27.4 C
Mumbai
July 2, 2026
Mumbai News Kannada
ಮುಂಬಯಿ

ಕಲಾ ಜಗತ್ತು ವಸುಂಧರ ವತಿಯಿಂದ ‘ವಸುಂಧರ ಆದರ್ಶ ದಂಪತಿ ಪ್ರಶಸ್ತಿ–2026’ ಪ್ರದಾನ ಸಮಾರಂಭ






ಆದರ್ಶ ವ್ಯಕ್ತಿಗಳನ್ನು ಸಮಾಜಕ್ಕೆ ಗುರುತಿಸುವ ಕಾರ್ಯಕ್ರಮ – ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ

ಮುಂಬಯಿ : ನಮ್ಮ ಹಿರಿಯರ ಪ್ರಕಾರ ವಿವಾಹ ಎಂಬುದು ಪವಿತ್ರ ಬಂಧನ. ಇದಕ್ಕಿಂತ ಮಿಗಿಲಾದ ಸಂಬಂಧ ಮತ್ತೊಂದಿಲ್ಲ. ಹಿಂದೆ ಕುಟುಂಬ ವ್ಯವಸ್ಥೆ ಭದ್ರವಾಗಿದ್ದು, ಹೆಚ್ಚಿನ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿ ನಾಲ್ಕು ಗೋಡೆಗಳ ಮಧ್ಯೆ ಸೀಮಿತರಾಗಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಜಾಗೃತಿಯಿಂದ ಕುಟುಂಬ ಜೀವನದಲ್ಲಿಯೂ ಅನೇಕ ಬದಲಾವಣೆಗಳು ಕಂಡುಬಂದಿವೆ.
ಯಶಸ್ವಿ ವೈವಾಹಿಕ ಜೀವನದಲ್ಲಿ ದೀರ್ಘಕಾಲ ಕಳೆದ ದಂಪತಿಗಳನ್ನು ಗೌರವಿಸಿ, ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಗುರುತಿಸುವ ಉದ್ದೇಶದಿಂದ ‘ವಸುಂಧರ ಆದರ್ಶ ದಂಪತಿ ಪ್ರಶಸ್ತಿ–2026’ ಪ್ರದಾನಿಸಲಾಯಿತು ಎಂದು ಕಲಾ ಜಗತ್ತು ಸಂಸ್ಥೆಯ ಅಧ್ಯಕ್ಷ ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ ಹೇಳಿದರು.

ಜೂ. 26ರಂದು ಬೊರಿವಲಿ ಪಶ್ಚಿಮ ಪ್ರಭೋದನ್ ಠಾಕ್ರೆ ನಾಟ್ಯಗ್ರಹದಲ್ಲಿ ಕಲಾ ಜಗತ್ತು ವಸುಂಧರ ವತಿಯಿಂದ ಜರಗಿದ ‘ವಸುಂಧರ ಆದರ್ಶ ದಂಪತಿ ಪ್ರಶಸ್ತಿ–2026’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸುಖೀ ದಾಂಪತ್ಯ ಜೀವನಕ್ಕೆ ಪರಸ್ಪರ ವಿಶ್ವಾಸ, ಗೌರವ, ತಾಳ್ಮೆ ಮತ್ತು ಹೊಂದಾಣಿಕೆ ಅತ್ಯಂತ ಮುಖ್ಯವೆಂದು ತಿಳಿಸಿದರು. ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರವನ್ನು ನೀಡುವ ಉದ್ದೇಶದಿಂದ ಚಿಣ್ಣರ ಬಿಂಬದಂತಹ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಇದನ್ನು ಇಡೀ ಜಗತ್ತೇ ಸ್ವಾಗತಿಸುತ್ತಿದೆ. ಇಂದಿನ ಕಾಲದಲ್ಲಿ ಸಮಾಜದಲ್ಲಿ ಉತ್ತಮ ಕುಟುಂಬ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಆದರ್ಶ ದಂಪತಿ ಯಂತಹ ಕಾರ್ಯಕ್ರಮಗಳು ಪ್ರೇರಣೆಯಾಗುತ್ತವೆ ಎಂದರು.

ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಶ್ರೀಮತಿ ಗೀತಾ ಮತ್ತು ಡಾ. ಸದಾನಂದ ಶೆಟ್ಟಿ ಹಾಗೂ ಶ್ರೀಮತಿ ಉಮಾ ಮತ್ತು ಡಾ. ಕೃಷ್ಣ ವೈ. ಶೆಟ್ಟಿ ಉಪಸ್ಥಿತರಿದ್ದು ಎಲ್ಲಾ ದಂಪತಿಗಳನ್ನು ಅಭಿನಂದಿಸಿದರು.

ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಕಲಾ ಜಗತ್ತು ವಸುಂಧರ ಸಂಸ್ಥೆಯ ವತಿಯಿಂದ ವಿಶಿಷ್ಠವಾದ ಕಾರ್ಯಕ್ರಮ ‘ವಸುಂಧರ ಆದರ್ಶ ದಂಪತಿ ಪ್ರಶಸ್ತಿ–2026’ ಪ್ರದಾನ ಸಮಾರಂಭವನ್ನು ಆಯೋಜಿಸಲಾಯಿತು. ಕಲಾ ಜಗತ್ತು ಸಂಸ್ಥೆಯ ಮಹಿಳಾ ವಿಭಾಗ ‘ವಸುಂಧರ’ ಇತ್ತೀಚೆಗೆ ಉದ್ಘಾಟನೆಯಾಗಿದ್ದು, ಮಹಿಳಾ ಸಬಲೀಕರಣ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಿದೆ. ಸಮಾರಂಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಆದರ್ಶ ದಾಂಪತ್ಯ ಜೀವನ ನಡೆಸಿ, ಸಮಾಜ ಸೇವೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಐದು ಮಂದಿ ಗಣ್ಯ ದಂಪತಿಗಳಾದ ಲಲಿತಾ ಶಂಕರನಾರಾಯಣ ಕಾರಂತ, ಕುಸುಮ ಕೃಷ್ಣರಾಜ್ ಸುವರ್ಣ, ವೀಣಾ ಉದಯ ಶೆಟ್ಟಿ, ಜ್ಯೋತಿ ಅನಂತ್ ಭಟ್ ಮತ್ತು ತಾರ ಉತ್ತಮ ಎಂ ಶೆಟ್ಟಿಗಾರ್.


‘ವಸುಂಧರ ಆದರ್ಶ ದಂಪತಿ ಪ್ರಶಸ್ತಿ–2026’ ಸ್ವೀಕರಿಸಿ ಮಾತನಾಡಿದ ದಂಪತಿಗಳು ತಮ್ಮ ದಾಂಪತ್ಯ ಜೀವನದ ಯಶಸ್ವಿಯಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತಾ, ನಮ್ಮ ದಾಂಪತ್ಯ ಜೀವನದ ಯಶಸ್ಸಿನ ರಹಸ್ಯ ಪರಸ್ಪರ ಪ್ರೀತಿ, ನಂಬಿಕೆ, ಗೌರವ, ತಾಳ್ಮೆ ಮತ್ತು ಹೊಂದಾಣಿಕೆ. ಸುಖ–ದುಃಖಗಳಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತು, ಪರಸ್ಪರ ಅರ್ಥಮಾಡಿಕೊಂಡು, ಕುಟುಂಬದ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕಿದ್ದೇವೆ. ಇದೇ ನಮ್ಮ ಸಂತೋಷದ ದಾಂಪತ್ಯ ಜೀವನದ ಆಧಾರವಾಗಿದೆ ಎಂದರು.

ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಮಾಜದ ಹಾಗೂ ಸಂಘಟನೆಗಳ ಗಣ್ಯರು ಹಾಗೂ ಕಲಾಭಿಮಾನಿಗಳು ಭಾಗವಹಿಸಿದ್ದರು.

ಬೊಂಬೇ ಬಂಟ್ಸ್ ನ ಅಧ್ಯಕ್ಷ ನ್ಯಾ. ಡಿ. ಕೆ. ಶೆಟ್ಟಿ, ಬೊಂಬೇ ಬಂಟ್ಸ್ ನ ನಿಕಟ ಪೂರ್ವ ಅಧ್ಯಕ್ಷ ಸಿಎ ಸುರೇಂದ್ರಕುಮಾರ್ ಶೆಟ್ಟಿ, ಬೊಂಬೇ ಬಂಟ್ಸ್ ನ ಪ್ರಧಾನ ಕಾರ್ಯದರ್ಶಿ
ಶೇಖರ್ ಆರ್. ಶೆಟ್ಟಿ, ನ್ಯಾ. ಗುಣಕರ್ ಶೆಟ್ಟಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಇದರ ಮಹಾರಾಷ್ಟ್ರ ಘಟಕದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ, ತುಳು ಸಂಘ ಬೊರಿವಲಿಯ ಅಧ್ಯಕ್ಷ ಹರೀಶ್ ಮೈಂದನ್, ಬಾಂಬೆ ಬಂಟ್ಸ್ ನ ಉಪಾಧ್ಯಕ್ಷರಾದ ಕಿಶೋರ್ ಶೆಟ್ಟಿ , ವಸಾಯಿಯ ಹಿರಿಯ ಸಮಾಜ ಸೇವಕ ಪಾಂಡು ಶೆಟ್ಟಿ, ಕಲಾ ಪೋಷಕ ಸಹೋದರರಾದ ಕುದಿ ಸುಧಾಕರ ಶೆಟ್ಟಿ ಹಾಗು ಸಂತೋಷ್ ಶೆಟ್ಟಿ,
ಕೊಂಕಣಿ ರಂಗಭೂಮಿಯ ಪ್ರಸಿದ್ಧ ನಾಟಕಕಾರ ಪ್ರಾಂನ್ಸಿಸ್ ಕಾಸಿಯಾ, ಅತಿಥಿಗಳಾಗಿ ಭಾಗವಹಿಸಿದ್ದರು.

ಕಲಾ ಜಗತ್ತು ವಸುಂಧರ ಉಪಾಧ್ಯಕ್ಷೆಯರುಗಳಾದ ಲತಾ ಸಂತೋಷ್ ಶೆಟ್ಟಿ, ಡಾ. ಜಿ. ಪಿ. ಕುಸುಮ, ರೇಖಾ ಗುಣಾಕರ್ ಶೆಟ್ಟಿ, ಜ್ಯೋತಿ ಅನಂತ್ ಭಟ್, ಸಾಹನಿ ವಾಮನ್ ಶೆಟ್ಟಿ
ಸಂಯೋಜಕರಾದ ಲೀಲಾ ಗಣೇಶ್ ಪೂಜಾರಿ, ಶೋಭಾ ಜೆ. ಶೆಟ್ಟಿ,
ಜಯಂತಿ ಮಾಧವ ದೇವಾಡಿಗ, ಆಶಾ ಸತೀಶ್ ಶೆಟ್ಟಿ, ಅಶ್ವಿಜಾ ಸತೀಶ್ ರೈ, ಜೂಲಿಯೆಟ್ ಪೆರೆರಾ, ಉಷಾ ಸತೀಶ್ ಶೆಟ್ಟಿ, ದಿವ್ಯಾ ಜಯೇಶ್ ಶೆಟ್ಟಿಗಾರ್, ಸುರೇಖಾ ಹೇಮಂತ್ ದೇವಾಡಿಗ, ವಾಣಿ ರಘುನಾಥ್ ಕನ್ವತೀರ್ಥ ಮೊದಲಾದವರು ಸಹಕರಿಸಿದರು.

ಬೆಳಿಗ್ಗೆ ಕಲಾ ಜಗತ್ತು ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ ಸುರೇಂದ್ರಕುಮಾರ್ ಹೆಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಪದಾಧಿಕಾರಿಗಳಾದ ಅಶೋಕ್ ಶೆಟ್ಟಿ ಪಾಂಗಾಳ, ಜಗದೀಶ್ ರಾವ್, ಶ್ಯಾಮ್ ಸುಂದರ್ ಸಾಲಿಯಾನ್, ಜಿ. ಕೆ. ಕೆಂಚನಕೆರೆ, ಎನ್ ಪ್ರಥ್ವಿರಾಜ್ ಮುಂಡ್ಕೂರು, ಸಂಗೀತ ನಿರ್ದೇಶಕ ಶೇಖರ್ ಸಾಲಿಯಾನ್ ಭಜನೆ ಗುರು ಶ್ರೀಧರ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು,
ಸಂಗೀತ ನಿರ್ದೇಶಕ ವಿಜಯ್ ಶೆಟ್ಟಿ ಬಳಗದವರ ಸಂಗೀತ ಕಾರ್ಯಕ್ರಮ ಸಮಾರಂಭಕ್ಕೆ ವಿಷೇಷ ಮೆರಗನ್ನು ನೀಡಿತು. ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ ಯವರು ರಚಿಸಿದ ಶರಶಯ್ಯ ನಾಟಕ ಪ್ರದರ್ಶನವಿತ್ತು.



Related posts

ಶ್ರೀ ಜಗದಂಬ ಮಂದಿರ ಡೊಂಬಿವಲಿಯಲ್ಲಿ ಒಂಬತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಸಂಪನ್ನ.

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಸೆ. 5 ರಂದು ಜರಗಿದ 25ನೇ ಸಂಸ್ಥಾಪನಾ ದಿನಾಚರಣೆ, ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ ಸಮಾರಂಭದಲ್ಲಿ ಕರ್ನಾಟಕದ ಸ್ಪೀಕರ್ ಯು. ಟಿ. ಖಾದರ್ ಅವರ ಮನದಾಳದ ನುಡಿ

Mumbai News Desk

ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ಉಚಿತ ವೈದ್ಯಕೀಯ ಶಿಬಿರ

Mumbai News Desk

ಎಲ್ಲರ ಬದುಕಲ್ಲಿ ಧರ್ಮ ಕಾರ್ಯಗಳು ನಡೆಯಲಿ: ಸಾಣೂರು ಸಾಂತಿಂಜ ಜನಾರ್ದನ ಭಟ್‌

Mumbai News Desk

ವಸಾಯಿ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ: ಗೌರವ ಅಧ್ಯಕ್ಷರಾಗಿ ವಿಶ್ವನಾಥ್ ಪಿ.ಶೆಟ್ಟಿ, ಅಧ್ಯಕ್ಷರಾಗಿ ದೇವೇಂದ್ರ ಬುನ್ನನ್

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk