35 C
Mumbai
May 10, 2026
Mumbai News Kannada
ಪ್ರಕಟಣೆ

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಆ. 10 ರಂದು ಕಾಂದಿವಲಿಯಲ್ಲಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಜಂಟಿ ಕಾರ್ಯಕ್ರಮ.





ಮುಂಬಯಿ : ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಸಮಿತಿಯ ವತಿಯಿಂದ ಆ. 10 ನೇ ಭಾನುವಾರ ಬೆಳಿಗ್ಗೆ ಗಂ.10.00 ರಿಂದ ಮಧ್ಯಾಹ್ಣ ಗಂ. 1.00 ತನಕ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗ ಹಾಗೂ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಸಹಯೋಗದೊಂದಿಗೆ, ಕಾಂದಿವಲಿ ಪೂರ್ವದ ಅವೆನ್ಯೂ ಹೋಟೇಲಿನ ಮುಕ್ತ ಸಭಾಂಗಣದಲ್ಲಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಎಂಬ ಎರಡು ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಆಯೋಜಿಸಲಾಗಿದೆ.

ತುಳುನಾಡು ಮೂಲದ ಬಂಟರೆಲ್ಲರೂ ಮೂಲತಃ ಭತ್ತವನ್ನು ಬೆಳೆಯುವ ಕೃಷಿಕರಾಗಿದ್ದು,ತಮ್ಮ ದೈನಂದಿನ ಆಹಾರಕ್ಕೆ ಅಕ್ಕಿಯನ್ನು ಉಪಯೋಗಿಸುವುದರ ಜೊತೆಗೆ ಇದೇ ವಿಕ್ರಯದ ವಸ್ತು ಮತ್ತು ಚಲಾವಣೆಯ ಹಣವಾಗಿತ್ತು ( ಕಾರ್ಮಿಕರಿಗೆ ಅಕ್ಕಿ-ಭತ್ತದ ರೂಪದಲ್ಲಿ ಮಜೂರಿ ನೀಡಲಾಗುತ್ತಿತ್ತು). ಆ ಕಾಲದ ಮಳೆಗಾಲದ ದಿನಗಳಲ್ಲಿ, ವಿಶೇಷವಾಗಿ ಆಟಿ ತಿಂಗಳಲ್ಲಿ ನಮ್ಮವರ ಬದುಕು ಹೇಗೆ ಇತ್ತು? ತಿನ್ನುತ್ತಿದ್ದ ಆಹಾರ, ಬಳಸುತ್ತಿದ್ದ ಸಾಧನಗಳ, ಅಚರಿಸುತ್ತಿದ್ದ ಹಬ್ಬಗಳು, ಮನರಂಜನೆ, ತಯಾರಿಸುತ್ತಿದ್ದ ಕುಶಲ ಸಾಧನಗಳು ಮುಂತಾದ ವಿಷಯಗಳನ್ನು ಮೆಲುಕು ಹಾಕಿ ಮುಂಬಯಿಯಲ್ಲಿ ಜನಿಸಿದ ಯುವ ಪೀಳಿಗೆಗೆ ತಿಳಿಸುವುದಕ್ಕಾಗಿಯೇ ಹಮ್ಮಿಕೊಂಡ ಕಾರ್ಯಕ್ರಮ “ಆಟಿದ ನೆನೆಪು”. ಇದರ ಜೊತೆಗೆ, ಇಂದಿನ ದಿನಗಳಲ್ಲಿ ಯುವ ಜನತೆ ಸಾಕಷ್ಟು ವಿದ್ಯಾಭ್ಯಾಸವನ್ನು ಕಲಿತರೂ ಸಹಾ ವಾಸ್ತವ ಜಗತ್ತಿನ ಪ್ರಸಕ್ತ ವಾತಾವರಣದಲ್ಲಿ ಅವರಿಗೆ ಕೆಲಸ ಮಾಡುವ ಕಾರ್ಯಕ್ಷಮತೆ ಹಾಗೂ ಕುಶಲತೆಗಳಿಲ್ಲದೇ ಎಲ್ಲಿಯೂ ನೌಕರಿ ದೊರೆಯುವುದಿಲ್ಲ. ಅಂಥಹವರ ಕೌಶಲ್ಯತೆಯನ್ನು ವೃದ್ಧಿಸಲು ಕೇಂದ್ರ ಸರಕಾರದ ಕೌಶಲ್ ವಿಕಾಸ ಹಾಗೂ ಉದ್ಯಮಶೀಲತಾ ಮಂತ್ರಾಲಯದ ಜೊತೆಗೆ ಟಾಟಾ ಸಂಸ್ಥೆಯು ಸೇರಿದ್ದು,ಅದರೊಂದಿಗೆ ನಗರದ Issar Financial Service ನ CMD ಹಾಗೂ ಬಂಟರ ಸಂಘ ದ ಗೌ. ಪ್ರ. ಕಾರ್ಯದರ್ಶಿ Dr R. K Shetty ಯವರ ಸಂಚಾಲಕತ್ವದ ಸಂಜೀವಿನಿ ಟ್ರಸ್ಟ್ ಕೈಜೋಡಿಸಿದ್ದು,ಅದರ ಮುಖೇನ ಬಂಟ ಯುವಕರಿಗೆ ತರಬೇತಿ ನೀಡುವ ಕಾಯಕಕ್ಕೆ ತೊಡಗಿರುತ್ತಾರೆ. ಅದರ ಸಂಪೂರ್ಣ ಮಾಹಿತಿಯನ್ನು ನೀಡಲೋಸುಗವಾಗಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ವತಿಯಿಂದ “ಸ್ಕಿಲ್ಲ್ ಫಾರ್ ಎಂಪ್ಲಾಯ್” ಎಂಬ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿದೆ .

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿಕೊಂಡಾಡಿ ಇವರ ನೇತೃತ್ವದಲ್ಲಿ ನಡೆಯಲಿರುವ ಅಂದಿನ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ ಭೋಜ ಶೆಟ್ಟಿಯವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ Issar Financial Service ನ CMD ಹಾಗೂ ಬಂಟರ ಸಂಘ ದ ಗೌ. ಪ್ರ. ಕಾರ್ಯದರ್ಶಿ Dr R. K Shetty ಯವರು ಆಗಮಿಸಲಿದ್ದು, ಸ್ಕಿಲ್ಲ್ ಫಾರ್ ಎಂಪ್ಲಾಯ್ ಬಗ್ಗೆ ಮಾಹಿತಿ ನೀಡಲಿರುವರು. ಹಿಂದಿನ ಕಾಲದ ಆಟಿ ತಿಂಗಳ ನೆನಪುಗಳನ್ನು ಮೆಲುಕು ಹಾಕುವ ಉಪನ್ಯಾಸವನ್ನು ಖ್ಯಾತ ವಾಗ್ಮಿ, ಬಂಟರ ಸಂಘ ಬೊರಿವಿಲಿ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆಯವರು ನೀಡಲಿರುವರು. ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯ ಅತಿಥಿಗಳಾಗಿ “Mrs International 2025” ಸೌಂದರ್ಯ ಸ್ಫರ್ಧೆಯಲ್ಲಿ “Mrs Talent” ಆಗಿ ಆಯ್ಕೆಯಾದ ಶ್ರೀಮತಿ ಮಧುರಾ ಹರೀಶ್ ಶೆಟ್ಟಿಯವರು ಆಗವಿಸಲಿರವರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಸುನೀತಾ ಎನ್ ಹೆಗ್ಡೆಯವರ ಮುಂದಾಳತ್ವದಲ್ಲಿ ಮಹಿಳಾ ವಿಭಾಗದ ಎಲ್ಲಾ ಸದಸ್ಯೆಯರು ಅಂದಿನ ದಿನದ ಊಟೋಪಚಾರದ ವ್ಯವಸ್ಥೆಯನ್ನು ಸ್ವತಃ ತಾವೇ ಮನೆಯಲ್ಲಿಯೇ ತಯಾರಿಸಿದ ಖಾದ್ಯಗಳಿಂದ ನೋಡಿಕೊಳ್ಳಲಿರುವರು. ಸಾಂಸ್ಕೃತಿಕ ಕಾರ್ಯಕ್ರಮದ ಜವಾಬ್ದಾರಿಯನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಎಸ್ ಶೆಟ್ಟಿಯರು ಹಾಗೂ ಸ್ಕಿಲ್ಲ್ ಫಾರ್ ಎಂಪ್ಲಾಯ್ ಕಾರ್ಯಕ್ರಮದ ಜವಾಬ್ದಾರಿಯನ್ನು ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಜಿ ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ ವಹಿಸಿಕೊಂಡಿರುತ್ತಾರೆ.

ಈ ಎಲ್ಲಾ ಕಾರ್ಯಕ್ರಮಗಳು ಸಂಘದ ಪಶ್ಚಿಮ ವಲಯದ ಪ್ರಾದೇಶಿಕ ಸಮಿತಿಗಳ ಸಮನ್ವಯಕರಾದ ಖಾಂದೇಶ್ ಭಾಸ್ಕರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿರುತ್ತದೆ. ಬಂಟರ ಸಂಘದ ಹಾಗೂ ಪ್ರಾದೇಶಿಕ ಸಮಿತಿಯ ಎಲ್ಲಾ ಪದಾಧಿಕಾರಿಗಳು,ಸಲಹೆಗಾರರು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಎಲ್ಲಾ ಉಪಸಮಿತಿಗಳ ಸದಸ್ಯರುಗಳು ಸಂಪೂರ್ಣ ಸಹಕಾರವನ್ನು ನೀಡಿರುತ್ತಾರೆ. ಜೋಗೇಶ್ವರಿಯಿಂದ ದಹಿಸರ್ ವರೆಗಿನ ಸಮಾಜ ಬಾಂಧವರು ಬಂದು ಇದರಲ್ಲಿ ಸಹಭಾಗಿಗಳಾಗಿ , ವಿಶೇಷವಾಗಿ ಯುವ ಜನತೆ ಸ್ಕಿಲ್ಲ್ ಫಾರ್ ಎಂಪ್ಲಾಯ್ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ, ಗೌ. ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ಜೊತೆಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ ತೆಲ್ಲಾರ್, ಜೊತೆ ಕೋಶಾಧಿಕಾರಿ, ಶಶಿಧರ ಕೆ. ಶೆಟ್ಟಿ ಇನ್ನಂಜೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಅರ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಜೆ ಶೆಟ್ಟಿ , ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ ಶೆಟ್ಟಿ,ಕೋಶಾಧಿಕಾರಿ ಅವಿನಾಶ್ ಎಂ ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜತೆ ಕೋಶಾಧಿಕಾರಿ ರಮೇಶ್ ಹೆಚ್ ಶೆಟ್ಟಿ, ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ, ಸಂಚಾಲಕಿ ಶೈಲಜಾ ಎ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿ, ಕಾರ್ಯದರ್ಶಿ ಸರಿತಾ ಎಂ ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಎಸ್ ಶೆಟ್ಟಿ, ಜತೆ ಕಾರ್ಯದರ್ಶಿ ಯೋಗಿನಿ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಹೆಚ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಎಸ್ ಶೆಟ್ಟಿ, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಜಿ ಶೆಟ್ಟಿ , ಮುಖ್ಯ ಸಲಹೆಗಾರರಾದ ಮುಂಡಪ್ಪ ಎಸ್. ಪಯ್ಯಡೆ, ಮನೋಹರ ಎನ್. ಶೆಟ್ಟಿ, N. ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ ಮತ್ತು ರವೀಂದ್ರಎಸ್. ಶೆಟ್ಟಿ ಮತ್ತು ಎರ್ಮಾಳು ಹರೀಶ್ ಶೆಟ್ಟಿಯವರು ತಿಳಿಸಿರುತ್ತಾರೆ .ಪ್ರಾದೇಶಿಕ ಸಮಿತಿಯ ವ್ಯಾಪ್ತಿಯಲ್ಲಿರುವ ಎಲ್ಲಾ ಸಮಾಜ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿರುತ್ತಾರೆ.



Related posts

ಆಗಸ್ಟ್ 10 ರಂದು ಡೊಂಬಿವಲಿಯಲ್ಲಿ ‘ಚತುರ್ಜನ್ಮ ಮೋಕ್ಷ’ ಯಕ್ಷಗಾನ. ಅದ್ದೂರಿ ಸನ್ಮಾನ ಕಾರ್ಯಕ್ರಮ.

Mumbai News Desk

ಇಂದು ಕಾಪು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ, ಪತ್ರಕರ್ತ ದಿ. ಜಯಂತ್ ಪಡುಬಿದ್ರಿ ಅವರ ಸಂಸ್ಕರಣೆ

Mumbai News Desk

ದಿ. ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ (ರಿ) ಮುಂಬಯಿ. ನಾಳೆ (ಸೆ. 16) ವಿಶ್ವಕರ್ಮ ಮಹೋತ್ಸವ.

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ ಥಾಣೆ : ಆಗಸ್ಟ್ 10ರಂದು “ತುಳುನಾಡ ಬಲಿಯೇಂದ್ರ” ಯಕ್ಷಗಾನ ತಾಳಮದ್ದಳೆ

Mumbai News Desk

ಡಿ. 3 : ಕುಲಾಲ ಸಂಘ ಮುಂಬಯಿ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ – ಸನ್ಮಾನ – ಯಕ್ಷಗಾನ-ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಮಾರ್ಚ್ 26-27ರಂದು ಕಾಪುವಿನ 3 ಮಾರಿಗುಡಿಯಲ್ಲಿ ‘ಕಾಲವಧಿ ಸುಗ್ಗಿ ಮಾರಿಪೂಜೆ’

Mumbai News Desk