
ಪರಮಾನಂದರ ಬದುಕಿನ ಯೋಚನೆಗಳನ್ನು
ಶಾಶ್ವತವಾಗಿ ಉಳಿಯುವಂತೆ ನಾವೆಲ್ಲರೂ ಪ್ರಯತ್ನಿಸುತ್ತೇವೆ: ಸತೀಶ್ ಕೋಟ್ಯಾನ್ ಸಸಿಹಿತ್ಲು
ಚಿತ್ರ ವರದಿ ದಿನೇಶ್ ಕುಲಾಲ್
. ಮುಂಬಯಿ:ಸಸಿಹಿತ್ಲು ನಿವಾಸಿ ಹೆಸರಾಂತ ಪತ್ರಕರ್ತ, ವಾಗ್ಮಿ, ಜಾನಪದ ಬರಹಗಾರ, ಸಂಘಟಕ, ಗಾಯಕ ಮತ್ತು ಬಹುಮುಖ ಪ್ರತಿಭೆಯ ರಂಗಕರ್ಮಿ ಶ್ರೀ ಪರಮಾನಂದ ಸಾಲ್ಯಾನ್ ಸಸಿಹಿತ್ಲು ರವರು ಅಲ್ಪಕಾಲದ ಅನಾರೋಗ್ಯದಿಂದ ಜು 13ರಂದು ನಿಧನರಾಗಿರುವರು.
ಈ ಬಗ್ಗೆ ಪರಮಾನಂದ ಸಾಲ್ಯಾನ್ ಶ್ರದ್ಧಾಂಜಲಿ ಸಭೆಯು ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘ ಮತ್ತು ಶ್ರೀ ಸಾರಂತಾಯ ಗರಡಿ ಉಳ್ಳಾಯ ದೈವಸ್ಥಾನದ ಮುಂಬೈಯ ಆಡಳಿತ ಸಮಿತಿಯು ನುಡಿನಮನ ಶ್ರದ್ಧಾಂಜಲಿ ಸಭೆಯನ್ನು ಬಿಲ್ಲವರ ಅಸೋಸಿಯೇಷನ್ ನ ಆಶ್ರಯದಲ್ಲಿ ಜುಲೈ 25 ರ ಶನಿವಾರ ಸಾಂತಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ನಡೆಯಿತು,

ಪುಷ್ಪ ನಮನವನ್ನು ಸಲ್ಲಿಸಿ ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘದ ಅಧ್ಯಕ್ಷ ಸತೀಶ್ ಕೋಟ್ಯಾನ್ ಯವರು ಪರಮಾನಂದ ಸಾಲ್ಯಾನ್ ಬಗ್ಗೆ ತಮ್ಮ ಸಂಬಂಧ ಹಾಗೂ ಅವರು ನಡೆದ ಹಾದಿಗಳನ್ನು ನೆನಪಿಸುತ್ತ ಸಾಲಿಯಾನ್ಯವರು
ಅಪಾರ ಕನಸುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ರಂಗಭೂಮಿಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಜಿಲ್ಲೆಯಲ್ಲಿ ಮತ್ತು ದೇಶ ವಿದೇಶಗಳನ್ನು ತಮ್ಮ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿದ ಒಬ್ಬ ಅದ್ಭುತ ಸಂಘಟಕ ಮತ್ತು ಕಲಾವಿದ.ಸಸಿಹಿತ್ಲು ಶ್ರೀ ಸಾರಂತಾಯ ಗರಡಿ ಉಳ್ಳಾಯ ದೈವಸ್ಥಾನದ ಪುನರ್ ನಿರ್ಮಾಣ ಪುಣ್ಯ ಕಾರ್ಯದಲ್ಲಿ ಸಂಪೂರ್ಣ ತನ್ನನ್ನು ತಾನು ತೊಡಗಿಸಿಕೊಂಡು ಧಾರ್ಮಿಕ ಸೇವೆಯನ್ನು ಕೂಡ ಮಾಡಿದವರು. ಅವರಂತ ಒಬ್ಬ ಶ್ರೇಷ್ಠ ರಂಗಕರ್ಮಿಯನ ನಾವು ಕಳೆದುಕೊಂಡಿದ್ದೇವೆ ಎನ್ನುವುದು ನಮಗೆ ಅತಿವ ದುಃಖವಾಗಿದೆ. ಅವರು ಯೋಚನೆಗಳು ಶಾಶ್ವತವಾಗಿ ಉಳಿಯುವಂತೆ ನಾವೆಲ್ಲರೂ ಪ್ರಯತ್ನಿಸುತ್ತೇವೆ ಎಂದು ನುಡಿದರು,

ಸಸಿಹಿತ್ತು ಶ್ರೀ ಭಗವತೀ ಕ್ಷೇತ್ರದ
ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿಯ ಅಧ್ಯಕ್ಷ, ದಿವ್ಯ ಸಿಪ್ಪಿಂಗ್ ಆಡಳಿತ ನಿರ್ದೇಶಕ ವೇದಪ್ರಕಾಶ್ ಎಂ. ಶ್ರಿಯಾನ್ ಪುಷ್ಪ ನಮನ ಸಲ್ಲಿಸುತ್ತಾ ಪರಮಾನಂದ ನನಗಿಂತ ಮೂರು ವರ್ಷ ದೊಡ್ಡವರು, ನನ್ನ ಸೀನಿಯರ್ ಆಗಿದ್ದರು. ನಾವು ಕ್ರಿಕೆಟ್, ಮತ್ತೆ ಬೇರೆ ಬೇರೆ ಕ್ರೀಡೆಗಳಿಗೆ ಹೋಗುತ್ತಿದ್ದೆವು. ನಂತರ ಸಸಿಹಿತ್ಲು ನಲ್ಲಿ ಒಂದು ವಾಚನಾಲಯ (ಲೈಬ್ರರಿ) ಮಾಡಿಕೊಂಡೆವು.
ಹಾಗೆ ಪರಮಾನಂದ ತುಂಬಾ ಹತ್ತಿರವಾದರು, ಪರಮಾನಂದ ಅವರ ತಂದೆಯ ಜಾಗ ಮತ್ತು ನಮ್ಮ ಮನೆ ಎರಡೂ ಬಹುತೇಕ ಒಂದೇ ಗಡಿಯಲ್ಲಿದ್ದವು. ಒಂದು ಬಾವಿ ಹೊರತುಪಡಿಸಿ ಖಾಲಿ ಜಾಗವಿತ್ತು. ಹಾಗಾಗಿ ಅತ್ತ-ಇತ್ತ ಹೋಗುತ್ತಾ ತುಂಬಾ ಆತ್ಮೀಯರಾದೆವು.ನಾವು ಹಳೆ ವಿದ್ಯಾರ್ಥಿ ಅಸೋಸಿಯೇಷನ್ ಮೂಲಕ ಒಟ್ಟಿಗೆ ಕೆಲಸ ಮಾಡಿದ್ದೇವೆ ಆ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದೆವು. ವಾಲಿಬಾಲ್, ಕ್ರಿಕೆಟ್, ಬೇರೆ ಬೇರೆ ಸ್ಪೋರ್ಟ್ಸ್ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೆವು.
2014ರಲ್ಲಿ ಭಗವತಿ ದೇವಸ್ಥಾನ ಸಮಿತಿಯ ಜೀರ್ಣೋದ್ಧಾರ ಸಂದರ್ಭದಲ್ಲಿ ಅತ್ಯಂತ ಸುಂದರವಾದ ಕಾರ್ಯಕ್ರಮ ನಡೆಯಿತು. ಆಗ ಪರಮಾನಂದ ಅವರು ಸಂಘಟನಾ ಸಮಿತಿ ಮತ್ತು ನಿಧಿ ಸಂಗ್ರಹ ಸಮಿತಿಯಲ್ಲಿದ್ದರು. ಪರಮಾನಂದ ಉತ್ತಮ ವಾಗ್ಮಿಯಾಗಿದ್ದರು, ಅವರು ದೊಡ್ಡ ಸಾಹಿತಿಯಾಗಿದ್ದರು. 1995ರ ಸ್ಮರಣ ಸಂಚಿಕೆಯಿಂದ ಹಿಡಿದು 2014ರ ವರೆಗೆ ಬಂದ ಸ್ಮರಣ ಸಂಚಿಕೆಗಳಲ್ಲಿ ಹಾಗೂ ಬ್ರಹ್ಮಕಲಶದ ಸಂದರ್ಭದಲ್ಲೂ ಪರಮಾನಂದ ಅವರ ದೊಡ್ಡ ಲೇಖನವಿತ್ತು. ಭಗವತಿಯ ಮೇಲೆ ಅವರಿಗೆ ಅಪಾರ ಭಕ್ತಿಯಿತ್ತು. ಅಂತಹ ಪರಮಾನಂದ ಸಾಲ್ಯಾನ್ ಅವರು ಜನರನ್ನು ಆಕರ್ಷಿಸುತ್ತಿದ್ದರು. 2014ರ ಕೊನೆಯಲ್ಲಿ ಮುಂಬೈಯ ಮೊಗವೀರ ವ್ಯವಸ್ಥಾಪಕ ಮಂಡಳಿಯ ಡಾ. ಜಿ.ಆರ್. ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ‘ಶಿವಪೂಜಾದ ಬೊಬ್ಬರ್ಯ’ ಎಂಬ ಪ್ರಸಿದ್ಧ ನಾಟಕ ನಡೆಯಿತು ಅದು ನನ್ನ ತಾಯಿ ಮತ್ತು ತಂದೆಯ ಹೆಸರಿನ ಭವಾನಿ ಅಮ್ಮ ಹಾಗೂ ಕಮಲಾಕ್ಷಿ ಶ್ರೀಯಾನ್ ವೇದಿಕೆಯಲ್ಲಿ ಅವರಿಗೆ ಸನ್ಮಾನ ಮಾಡಿದ್ದು ನನಗೆ ತುಂಬಾ ಸಂತೋಷ ತಂದಿತ್ತು.
ಅಂತಹ ಬಹುಪ್ರಸಿದ್ಧರಾದರು, ದುರದೃಷ್ಟವಶಾತ್ ದೈವದ ಇಷ್ಟ, ಅವರನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ. ಭಗವಂತನ ನಿರ್ಧಾರದ ಮುಂದೆ ನಾವೇನೂ ಮಾಡಲು ಸಾಧ್ಯವಿಲ್ಲ. .ಅವರು ಸಾಮಾಜಿಕ ಕಾರ್ಯಕರ್ತ, ಸಾಹಿತಿ ಹಾಗೂ ನಿರ್ದೇಶಕರಾಗಿ ಹಲವು ಕ್ಷೇತ್ರಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ನಮ್ಮ ಹಳ್ಳಿಯಲ್ಲಿ ಅಂತಹ ವ್ಯಕ್ತಿಗಳು ಸಿಗುವುದು ತುಂಬಾ ವಿರಳ. ಅವರ ನೆನಪಿಗೆ ಜಂಟಿಯಾಗಿ ಒಂದು ಸ್ಮರಣೀಯ ಕೆಲಸ ಕಾಣಿಕೆ ಮಾಡೋಣ ,
, ನಮ್ಮ ಸಹೋದರ ಯಶವಂತ್ ಶ್ರೀಯಾನ್ ಅವರ ಪರವಾಗಿ ಹಾಗೂ ನಮ್ಮ ಕದಿಕೆ ಮೊಗವೀರ ಸಭಾದ ಹೊಸ ಅಧ್ಯಕ್ಷರಾದ ದೇವರಾಜ್ ಬಂಗೇರ, ಆಡಳಿತ ಮಂಡಳಿ, ಸಭೆಯ ಎಲ್ಲಾ ಹಿರಿಯರು ಮತ್ತು ಗಣ್ಯರ ಪರವಾಗಿ ಪರಮಾನಂದ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಥಿಸಿದರು,
ಸಸಿಹಿತ್ತು ಶ್ರೀ ಭಗವತೀ ಕ್ಷೇತ್ರದ ಆಡಳಿತ ಮೊತ್ತೇಸರ ಗಂಪಮನೆ ಕಟೀಲು ಚಂದ್ರಶೇಖರ ಬೆಳ್ಳಡ ನುಡಿ ನಮನ ಸಲ್ಲಿಸುತ್ತಾ ಮನುಷ್ಯ ಹುಟ್ಟುವಾಗ ಕೇವಲ ಉಸಿರಿರುತ್ತದೆ ಸತ್ತು ಹೋದ ಮೇಲೆ ಉಸಿರು ಹೋಗುತ್ತದೆ, ಹೆಸರು ಮಾತ್ರ ಉಳಿಯುತ್ತದೆ. ನಾವು ಬರುವಾಗಲೂ ಬತ್ತಲೆಯಾಗಿಯೇ ಬಂದೆವು, ಹೋಗುವಾಗಲೂ ಬತ್ತಲೆಯಾಗಿಯೇ ಹೋಗುತ್ತೇವೆ. ಆದರೆ ಈ ಜೀವನದಲ್ಲಿ ಹುಟ್ಟಿದಾಗಿನಿಂದ ಸಾಯುವವರೆಗೆ ನಾವು ಮಾಡುವ ಕಾರ್ಯಗಳು ಮನುಷ್ಯನಿಗೆ ಅತ್ಯಂತ ಮುಖ್ಯವಾದವುಗಳು.
ಇಂದು ಪರಮಾನಂದ ಸಾಲ್ಯಾನ್ ಅವರ ವಿಷಯದಲ್ಲಿ ನಾವೆಲ್ಲರೂ ಮಾತನಾಡಬೇಕಾದರೆ, ಅವರ ಈ ಶೋಕಸಭೆಗೆ ಬಂದಿರುವ ಪ್ರತಿಯೊಬ್ಬ ಗಣ್ಯರೂ ಅವರು ಸಮಾಜಕ್ಕೆ ಏನು ಮಾಡಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಅವರು ಪ್ರತಿಯೊಂದು ಸಭೆ-ಸಮಾರಂಭಗಳಲ್ಲೂ ‘ಬಿತ್ತಿಲ್ದ ಅಪ್ಪೆ ಭಗವತಿ’ ಎಂಬ ಹಾಡನ್ನು ಹಾಡುತ್ತಿದ್ದರು. ಜನರು ಅದನ್ನು ತುಂಬಾ ಇಷ್ಟಪಟ್ಟು ಕೇಳುತ್ತಿದ್ದರು, ‘ಬಿತ್ತಿಲ್ದ ಅಪ್ಪೆ ಭಗವತಿ’ ಎಂಬ ಹಾಡು ಅಷ್ಟೊಂದು ಪ್ರಸಿದ್ಧವಾಗಿತ್ತು.
ಅವರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ನಾನು ಸಾರಂತಾಯ ಗರುಡಿಯ ಬ್ರಹ್ಮಕಲಶಕ್ಕೆ ಹೋದಾಗ, ಅವರು ನನ್ನೊಂದಿಗೆ ಬಹಳ ಆತ್ಮೀಯತೆಯಿಂದಿದ್ದರು. ಅವರದೊಂದು ಕನಸಿತ್ತು—ಸಾರಂತಾಯ ಗರುಡಿಯನ್ನು ಶಿಲಾಮಯವಾಗಿ (ಕಲ್ಲಿನಿಂದ) ನಿರ್ಮಿಸಬೇಕು ಎಂದು, ಆ ಕನಸು ಈಡೇರಿತು. ಎರಡನೆಯದಾಗಿ, ಸಸಿಹಿತ್ಲು ಭಗವತಿ ಅಮ್ಮನವರ ಬ್ರಹ್ಮಕಲಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಿದರು. “ಮುಂದಿನ ಬ್ರಹ್ಮಕಲಶಕ್ಕೆ ನಾನು ಇರುತ್ತೇನೋ ಇಲ್ಲವೋ ಚಂದ್ರಶೇಖರ ಅಣ್ಣ, ಆದರೆ ಈ ವರ್ಷದ ಬ್ರಹ್ಮಕಲಶವನ್ನು ಅತ್ಯಂತ ವಿಜೃಂಭಣೆಯಿಂದ ಕಣ್ಣುಂಬಿಕೊಳ್ಳುವ ಭಾಗ್ಯ ನನಗೆ ಸಿಗಬೇಕು” ಎಂದು ಅವರು ಹೇಳಿದ್ದರು. ಹಾಗೆಯೇ ಅವರ ಸ್ವಂತ ಊರಾದ ಬಪ್ಪನಾಡಿನಲ್ಲೂ ಜೀರ್ಣೋದ್ಧಾರವಾಗಿ ಚಾವಡಿ ಉದ್ಘಾಟನೆಯಾಯಿತು. ಹೀಗೆ ಅವರು ಈ ಮೂರು ಕಾರ್ಯಗಳನ್ನು ಮಾಡಿ ದೇವಸನ್ನಿಧಿಯಲ್ಲಿ ಪಾದ ತಲುಪಿದ್ದಾರೆ ಅವರು ಧನ್ಯವಂತರು.
ಪತ್ರಕರ್ತ ಹರೀಶ್ ಹೆಜಮಾಡಿ ನುಡಿ ನಮನ ಸಲ್ಲಿಸುತ್ತಾ ಸಸಿಹಿತ್ಲುವಿನ ಕೃಷಿ ಕುಟುಂಬದಿಂದ ಬಂದು ಪರಮಾನಂದ ಅವರು ಮುಂಗಾರು’, ‘ಹೊಸ ದಿಗಂತ ಪತ್ರಿಕೆಗಳಲ್ಲಿ ಸೇವೆಗೈದ ಇವರು ರಂಗಭೂಮಿಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ್ದಾರೆ. ತುಳು ಜಾನಪದ ಕಥನಗಳ ಆಧಾರಿತ ನಾಟಕಗಳನ್ನು ಬರೆದು ಪ್ರದರ್ಶಿಸಿದ ಇವರು, ಮುಂಬೈ ಮತ್ತು ಕರಾವಳಿಯ ರಂಗಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಜೀವನದ ಕಷ್ಟ-ಕಾರ್ಪಣ್ಯಗಳು ಮತ್ತು ಆರೋಗ್ಯದ ಸಮಸ್ಯೆಯ ನಡುವೆಯೂ ಸಾಹಿತ್ಯಿಕ ತುಡಿತವನ್ನು ಕಾಯ್ದುಕೊಂಡು, ಚತುಷ್ಪದಿ ಕಾವ್ಯಗಳ ರೂಪದಲ್ಲಿ ‘ಪರಮಾನುಭವ’ ರಚಿಸಿದ ಒಬ್ಬ ಅದ್ಭುತ ಸವ್ಯಸಾಚಿ ಕಲಾವಿದ ಅವರಾಗಿದ್ದರು, ಅವರ ನಿಧನ ಪತ್ರಿಕಾ ರಂಗಕ್ಕೆ, ಸಾಹಿತ್ಯ ರಂಗಕ್ಕೆ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ನುಡಿದರು,
ಕಲಾ ಸೌರಭದ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಕಾರ್ಯಕ್ರಮವನ್ನು ನಿರ್ವಹಿಸಿ ಪರಮಾನಂದರು ಬದುಕಿನ ಚಿತ್ರಣವನ್ನು ಮಾತುಗಳ ಮೂಲಕ ತೆರೆದಿಟ್ಟರು,
ಸಭೆಯಲ್ಲಿ ಉಪಸ್ತರಿದ್ದ ಮುಲುಂಡ ಬಂಟ್ಸ್ ನಉಪಾಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ ಉಪಾಧ್ಯಕ್ಷ ರಾಜ ವಿ ಸಾಲಿಯಾನ್, ಜೊತೆ ಕಾರ್ಯದರ್ಶಿ ಕೇಶವ್ ಕೋಟ್ಯಾನ್, ಸಸಿಹಿತ್ಲು ಹಳೆವಿದ್ಯಾರ್ಥಿ ಸಂಘ ಮುಂಬೈ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ,
ಸಿಎ ಸುದೀರ್ ಆರ್ ಎಲ್ ಶೆಟ್ಟಿ,, ಬಿಲ್ಲವ ಹಿತವರ್ಧಕ ಸಂಘ ಮುಂಬೈಯ ಉಪಾಧ್ಯಕ್ಷ ವಿಜಯ ಪಿ ಸನಿಲ್, ಸಂಗೀತ ನಿರ್ದೇಶಕ ಶೇಖರ್ ಸಸಿಹಿತ್ಲು, ಉಮೇಶ್ ಸಾಲಿಯಾನ್ ಸಸಿಹಿತ್ಲು, ಹಿರಿಯ ಯಕ್ಷಗಾನ ಕಲಾವಿದ ಪ್ರಕಾಶ್ ಪಣಿಯುವರು, ಬಿಲ್ಲವರ ಹಿತವರ್ಧಕ ಸಂಘದ ಮಹಿಳಾ ಸಂಚಾಲಕಿ ಕಲಾವತಿ ಕೋಟ್ಯಾನ್ ಮಲಾಡ್, ಪ್ರೇಮ್ ನಾಥ್ ಸುವರ್ಣ ಸಸಿಹಿತ್ಲು, ಚಿತ್ರಪು ಕೆ ಎಂ ಕೋಟ್ಯಾನ,ರಂಗ ಕಲಾವಿದ ನಿರ್ದೇಶಕ ಕೃಷ್ಣ ರಾಜ್ ಶೆಟ್ಟಿ ಮುಂಡ್ಕೂರು, ತ್ರಿಲೋಕ್ ನಾಥ್, ಅಶೋಕ್ ಕುಕ್ಯಾನ್ ಸಸಿಹಿತ್ಲು, ಯವರು ಪರಮಾನಂದ ಸಾಲಿಯನ್ ನ ಒಡನಾಟದ ಬಗ್ಗೆ ಮತ್ತು ಅವರ ಜೀವನ ಶೈಲಿ, ರಂಗಭೂಮಿಗೆ ನೀಡಿದ ಕೊಡುಗೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡು ಪುಷ್ಪ ನಮನವನ್ನು ಸಲ್ಲಿಸಿದರು,
ಪ್ರಾರಂಭದಲ್ಲಿ ಪರಮಾನಂದ ಸಾಲ್ಯಾನ್ ಅವರ ಭಾವಚಿತ್ರದ ಮುಂದೆ ದೀಪ ಮತ್ತು ಪುಷ್ಪ ನಮನವನ್ನು
ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘ ಮತ್ತು ಶ್ರೀ ಸಾರಂತಾಯ ಗರಡಿ ಉಳ್ಳಾಯ ದೈವಸ್ಥಾನದ ಮುಂಬೈಯ ಆಡಳಿತ ಸಮಿತಿಯ ಪದಾಧಿಕಾರಿ ಬಿಲ್ಲವರ ಅಸೋಸಿಯೇಷನ್ ನ ಪದಾಧಿಕಾರಿಗಳು ಮತ್ತು ಸಸಿಹಿತ್ಲುಗಾಮದ ಗಣ್ಯರು ಬೆಳಗಿಸಿದರು,
ಸಭೆಯ ಕೊನೆಯಲ್ಲಿ ಮೌನ ಪ್ರಾರ್ಥನೆ ಮಾಡಿ ಪರಮಾತ್ಮನ ಚರಣ ಕಮಲದಲ್ಲಿ ಲೀನವಾಗಿರುವ ಪರಮಾನಂದ ಸಾಲ್ಯಾನ್ ಅವರ ಆತ್ಮ ಸದ್ಗತಿ ಎಂದು ಪ್ರಾರ್ಥಿಸಿದರು
ಸಭೆಯಲ್ಲಿ ಪರಮಾನಂದ ಸಾಲ್ಯಾನ್ ಅವರ ಅಪಾರ ಅಭಿಮಾನಿಗಳು ಅಲ್ಲದೆ ಸಸಿಹಿತ್ಲು ಗ್ರಾಮಸ್ಥರು ಕುಟುಂಬಿಕರು ಆಗಮಿಸಿ ನುಡಿನಮನ ಶ್ರದ್ಧಾಂಜಲಿ ಅರ್ಪಿಸಿದರು,
ಜನನ ಮತ್ತು ಮರಣದ ನಡುವೆ ಮನುಷ್ಯ ಏನು ಮಾಡಿದ? ಎಷ್ಟು ಆಸ್ತಿ-ಸಂಪತ್ತು ಗಳಿಸಿದ ಎಂಬುದು ಮುಖ್ಯ: ಎಲ್ ವಿ ಅಮೀನ್,
ಬಿಲ್ಲವರ ಅಸೋಸಿಯೇಷನ್ ಗರವ ಅಧ್ಯಕ್ಷ ಎಲ್ ವಿ ಅಮೀನ್ ಪರಮಾನಂದರು ಬಗ್ಗೆ ಮಾತನಾಡುತ್ತಾ ಅವರ ನಾಟಕಗಳು ನಮ್ಮ ಮುಂಬರುವ ಪೀಳಿಗೆಗೆ ಆಸೆಯ ಆಸರೆಯಾಗಬಹುದು. ಇಂದಿನ ಯುವಜನತೆಗೆ ಮುಂಚಿನ ತುಳುನಾಡಿನ ಜೀವನ ಮತ್ತು ಸಂಸ್ಕೃತಿ ಹೇಗಿತ್ತು ಎಂಬ ಹಿನ್ನೆಲೆಯನ್ನು ಅವರ ನಾಟಕಗಳ ಮೂಲಕ ತಿಳಿದುಕೊಳ್ಳಬಹುದು. ನಾವು ಅವರ ನಾಟಕಗಳನ್ನು ನೋಡಬೇಕು, ಅದರಲ್ಲಿ ತುಳುನಾಡಿನ ಎಲ್ಲಾ ಜಾತಿಯ ಜನರ ವಿವರಣೆ ನೀಡಿ, ಅವರೆಲ್ಲರೂ ಹೇಗೆ ಒಗ್ಗಟ್ಟಿನಿಂದ ಇದ್ದರು ಎಂಬುದನ್ನು ಆ ನಾಟಕದಲ್ಲಿ ತೋರಿಸಲಾಗುತ್ತದೆ. ಪರಮಾನಂದರು ಎಲ್ಲರನ್ನೂ ಒಂದಾಗಿಸುವ ತುಳುನಾಡಿನ ಒಗ್ಗಟ್ಟಿಗೆ ಒಂದು ದೊಡ್ಡ ಶಕ್ತಿಯಾಗಿ ನಾಟಕಗಳಲ್ಲಿ ಕೆಲಸ ಮಾಡಿದ್ದಾರೆ.
ಕೆಲವು ಬರವಣಿಗೆಯ ವಿಷಯಗಳಲ್ಲಿ ಅವರು ಮಾಡುತ್ತಿದ್ದ ಕೆಲಸ ನನಗೆ ತುಂಬಾ ಇಷ್ಟವಾಗುತ್ತಿತ್ತು.
ಅಂತಹ ಪರಮಾನಂದರು ಇಂದು ನಮ್ಮೊಂದಿಗಿಲ್ಲ ಎಂದು ಹೇಳಲು ದುಃಖವಾಗುತ್ತದೆ. ಇತ್ತೀಚೆಗೆ ಭಗವತಿ ಕ್ಷೇತ್ರದ ಕಾರ್ಯಕ್ರಮಕ್ಕೆ ಹೋದಾಗ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಅವರ ಆರೋಗ್ಯ ತುಂಬಾ ಕ್ಷೀಣಿಸಿತ್ತು, ಈಗ ಎಲ್ಲಿಗೂ ಹೋಗುತ್ತಿಲ್ಲ, ಮನೆಯಲ್ಲೇ ಇದ್ದಾರೆ ಎಂಬುದು ಗೊತ್ತಾಗಿ ಬಹಳ ಸಮಯದ ನಂತರ ಅವರನ್ನು ನೋಡಿದಾಗ ಅವರು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದರು. ಇಂದು ಪರಮಾನಂದರು ಧಾರ್ಮಿಕ ಮತ್ತು ಬ್ರಹ್ಮ ಕಲಶದಂತಹ ಕೆಲಸಗಳಿಗೆ, ತುಳುನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ಇಲ್ಲದಿರುವುದು ತುಂಬಾ ದುಃಖದ ಸಂಗತಿ.
ಮನುಷ್ಯನಿಗೆ ಜನ್ಮ ಬರುವುದು ಅನಿವಾರ್ಯ, ಆದರೆ ಮರಣ ಬರುವುದು ಶಾಶ್ವತ. ಆದರೆ, ಆ ಜೀವನದ ಜನನ ಮತ್ತು ಮರಣದ ನಡುವೆ ಮನುಷ್ಯ ಏನು ಮಾಡಿದ? ಎಷ್ಟು ಆಸ್ತಿ-ಸಂಪತ್ತು ಗಳಿಸಿದ ಎಂಬುದು ಮುಖ್ಯವಲ್ಲ. ಇಂದು ಪರಮಾನಂದರ ಸಂಪತ್ತು ಎಂದರೆ, ಅವರು ಸಮಾಜಕ್ಕೆ ಮತ್ತು ನಾಟಕಗಳ ಮೂಲಕ ನೀಡಿದ ಮಾರ್ಗದರ್ಶನ ಹಾಗೂ ವಿಚಾರಗಳು. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯ. ಪರಮಾನಂದರು ತಮ್ಮ ಜೀವನದಲ್ಲಿ ಬೇರೆ ಸಂಪತ್ತು ಮಾಡಲಿಲ್ಲ, ನಾಟಕಗಳ ಮೂಲಕ ನಮಗೆಲ್ಲರಿಗೂ ತುಳುನಾಡಿನ ಸರಿಯಾದ ಜೀವನವನ್ನು ಕಲ್ಪಿಸಿಕೊಟ್ಟಿದ್ದೇ ಅವರು ಗಳಿಸಿದ ನಿಜವಾದ ಸಂಪತ್ತು.
ಅವರು ನಿಧನರಾದ ಈ ಸಂದರ್ಭದಲ್ಲಿ ಪರಮಾತ್ಮನು ಅವರಿಗೆ ಸ್ವರ್ಗದಲ್ಲಿ ಸ್ಥಾನ ನೀಡಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ಅವರ ಕುಟುಂಬದವರಿಗೆ ಮತ್ತು ಬಂಧುಗಳಿಗೆ ನೀಡಲಿ.





