31 C
Mumbai
September 11, 2026
Mumbai News Kannada
ಪ್ರಕಟಣೆ

ಜುಲೈ 29 ರಿಂದ ಸೆಪ್ಟೆಂಬರ್ 26 ರವರೆಗೆ ವಾಲ್ಕೇಶ್ವರದಲ್ಲಿ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರ 32ನೆಯ ಚಾತುರ್ಮಾಸ್ಯ ವ್ರತ






​ಮುಂಬೈ: ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜರ ‘ಪರಾಭವ’ ಸಂವತ್ಸರದ 32ನೆಯ ಚಾತುರ್ಮಾಸ್ಯ ವ್ರತಾಚರಣೆಯ ಸಮಾರಂಭವು ಮುಂಬೈನ ವಾಲ್ಕೇಶ್ವರದ ಕೈವಲ್ಯ ಮಠದ ಕಾಳಿಕಾ ಮಾತಾ ದೇವಸ್ಥಾನದ ಸಂಕುಲದಲ್ಲಿ ನೆರವೇರಲಿದೆ.
​ವ್ರತ ಸ್ವೀಕಾರ: ಗುರುಪೂರ್ಣಿಮೆ — ಬುಧವಾರ, 29.07.2026
​ವ್ರತ ಸಮಾಪ್ತಿ: ಶನಿವಾರ, 26.09.2026
​ಜಿ.ಎಸ್.ಬಿ. (GSB) ಸಮಾಜದ ಆದಿಗುರು ಪೀಠವಾದ ಗೋವಾದ ಫೊಂಡಾದಲ್ಲಿರುವ ಕೈವಲ್ಯ ಮಠದ ಪೀಠಾಧಿಪತಿಗಳೂ, ಗುರು ಪರಂಪರೆಯ 77ನೆಯ ಯತಿವರ್ಯರೂ ಆಗಿರುವ ಪರಮಪೂಜ್ಯ ಗುರುವರ್ಯ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ 32ನೆಯ ಚಾತುರ್ಮಾಸ್ಯ ವ್ರತವನ್ನು ವಾಲ್ಕೇಶ್ವರದ (ಪ್ರಖ್ಯಾತ ಬಾಣಗಂಗಾ ಪರಿಸರ) ಸ್ವಮಠದ ಕಾಳಿಕಾ ದೇವಿ ಸಂಕುಲದಲ್ಲಿ 29.07.2026 ರಿಂದ 26.09.2026 ರವರೆಗೆ ಆಚರಿಸಲಿದ್ದಾರೆ.
​ಅಂತೆಯೇ ಬುಧವಾರ, 29.07.2026 ರಂದು ಗುರುಪೂರ್ಣಿಮೆಯ ಶುಭದಿನದ ಶುಭ ಮುಹೂರ್ತದಲ್ಲಿ, ಪ್ರಬುದ್ಧ ವೈದಿಕ ಶ್ರೇಷ್ಠರು, ಗಣ್ಯರು ಹಾಗೂ ಸಮಾಜ ಬಾಂಧವರ ಉಪಸ್ಥಿತಿಯಲ್ಲಿ ಸಂಸ್ಥಾನದ ಆರಾಧ್ಯ ದೇವತೆ ಶ್ರೀ ಭವಾನಿ ಶಂಕರ ದೇವರು, ಕಾಳಿಕಾ ದೇವಿ ಮತ್ತು ಮುರಳೀಧರ ಶ್ರೀ ಕೃಷ್ಣ ದೇವರ ದಿವ್ಯ ಚರಣಾರವಿಂದಗಳಲ್ಲಿ ಪರಾಭವ ಸಂವತ್ಸರದ ಚಾತುರ್ಮಾಸ ವ್ರತವನ್ನು ಸ್ವೀಕರಿಸಲಿದ್ದಾರೆ.
​ವ್ಯಾಸ ಪೂಜೆ, ಆರಾಧ್ಯ ದೇವತೆ ಭವಾನಿ ಶಂಕರ ಆರಾಧನೆ, ಮಧ್ಯಾಹ್ನದ ಪೂಜೆ, ಆರತಿ, ಸ್ಥಾನ ದೇವತೆ ಕಾಳಿಕಾ ಮಾತೆಯ ಪೂಜೆ, ಮಂಗಳಾರತಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಒಳಗೊಂಡ ಈ ಸಮಾರಂಭವನ್ನು ವೀಕ್ಷಿಸಲು ಮುಂಬೈ, ಗೋವಾ, ಕರ್ನಾಟಕದ ಮಂಗಳೂರು, ಕಾರವಾರ, ಕರಾವಳಿ ಪ್ರದೇಶ, ಬೆಂಗಳೂರು ಸೇರಿದಂತೆ ಇನ್ನಿತರ ಸ್ಥಳಗಳಿಂದ ಅಪಾರ ಸಂಖ್ಯೆಯ ಶಿಷ್ಯವರ್ಗದವರು ಆಗಮಿಸುವ ನಿರೀಕ್ಷೆಯಿದೆ.
​ಚಾತುರ್ಮಾಸ್ಯ ವ್ರತ ಪ್ರಾರಂಭದ ದಿನದಿಂದ ಸಮಾಪ್ತಿಯ ತನಕ (ಏಕಾದಶಿಯ ದಿನಗಳನ್ನು ಹೊರತುಪಡಿಸಿ) ಪ್ರತಿದಿನ ನಿತ್ಯ ಭಿಕ್ಷಾಸೇವೆ ಹಾಗೂ ಪಾದಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.
​ವ್ರತಾಚರಣೆಯುದ್ದಕ್ಕೂ ಶ್ರಾವಣ ಸೋಮವಾರದ ಪ್ರದೋಷ ಪೂಜೆ (ಸಾಯಂಕಾಲ), ಲಘುರುದ್ರ ಹವನ, ಹಬ್ಬ-ಹರಿದಿನಗಳು, ಕೃಷ್ಣಾಷ್ಟಮಿ, ಶ್ರೀ ಗಣೇಶೋತ್ಸವ, ಮಹಾಲಕ್ಷ್ಮಿ ವ್ರತ ಪೂಜೆ ಹಾಗೂ ಭಕ್ತಾದಿಗಳಿಂದ ವಿವಿಧ ಸೇವೆಗಳನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಭಜನೆ, ಸಂಗೀತ, ಶಾಸ್ತ್ರೀಯ ನೃತ್ಯ ಹಾಗೂ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
​ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರೆಲ್ಲರಿಗೂ ಸವಿನಯ ಆಹ್ವಾನ ನೀಡಲಾಗಿದೆ. ಸಮಾಜ ಬಾಂಧವರು, ಮಠದ ಅನುಯಾಯಿಗಳು ಹಾಗೂ ಭಕ್ತಾದಿಗಳು ಸ್ವಾಮೀಜಿಯವರ ವ್ರತ ಸ್ವೀಕಾರ ಕಾರ್ಯಕ್ರಮ ಸೇರಿದಂತೆ ವ್ರತದ ಪೂರ್ತಿ ಅವಧಿಯಲ್ಲಿ ನಡೆಯುವ ಎಲ್ಲಾ ವಿಧಿ-ವಿಧಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಈ ಪಾವನ ಆಚರಣೆಯನ್ನು ಯಶಸ್ವಿಗೊಳಿಸಬೇಕು. ಆ ಮೂಲಕ ಶ್ರೀ ಹರಿ-ಗುರುಗಳ ಕೃಪಾದೃಷ್ಟಿ ಹಾಗೂ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕೈವಲ್ಯ ಮಠ ವಾಲ್ಕೇಶ್ವರದ ಸ್ಥಳೀಯ ಸಮಿತಿಯ ಸದಸ್ಯರು ವಿನಂತಿಸಿಕೊಂಡಿದ್ದಾರೆ.



Related posts

ಉಳ್ಳಾಲದಲ್ಲಿ ಅದ್ದೂರಿ ಗಾಣಿಗ ಭವನ ಲೋಕಾರ್ಪಣೆ: ಮೇ 10ರಂದು ಸಮುದಾಯದ ಐತಿಹಾಸಿಕ ಕ್ಷಣ

Mumbai News Desk

ಸಾರ್ವಜನಿಕ ಶ್ರೀ ಶನಿಶ್ಚರ ಸೇವಾ ಸಮಿತಿ, ವಸಾಯಿ : ಫೆ. 14ರಂದು ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿಶ್ಚರ ಮಹಾಪೂಜೆ

Mumbai News Desk

ಡೊಂಬಿವಲಿಯಲ್ಲಿ ಜುಲೈ 19ರಂದು ‘ಚಕ್ರವ್ಯೂಹ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿಮೇ 10ರಂದು ಬಾಲಭೋಜನಾಲಯ ಮತ್ತು ಧ್ಯಾನ ಮಂದಿರ ಲೋಕಾರ್ಪಣೆ

Mumbai News Desk

ಎ. 12 ರಿಂದ 18 ರ ವರಗೆ ಶ್ರೀ ಕ್ಷೇತ್ರ ಉಂಡಾರು ಶ್ರೀವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಾರ್ಷಿಕ ಉತ್ಸವ.

Mumbai News Desk

ಡೊಂಬಿವಲಿ: ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವ – ‘ಸ್ವರ್ಣ ಸಂಭ್ರಮ’ ಸೆಪ್ಟೆಂಬರ್ 27ರಂದು ದಾಸರ ಭಜನಾ ಸ್ಪರ್ಧೆ ಆಯೋಜನೆ

Mumbai News Desk