32 C
Mumbai
March 7, 2026
Mumbai News Kannada
ಮುಂಬಯಿ

ಶ್ರೀ ಮಹಾವಿಷ್ಣು ಮಂದಿರದಲ್ಲಿ 48ನೇ ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಏಕಾಹ ಭಜನೆ ಯಶಸ್ವಿ ಸಂಪನ್ನ





2027 ರಲ್ಲಿ ಜರಗುವ ಮಂದಿರದ ಸುವರ್ಣ ಮಹೋತ್ಸವದ ಕಾರ್ಯಕ್ರಮ ನೆರೆವೇರಲು ನಾವೆಲ್ಲರೂ ಕೈಜೋಡಿಸೋಣ – ಎಡ್ಮರ್ ಗುತ್ತು ರಮೇಶ್ ಶೆಟ್ಟಿ

ಡೊಂಬಿವಲಿ: ಭಕ್ತಿಯ ಸಾಗರದಲ್ಲಿ ಮಿಂದೆದ್ದ ಡೊಂಬಿವಲಿಯ ಶ್ರೀ ಮಹಾವಿಷ್ಣು ಮಂದಿರವು, ಶ್ರೀ ಮುಂಬ್ರಾ ಮಿತ್ರ ಭಜನಾ ಮಂಡಳಿಯ ಸಂಚಾಲಕತ್ವದಲ್ಲಿ ಆಯೋಜಿಸಿದ್ದ 48ನೇ ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಏಕಾಹ ಭಜನಾ ಕಾರ್ಯಕ್ರಮವು ಅಕ್ಟೋಬರ್ 11ರ ಶನಿವಾರದಿಂದ ಅಕ್ಟೋಬರ್ 12ರ ರವಿವಾರದವರೆಗೆ ವೈಭವದಿಂದ ನೆರವೇರಿತು.

​ಸತತ ಇಪ್ಪತ್ತನಾಲ್ಕು ಗಂಟೆಗಳ ಕಾಲ ನಡೆದ ಈ ಏಕಾಹ ಭಜನಾ ಸಂಕೀರ್ತನೆಯಲ್ಲಿ, ಸ್ಥಳೀಯ ಭಜನಾ ಮಂದಳಿಯೊಂದಿಗೆ ಒಟ್ಟು 28 ಭಜನಾ ಮಂಡಳಿಗಳು ಭಾಗವಹಿಸಿ ತಮ್ಮ ಇಷ್ಟದೈವದ ನಾಮ ಸಂಕೀರ್ತನೆಯ ಮೂಲಕ ಭಕ್ತಿ ಸೇವೆ ಸಲ್ಲಿಸಿ ಕಾರ್ಯಕ್ರಮಕ್ಕೆ ಯಶಸ್ಸಿನ ಮೆರುಗು ನೀಡಿದರು.

​ಕಾರ್ಯಕ್ರಮದ ಆರಂಭದಲ್ಲಿ, ಅರ್ಚಕರಾದ ಶ್ರೀ ಹರೀಶ್ ಪದ್ಮಶಾಲಿ ಅವರು ಶ್ರೀ ಮಹಾವಿಷ್ಣು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪವಿತ್ರ ಕಳಸ ಪ್ರತಿಷ್ಠಾಪನೆ ಮಾಡಿದರು. ಬಳಿಕ, ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮಕ್ಕೆ ಅತಿಥಿ ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವಲಿಸಲಾಯಿತು.

​ಕಾರ್ಯಕ್ರಮದ ದೀಪ ಪ್ರಜ್ವಲನೆಗೆ ಮುಖ್ಯ ಅತಿಥಿಗಳಾಗಿ ಶ್ರೀ ರಮೇಶ್ ಶೆಟ್ಟಿ (ಅಧ್ಯಕ್ಷರು, ಜಗಜ್ಯೋತಿ ಕಲಾ ವೃಂದ, ಡೊಂಬಿವಲಿ), ಶ್ರೀ ಶಿವರಾಂ ರೈ (ಸಮಾಜ ಸೇವಕರು), ಮತ್ತು ಶ್ರೀ ರಾಘವೇಂದ್ರ ಕಾಪು (ಸಮಾಜ ಸೇವಕರು) ಅವರು ಭಾಗವಹಿಸಿದ್ದರು. ಮಂದಿರದ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣ, ಗೌರವ ಅಧ್ಯಕ್ಷರಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್, ಮಹಿಳಾ ವಿಭಾಗದ ಕಾರ್ಯದ್ಯಕ್ಷೆ ಶ್ರೀಮತಿ ಸವಿತಾ ಸಿ. ಸಾಲಿಯಾನ್, ಕೋಶಾಧಿಕಾರಿ ಶ್ರೀ ಪ್ರವೀಣ್ ಶೆಟ್ಟಿ, ಮಂದಿರದ ಭುವಾಜಿ ಶ್ರೀ ಅರವಿಂದ್ ಪದ್ಮಶಾಲಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಅತಿಥಿ ಗಣ್ಯರನ್ನು ಸ್ವಾಗತಿಸಿ, ಪುಷ್ಪ ಮತ್ತು ಶಾಲು ನೀಡಿ ಗೌರವಿಸಿದರು.

​ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿ ಗಣ್ಯರಾದ ಶ್ರೀ ರಮೇಶ್ ಶೆಟ್ಟಿ ಅವರು, 48ನೇ ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನೆಗೆ ಶುಭ ಹಾರೈಸುತ್ತಾ, “ಒಂದು ಸಂಸ್ಥೆಯಲ್ಲಿ 48 ವರ್ಷಗಳ ಕಾಲ ಕಾರ್ಯಕಾರಿ ಸಮಿತಿಯೊಂದಿಗೆ ಇಂತಹ ದೇವತಾ ಕಾರ್ಯಕ್ರಮವನ್ನು ನಿರಂತರವಾಗಿ ನೆರವೇರಿಸುವುದು ಸುಲಭದ ಕೆಲಸವಲ್ಲ. ಈ ದೈವಿಕ ಕಾರ್ಯಗಳು ನಿರಂತರವಾಗಿ ಸಾಗಲಿ,” ಎಂದು ಹಾರೈಸಿದರು. ಅಲ್ಲದೆ, “2027 ರಲ್ಲಿ ಜರಗಲಿರುವ ಮಂದಿರದ ಸುವರ್ಣ ಮಹೋತ್ಸವದ ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಲು ನಾವೆಲ್ಲರೂ ಕೈಜೋಡಿಸೋಣ,” ಎಂದು ಕರೆ ನೀಡಿದರು.

​ಇನ್ನೊಬ್ಬ ಅತಿಥಿ ಗಣ್ಯರಾದ ಶ್ರೀ ರಾಘವೇಂದ್ರ ಕಾಪು ಅವರು ಮಾತನಾಡಿ, “ಡೊಂಬಿವಲಿ ಪರಿಸರದಲ್ಲಿ ಮಹಾವಿಷ್ಣು ಮಂದಿರದ ಕಾರ್ಯ ಚಟುವಟಿಕೆಗಳನ್ನು ಹಲವು ವರ್ಷಗಳಿಂದ ಗಮನಿಸುತ್ತಿದ್ದೇನೆ. ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಎನಿಸುತ್ತದೆ. ಭಜನೆ ಹಾಗೂ ಕುಣಿತ ಭಜನೆಯಲ್ಲಿ ಉತ್ತಮ ತಂಡವನ್ನು ಹೊಂದಿದ ಮಂದಿರವಿದು,” ಎಂದು ಶ್ಲಾಘಿಸಿ, ಮಂದಿರದ ಸುವರ್ಣ ಮಹೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.

ಏಕಾಹ ಭಜನಾ ಕಾರ್ಯಕ್ರಮದಲ್ಲಿ ಸ್ಥಳೀಯ ಮಂಡಳಿಯೊಂದಿಗೆ ವಿವಿಧ ಭಾಗಗಳಿಂದ ಆಗಮಿಸಿದ್ದ ಈ ಕೆಳಗಿನ ಮಂಡಳಿಗಳು ಭಜನಾ ಸೇವೆ ಸಲ್ಲಿಸಿದವು: ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಡೊಂಬಿವಲಿ, ಶ್ರೀ ಜಗದಂಬ ಮಂದಿರ ಡೊಂಬಿವಲಿ, ತುಳು ವೆಲ್ಫೇರ್ ಅಸೋಸಿಯೇಷನ್ ಸಂಚಾಲಕತ್ವದ ಶ್ರೀ ಲಕ್ಷ್ಮಿ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ಜೆಪಾಡ ಡೊಂಬಿವಲಿ, ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ, ಶ್ರೀ ವಿಠ್ಠಲ ಭಜನಾ ಮಂಡಳಿ ಮೀರಾ ರೋಡ್, ಬಿಲ್ಲವರ ಅಸ್ಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿ, ಶ್ರೀ ವರದ ಸಿದ್ಧಿ ವಿನಾಯಕ ಭಜನಾ ಮಂಡಳಿ ಡೊಂಬಿವಲಿ ಪೂರ್ವ, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ, ಶ್ರೀ ದುರ್ಗಾಪರಮೇಶ್ವರಿ ಮಂಡಳಿ, ನವಿ ಮುಂಬೈ, ಶ್ರೀ ಲಕ್ಷ್ಮೀ ನಾರಾಯಣ ಭಜನಾ ಸಮಿತಿ ಮೀರಾ ರೋಡ್, ಶ್ರೀ ಕಲ್ಕಿ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಭ್ರಮರಾಂಬಿಕಾ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಪೋರ್ಟ್, ಶ್ರೀ ಶನೀಶ್ವರ ದೇವಸ್ಥಾನ ನೆರೋಲ್, ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಡೊಂಬಿವಲಿ, ಯಶಸ್ವಿ ಭಜನಾ ಮಂಡಳಿ, ಡೊಂಬಿವಲಿ, ಅಮೃತಾನಂದಮಯಿ ಭಜನಾ ಮಂಡಳಿ, ಡೊಂಬಿವಲಿ, ಅಯ್ಯಪ್ಪ ಭಕ್ತ ಭಜನಾ ಮಂಡಳಿ, ಡೊಂಬಿವಲಿ, ಶಬರಿ ಭಜನಾ ಮಂಡಳಿ, ಡೊಂಬಿವಲಿ, ಸದ್ಗುರು ಕೃಷ್ಣ ಭಜನಾ ಮಂಡಳಿ, ವಿಲೇ ಪಾರ್ಲೆ, ನಿತ್ಯಾನಂದ ಚಾಮುಂಡೇಶ್ವರಿಯೇರಿ ಭಜನಾ ಮಂಡಳಿ, ಸಾಕಿನಾಕಾ, ಫ್ರೆಂಡ್ಸ್ ಸ್ವಾವಲಂಬನ ಭಜನಾ ಮಂಡಳಿ, ಕರ್ನಾಟಕ ಸಂಘ – ಡೊಂಬಿವಲಿ, ನವೋದಯ ಕನ್ನಡ ಸೇವಾ ಸಂಘ, ಥಾಣೆ, ಜೈ ಭವಾನಿ ಶನೀಶ್ವರ ಮಂದಿರ, ಡೊಂಬಿವಲಿ, ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ, ಫೋರ್ಟ್.

​ಭಜನಾ ಮಂಗಲೋತ್ಸವಕ್ಕೆ ಧನ ಹಾಗೂ ವಸ್ತು ರೂಪದಲ್ಲಿ ಸಹಕರಿಸಿದ ದಾನಿಗಳನ್ನು ಶಾಲು ಹಾಗೂ ಪ್ರಸಾದ ನೀಡಿ ಗೌರವಿಸಲಾಯಿತು. ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನ ಸೇವೆಯು ಭಕ್ತಾದಿಗಳಿಗೆ ನೆರವೇರಿತು.

​ರವಿವಾರ ಬೆಳಿಗ್ಗೆ ಕಾರ್ಯಕ್ರಮದ ಸಮಾಪ್ತಿಯಲ್ಲಿ, ದೇವರಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು, ಭಕ್ತಾದಿಗಳು ಹಾಗೂ ಮಂದಿರದ ಸದಸ್ಯರುಗಳಿಗೆ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸಚಿನ್ ಜಿ. ಪೂಜಾರಿ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದರು. ಈ ಧಾರ್ಮಿಕ ಉತ್ಸವವು ಮಂದಿರದ ಮುಂದಿನ ಸುವರ್ಣ ಮಹೋತ್ಸವಕ್ಕೆ ಮುನ್ನುಡಿಯಂತಿದೆ.



Related posts

ಬಿಲ್ಲವರ ಅಸೋಸಿಯೇಶನಿನ ಮೀರಾ ರೋಡ್ ಸ್ಥಳೀಯ ಕಚೇರಿಯ ವತಿಯಿಂದ ಆಟಿಡೊಂಜಿ ದಿನ, ವಿದ್ಯಾರ್ಥಿ ವೇತನ ವಿತರಣೆ.

Mumbai News Desk

ಕರ್ನಾಟಕ ಸಂಘ ಪನ್ವೆಲ್ ಇದರ  34ನೇ ವಾರ್ಷಿಕೋತ್ಸವ.

Mumbai News Desk

12ನೇ ತರಗತಿಯ ಫಲಿತಾಂಶ : ಪ್ರಿಷಾ ಸದಾಶಿವ ಶೆಟ್ಟಿ , 88% ಅಂಕ 

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಗುರು ಪೂರ್ಣಿಮ ಪೂಜೆ.

Mumbai News Desk

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮ

Mumbai News Desk

ಬಂಟರ ಸಂಘ ಮುಂಬಯಿ,  ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಯುವ ವಿಭಾಗ ರಕ್ತದಾನ ಶಿಬಿರ.

Mumbai News Desk