಕ್ರಮ ಮತ್ತು ಗಣ್ಯರ ಉಪಸ್ಥಿತಿ

ಧರ್ಮದರ್ಶಿ ಶ್ರೀ ಅಣ್ಣಿ ಸಿ. ಶೆಟ್ಟಿ ಅವರ ಶುಭ ಆಶೀರ್ವಾದದೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು.

  • ಅಧ್ಯಕ್ಷತೆ: ಶ್ರೀ ಮೂಕಾಂಬಿಕಾ ದೇವಾಲಯದ ಅಧ್ಯಕ್ಷರು ಹಾಗೂ ಧರ್ಮದರ್ಶಿಗಳಾದ ಶ್ರೀ ಅಣ್ಣಿ ಸಿ. ಶೆಟ್ಟಿ (ಕಲಾಪೋಷಕರು) ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
  • ಆಶೀರ್ವಚನ: ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಗುರುಪ್ರಸಾದ್ ಭಟ್ ಅವರು ಶುಭ ಹಾರೈಕೆಯ ನುಡಿಗಳನ್ನಾಡಲಿದ್ದಾರೆ.

    ಸಮಾರಂಭದಲ್ಲಿ ನಗರದ ಜನಪ್ರಿಯ ಉದ್ಯಮಿಗಳು ಹಾಗೂ ಕಲಾ ಪೋಷಕರುಗಳಾದ ಈ ಕೆಳಗಿನ ಗಣ್ಯರು ಉಪಸ್ಥಿತರಿರಲಿದ್ದಾರೆ:
  • ಶ್ರೀ ಶ್ಯಾಮ್ ಎನ್. ಶೆಟ್ಟಿ
  • ಶ್ರೀ ಸುರೇಶ್ ಭಂಡಾರಿ ಕಡಂದಲೆ ಫ್ಯಾಂಟೋಫರ್
  • ಶ್ರೀ ಸತೀಶ್ ಶೆಟ್ಟಿ ಕಿಡಿಯೂರು
  • ಶ್ರೀ ಕೆ.ಎಂ. ಶೆಟ್ಟಿ ಸುರತ್ಕಲ್, ಘನ್ಸೋಲಿ
  • ಶ್ರೀ ಪ್ರವೀಣ್ ಶೆಟ್ಟಿ ಹಿಲಿಯಾಣ, ಠಾಣೆ
  • ಶ್ರೀ ಜಗದೀಶ್ ಶೆಟ್ಟಿ ನಂದಿಕೂರು, ಘನ್ಸೋಲಿ
  • ಶ್ರೀ ನಾಗೇಶ್ ಶೆಟ್ಟಿ ಬೈಕಾಡಿ ಹೆದ್ದಾರಿ ಮನೆ
  • ಶ್ರೀ ಭಾಸ್ಕರ್ ಶೆಟ್ಟಿ ಖಾಂದೇಶ್
  • ಶ್ರೀ ಧನಂಜಯ ಶೆಟ್ಟಿ ಕೊಲ್ಲೆ
  • ಶ್ರೀ ಮೋಹನ್ ಕುಮಾರ್ ಗೌಡ
  • ಶ್ರೀ ಸಂದರ್ಶ್ ಶೆಟ್ಟಿ, ಹಾಲಾಡಿ, ಘನ್ಸೋಲಿ
  • ಶ್ರೀ ಬಾಲಕೃಷ್ಣ ಶೆಟ್ಟಿ ಕೆಂಜೂರು
  • ಶ್ರೀ ಉದಯ ಶೆಟ್ಟಿ, ತುರ್ಬೆ
  • ಶ್ರೀ ರಾಜೇಶ್ ಗೌಡ ಪಂಜ, ನೆರೂಲ್
  • ಶ್ರೀ ಸತೀಶ್ ಶೆಟ್ಟಿ ಸಾಸ್ತಾನ
  • ಶ್ರೀ ಮಹೇಶ್ ಶೆಟ್ಟಿ ಹಾವಂಜೆ, ಸಿಬಿಡಿ
  • ಶ್ರೀ ರಾಜೇಂದ್ರ ಶೆಟ್ಟಿ, ಘನ್ಸೋಲಿ
  • ಶ್ರೀ ಪದ್ಮನಾಭ ಗುರುಸ್ವಾಮಿ, ಘನ್ಸೋಲಿ
  • ಶ್ರೀ ರಘುನಾಥ್ ಶೆಟ್ಟಿ ಠಾಣೆ
  • ಶ್ರೀ ನವೀನ್ ಶೆಟ್ಟಿ ಮುಂಡಾಡಿ, ಉಲ್ಲಾಸ್ ನಗರ
  • ಶ್ರೀ ನವೀನ್ ಸಾಲ್ಯಾನ್, ಘನ್ಸೋಲಿ
  • ಶ್ರೀ ಜಯರಾಮ್ ಶೆಟ್ಟಿ ಎಣ್ಣೆಹೊಳೆ, ವಾಶಿ

.

ಸುರೇಶ್ ಬರ್ಕಲ್ ಮಕ್ಕಿ ಸಂಚಾಲಕರು ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಮುಂಬೈ

ಕಲಾಭಿಮಾನಿಗಳಿಗೆ ಆದರದ ಸ್ವಾಗತ:
ಈ ಯಕ್ಷಗಾನ ಪ್ರದರ್ಶನ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾ ರಸಿಕರು, ಯಕ್ಷಗಾನ ಪ್ರಿಯರು ಮತ್ತು ಅಭಿಮಾನಿ ಬಳಗದವರು ಬಂದು ಸಹಕರಿಸಬೇಕಾಗಿ ಶ್ರೀ ಸಿದ್ಧಿ ವಿನಾಯಕ ಯಕ್ಷಗಾನ ಮಂಡಳಿ ಮುಂಬಯಿಯ ಸಂಚಾಲಕರಾದ ಶ್ರೀ ಸುರೇಶ್ ಬರ್ಕಲ್ ಮಕ್ಕಿ (ಮೊ. ನಂ: 8861628077) ಅವರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.



Related posts

ಶ್ರೀ ಚಾಮುಂಡೇಶ್ವರಿ ಕ್ಷೇತ್ರ (ಸಾವರ್ಕರ್ ನಗರ್ -ಥಾಣೆ)ಅ. 23ರಂದು ದೇವರ ನೂತನ ಪೀಠ ಮಂಟಪ ಹಾಗೂ ದ್ವಾರ ಪ್ರತಿಷ್ಠಾಪನೆ.

Mumbai News Desk

ಮುಂಬೈ: ಜೂನ್ 14ರಂದು ಶ್ರೀ ಭುವನೇಶ್ವರಿ ಸೇವಾ ಸಮಿತಿಯಿಂದ 43ನೇ ವಾರ್ಷಿಕ ಮಹೋತ್ಸವ ಮತ್ತು ಮೂರ್ತಿ ಪ್ರತಿಷ್ಠಾಪನಾ ಪೂಜೆ

Mumbai News Desk

ಗೋರೆವಾಂವ್ ಪೂರ್ವದ  ಶ್ರೀ ಸದ್ಗುರುನಿತ್ಯಾನಂದ ಆಶ್ರಮ. ಜು10ರಂದು  ಗುರು ಪೂರ್ಣಿಮೆ.

Mumbai News Desk

ಮಾ.16: ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ವತಿಯಿಂದ ವಿಶ್ವಮಹಿಳಾ ದಿನಾಚರಣೆ, ಸಂಸ್ಥಾಪಕ ದಿನಾಚರಣೆ ಹಾಗೂ ಹಳದಿಕುಂಕುಮ ಕಾರ್ಯಕ್ರಮ.

Mumbai News Desk

ಶ್ರೀ ಮಹಾವಿಷ್ಣು ಮಂದಿರದಲ್ಲಿ ಮಾರ್ಚ್ 16 ಶನಿವಾರ ವಾರ್ಷಿಕ ಸತ್ಯನಾರಾಯಣ ಮಹಾಪೂಜೆ ಹಾಗೂ ಸಾಮೂಹಿಕ ಶನಿ ಪೂಜೆ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ನಾಯ್ಗಾಂವ್ – ವಿರಾರ್ ಶಾಖೆಜು. 28ಕ್ಕೆ “ಪ್ರಸ್ತುತ ಶಿಕ್ಷಣ ವ್ಯವಸ್ಥೆ” ಬಗ್ಗೆ ವಿಚಾರ ಸಂಕಿರಣ

Mumbai News Desk