30.9 C
Mumbai
June 8, 2026
Mumbai News Kannada
ಪ್ರಕಟಣೆ

ಮೂಲ್ಕಿ : ನ. 30ರಂದು ಹರಿಶ್ಚಂದ್ರ ಪಿ ಸಾಲ್ಯಾನ್ ಅವರ “ಮುಲ್ಕಿಯ ಕೀರ್ತಿಶೇಷ ಸಾಧಕರು ” ಕ್ರತಿ ಬಿಡುಗಡೆ ಸಮಾರಂಭ





ಹೊಸ ಅಂಗಣ ಪ್ರಕಟಣಾಲಯ, ಮೂಲ್ಕಿ ಪ್ರಕಟಿತ, ಜಾನಪದ ಲೇಖಕ, ಸಂಘಟಕ ಹರಿಶ್ಚಂದ್ರ ಪಿ ಸಾಲ್ಯಾನ್ ಅವರ 22ನೇ ಕೃತಿ ” ಮುಲ್ಕಿಯ ಕೀರ್ತಿ ಶೇಷ ಸಾಧಕರು ” ಕ್ರತಿ ಬಿಡುಗಡೆ ಸಮಾರಂಭವು ನವಂಬರ್ 30ರಂದು ಆದಿತ್ಯವಾರ ಸಂಜೆ 4.30ಕ್ಕೆ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಜರಗಲಿದೆ.
ಕೆ. ಪಿ. ಸಿ. ಸಿ ಯ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ ಅವರು ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಕೆ. ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮುಲ್ಕಿ ನರ್ಸಿಂಗ್ ಹೋಂ, ವೈದ್ಯ ಡಾ.ಅರುಣ್ ಕುಡ್ವ, ಧನಂಜಯ್ ಅಂಚನ್ ಕೆ.ಎಸ್. ರಾವ್ ನಗರ ಮುಲ್ಕಿ ಉಪಸ್ಥಿತರಿರುವರು.
ಹೊಸ ಅಂಗಣ ಪ್ರಕಾಶನದ ಹರಿಶ್ಚಂದ್ರ ಪಿ ಸಾಲ್ಯಾನ್ ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.



Related posts

ಓಂ ಶ್ರೀ ಜಗದೀಶ್ವರಿ ದೇವಸ್ಥಾನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬೊರಿವಲಿಜ.20ಕ್ಕೆ ಸುವರ್ಣ ಮಹೋತ್ಸವದ ನಿಮ್ಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ.

Mumbai News Desk

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು : ಮೇ. 8ರಂದು “ಕಚ್ಚೂರು ಶ್ರೀ ನಾಗೇಶ್ವರ ಉತ್ಸವ”

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಅಗಸ್ಟ್ 15 ರಂದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ

Mumbai News Desk

ಮಂಗಳೂರು ವಿ. ವಿ.  42ನೇ ಘಟಿಕೋತ್ಸವ : ಎಂ.ಆರ್.ಜಿ. ಗ್ರೂಪ್ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿಯವರಿಗೆ ಗೌರವ ಡಾಕ್ಟರೇಟ್ ಪದವಿ

Mumbai News Desk

ತುಳುಕೂಟ ಫೌಂಡೇಶನ್  ಮಹಿಳಾ ವಿಭಾಗ, ಜೂನ್ 21 ರಂದು ಯೋಗ ದಿನಾಚರಣೆ ,

Mumbai News Desk

ಹಿಂದೂ ಸಂಗಮ ಆಯೋಜನಾ ಸಮಿತಿ ಮೂಲ್ಕಿ : ಜ. 25ರಂದು “ಭವ್ಯ ಹಿಂದೂ ಸಂಗಮ”

Mumbai News Desk