July 18, 2026
Mumbai News Kannada
ಸುದ್ದಿ

ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕ ರಾಜೇಂದ್ರ ವಿ. ಶೆಟ್ಟಿಯವರು ಆಯ್ಕೆ.







ವರದಿ : ದಿನೇಶ್ ಕುಲಾಲ್

ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಪಂಚುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕ ರಾಜೇಂದ್ರ ವಿ. ಶೆಟ್ಟಿ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಗೊಂಡಿರುವ ಸಂಘದ ಅಧ್ಯಕ್ಷ ರಾಜೇಂದ್ರ ವಿ. ಶೆಟ್ಟಿ ಅವರಿಗೆ ನಿಕಟಪೂರ್ವ ಅಧ್ಯಕ್ಷ ವಿಜಯಾನಂದ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರದೀಪ ಪಕ್ಕಳ, ಹರ್ಷಕುಮಾರ ಶೆಟ್ಟಿಯವರು ಉಪಸ್ಥಿತರಿದ್ದರು.
ಜೀವನದಲ್ಲಿ ಶ್ರದ್ಧೆ, ಭಕ್ತಿ ಮತ್ತು ತಾಳ್ಮೆಯಿದ್ದರೆ ಎಂತಹ ಉನ್ನತ ಶಿಖರವನ್ನಾದರೂ ತಲುಪಬಹುದು ಎಂಬುದಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜೇಂದ್ರ ಶೆಟ್ಟಿ ಅವರು ಜ್ವಲಂತ ಉದಾಹರಣೆ.

ಒಂದು ಕಾಲದಲ್ಲಿ ಮಹಾನಗರಿ ಮುಂಬೈನ ರೈಲ್ವೆ ನಿಲ್ದಾಣದಲ್ಲಿ ಟೀ ಮಾರುತ್ತಿದ್ದ ರಾಜೇಂದ್ರ ಶೆಟ್ಟಿ ಅವರು, ತಮ್ಮ ನಿರಂತರ ಪರಿಶ್ರಮ ಹಾಗೂ ದೇವರ ಮೇಲಿನ ಅಪಾರ ನಂಬಿಕೆಯಿಂದ ಜೀವನದ ನೂರೆಂಟು ಕಲ್ಲು-ಮುಳ್ಳುಗಳ ಹಾದಿಯನ್ನು ದಾಟಿ ಬಂದಿದ್ದಾರೆ. ಸತ್ಯ, ನ್ಯಾಯದ ಹಾದಿಯಲ್ಲಿ ನಡೆದು ಇಂದು ಬಲಿಷ್ಠ ‘ಪಂಜುರ್ಲಿ ಸಮೂಹ ಸಂಸ್ಥೆ’ಯನ್ನು ಕಟ್ಟಿ ಬೆಳೆಸಿದ್ದಾರೆ. ಈಮೂಲಕ ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ, ನೂರಾರು ಕುಟುಂಬಗಳ ಬಾಳಿಗೆ ಬೆಳಕಾಗಿದ್ದಾರೆ.
ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ ನಿಂದ ಸ್ಥಾಪಿತವಾಗುವ ಪ್ರತಿಯೊಂದು ಹೊಟೆಲ್‌ನಲ್ಲಿ ದೇಶ ಪ್ರೇಮ ಸಾರುವ ಗೋಡೆ ಬರಹಗಳು, ಸ್ವಾತಂತ್ರ್ಯ, ಹೋರಾಟಗಾರರು, ಸಾಧನೆಗೈದು ಎಲೆಮರೆಯ ಕಾಯಿಯಂತೆ ಇರುವ ಸಾಧಕರ ಆಕರ್ಷಕ ಬಾವಚಿತ್ರಗಳನ್ನು ಆಳವಡಿಸಲಾಗಿದೆ. ಈ ಮೂಲಕ ಹೊಟೆಲ್‌ಗೆ ಬರುವ ಗ್ರಾಹಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಿ ಅವರ ಮನಸ್ಸಲ್ಲಿ ದೇಶಾಭಿಮಾನ ಮೂಡಿಸುವ ಸದುದ್ದೇಶ
ರಾಜೇಂದ್ರ ಶೆಟ್ಟಿ ಅವರು
ಹಲವು ಹೋರಾಟಗಳ ನಡುವೆ ಸಾಧನೆಯ ಶಿಖರವೇರಿರುವ ಇವರು, ಇದೀಗ ಪ್ರತಿಷ್ಠಿತ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಸಾರಥ್ಯ ವಹಿಸಿಕೊಂಡಿರುವುದು ಇಡೀ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ರಾಜೇಂದ್ರ ಶೆಟ್ಟಿ ಅವರ ಸಮರ್ಥ ನಾಯಕತ್ವದಲ್ಲಿ ಬಂಟರ ಸಂಘವು ಪ್ರೀತಿ, ಸ್ನೇಹ ಮತ್ತು ಒಗ್ಗಟ್ಟಿನೊಂದಿಗೆ ಮತ್ತಷ್ಟು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಸಮಾಜದ ಬಂಧುಗಳು ಹಾಗೂ ಗಣ್ಯರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ ನಿರ್ದೇಶಕರಾಗಿ ರುವ ರಾಜೇಂದ್ರ ವಿ. ಶೆಟ್ಟಿಯವರನ್ನು ಒಕ್ಕೂಟದ ಅಧ್ಯಕ್ಷರಾದ
ಐಕಳ ಹರೀಶ್ ಶೆಟ್ಟಿಈ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ



Related posts

ಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ರಂಗಸಾರಥಿ ಶ್ರೀವಿಶ್ವನಾಥ್ ಶೆಟ್ಟಿ ಅಯ್ಕೆ

Mumbai News Desk

ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಪೂಜ್ಯ ಶ್ರೀ ಬಾಲಯೋಗಿ ಸದಾನಂದ ಸ್ವಾಮಿ ತುಂಗಾರೇಶ್ವರ ಅವರ ನೇತೃತ್ವವದಲ್ಲಿ ದೀಪೋತ್ಸವ : ಮುಂಬೈಯ ನವೀನ್ ಶೆಟ್ಟಿ ತೋನ್ಸೆಗೆ ಗೌರವ

Mumbai News Desk

ಥಾಣೆ  :ಜಯರಾಮ ಸಾಂತ ನಿಧನ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (07/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (16/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಉಡುಪಿ : ಕನಕನ ಕಿಂಡಿ ಸ್ವರ್ಣ ಕವಚ ಉದ್ಘಾಟನೆ ವಿವಾದ : ಕಡೆಗಣನೆ ಆರೋಪಗಳನ್ನು ತಳ್ಳಿ ಹಾಕಿದ ಪ್ರಮೋದ್ ಮಧ್ವರಾಜ್

Mumbai News Desk