31 C
Mumbai
September 11, 2026
Mumbai News Kannada
ಪ್ರಕಟಣೆ

ಮುಂಬೈ: ಜೂನ್ 14ರಂದು ಶ್ರೀ ಭುವನೇಶ್ವರಿ ಸೇವಾ ಸಮಿತಿಯಿಂದ 43ನೇ ವಾರ್ಷಿಕ ಮಹೋತ್ಸವ ಮತ್ತು ಮೂರ್ತಿ ಪ್ರತಿಷ್ಠಾಪನಾ ಪೂಜೆ





ಮುಂಬೈನ ಫೋರ್ಟ್ ಪ್ರದೇಶದಲ್ಲಿರುವ ಪ್ರಸಿದ್ಧ ಧಾರ್ಮಿಕ ಸಂಸ್ಥೆ ‘ಶ್ರೀ ಭುವನೇಶ್ವರಿ ಸೇವಾ ಸಮಿತಿ (ರಿ.)’ ಇದರ ವತಿಯಿಂದ 43ನೇ ವಾರ್ಷಿಕ ಆಚರಣೆಯ ಪೂಜಾ ಮಹೋತ್ಸವ ಹಾಗೂ ಮೂರ್ತಿ ಪ್ರತಿಷ್ಠಾ ಮಹೋತ್ಸವವನ್ನು ಇದೇ ಬರುವ ಭಾನುವಾರ, ಜೂನ್ 14, 2026 ರಂದು ಅತ್ಯಂತ ವೈಭವದಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೋರ್ಟ್‌ನ ಮಿಂಟ್ ರೋಡ್‌ನಲ್ಲಿರುವ ‘ಕಂಜಿ ಖೇತ್ಸಿ ಭಾಟಿಯಾ ವಾಡಿ ಹಾಲ್’ನಲ್ಲಿ ಜರುಗಲಿವೆ.
ಜೂನ್ 14ರ ಭಾನುವಾರ ಬೆಳಿಗ್ಗೆ 6:15 ರಿಂದ ಮಧ್ಯಾಹ್ನ 3:30 ರ ಅವಧಿಯಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಗಣಪತಿ ಹೋಮ, ಕಲಶ ಪೂಜೆ ಮತ್ತು ಸುವರ್ಣ ವಸ್ತ್ರ ಪೂಜೆ ನೆರವೇರಲಿದೆ. ಬೆಳಿಗ್ಗೆ 10:30 ರಿಂದ ಫೋರ್ಟ್‌ನ ‘ವಿದ್ಯಾದಾಯಿನಿ ಭಜನಾ ಮಂಡಳಿ’ ಕಡೆಯಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ ಆಯೋಜಿಸಲಾಗಿದೆ. ತದನಂತರ ಮಹಾ ಅಭಿಷೇಕ, ಮಂಗಳಾರತಿ ನೆರವೇರಲಿದ್ದು, ಮಧ್ಯಾಹ್ನ 12:45 ಕ್ಕೆ ಶ್ರೀ ದೇವಿ ಆವೇಶ ಹಾಗೂ ತೀರ್ಥಪ್ರಸಾದ ವಿತರಣೆ ಇರಲಿದೆ. ಮಧ್ಯಾಹ್ನ 1:30 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ (ಮಹಾಪ್ರಸಾದ) ವ್ಯವಸ್ಥೆ ಮಾಡಲಾಗಿದೆ.

ಸಂಜೆ 4ಗಂಟೆಗೆ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀ ಭುವನೇಶ್ವರಿ ಸೇವಾ ಸಮಿತಿಯ ಅಧ್ಯಕ್ಷರಾದ ಡಾ. ಪ್ರಕಾಶ್‌ಕುಮಾರ್ ಮೂಡಬಿದ್ರಿ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಂಬೈನ ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಪಿ. ಸಪಲಿಗ ಅವರು ಆಗಮಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಮುಂಬೈ ಮಹಾನಗರ ಪಾಲಿಕೆಯ ಧಾರಾವಿ ವಿಭಾಗದ ಕಾರ್ಪೊರೇಟರ್ ಹಾಗೂ ಪ್ರಭಾದೇವಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟಿ ಭಾಸ್ಕರ್ ಆರ್. ಶೆಟ್ಟಿ, ಮುಂಬೈ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಬೆಲ್ಚಡ, ಹಾಗೂ ಉಚ್ಚ ನ್ಯಾಯಾಲಯದ ಪ್ರಸಿದ್ಧ ನ್ಯಾಯವಾದಿ ಶ್ರೀ ಆರ್. ಎಮ್. ಭಂಡಾರಿ ಅವರು ಉಪಸ್ಥಿತರಿರಲಿದ್ದಾರೆ. ಸಮಿತಿಯ ಪ್ರಧಾನ ಅರ್ಚಕರು ಮತ್ತು ದೇವಿ ಪಾತ್ರಿಗಳಾದ ಶ್ರೀ ರಾಜೇಶ್ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.
43ನೇ ವಾರ್ಷಿಕ ಮಹೋತ್ಸವದಲ್ಲಿ ಸದ್ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಬೇಕೆಂದು ಸಮಿತಿಯ ಗೌರವಾನ್ವಿತ ಅಧ್ಯಕ್ಷರಾದ ಆರ್. ಕೆ. ಮೂಲ್ಕಿ, ಉಪಾಧ್ಯಕ್ಷರಾದ ಸಂಜೀವ ಪಿ. ಬಂಗೇರ, ಕಾರ್ಯದರ್ಶಿ ಅಶೋಕ್ ಸೈನಿ ಮತ್ತು ಕೋಶಾಧಿಕಾರಿ ಭಾಸ್ಕರ್ ಪೂಜಾರಿ ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ವಿನಂತಿಸಿದ್ದಾರೆ.



Related posts

ಪೇಜಾವರ  ಮಠದ   ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು  ಫೆ 1 ರಿಂದ   ಫೆ 6  ರವರೆಗೆ ಶ್ರೀ ಪೇಜಾವರ ಮಠ ಸಾಂತಾಕ್ರೂಜ್ ಮುಂಬಯಿ ಇಲ್ಲಿ ಮುಕ್ಕಂ,

Mumbai News Desk

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನೆಲ್ಲಿಕಾರು, ಮೂಡಬಿದೆರೆ ಶತಮಾನೋತ್ಸವದ ಸಂಭ್ರಮದಲ್ಲಿ ನಮ್ಮ ಶಾಲೆ :

Mumbai News Desk

ಮೂಲ್ಕಿ : ಮೇ. 3ರಂದು ಹರಿಶ್ಚಂದ್ರ ಪಿ. ಸಾಲಿಯಾನ್ ಅವರ ‘ನುಡಿಮುತ್ತು’ ಕೃತಿ ಬಿಡುಗಡೆ ಸಮಾರಂಭ

Mumbai News Desk

ಡಿ.24 : ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರ ಶ್ರೀ ಅಯ್ಯಪ್ಪ ಭಕ್ತವೃಂದದ 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ, ಅನ್ನ ಸಂತರ್ಪಣೆ.

Mumbai News Desk

ಉಡುಪಿ ಶ್ರೀ ಭಗವಾನ್ ನಿತ್ಯಾನಂದ ಮಂದಿರ-ಮಠದಲ್ಲಿ ಜುಲೈ 29ರಂದು ವಿಜೃಂಭಣೆಯ “ಶ್ರೀ ಗುರು ಪೂರ್ಣಿಮಾ ಮಹೋತ್ಸವ”

Mumbai News Desk

ಸೆ.7 ರಂದು ಕಲ್ಯಾಣ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಭವ್ಯ ಸಮಾರಂಭ

Mumbai News Desk