30 C
Mumbai
September 11, 2026
Mumbai News Kannada
ಕ್ರೀಡೆ

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮೀರಾಬಾಯಿ ಚಾನು ಸತತ ಮೂರನೇ ಚಿನ್ನದ ಪದಕ ಸಾಧನೆ





ಭಾರತದ ಖ್ಯಾತ ವೇಟ್‌ಲಿಫ್ಟರ್ 31 ವರ್ಷದ ಮೀರಾಬಾಯಿ ಚಾನು ಕಾಮನ್‌ವೆಲ್ತ್‌ ಗೇಮ್ಸ್‌ನ ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಸತತ ಮೂರನೇ ಬಾರಿಗೆ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಗ್ಲಾಸ್ಗೋದಲ್ಲಿ ನಡೆದ ಸ್ಪರ್ಧೆಯ ಸ್ನ್ಯಾಚ್‌ ವಿಭಾಗದಲ್ಲಿ 85 ಕೆ.ಜಿ. ಭಾರ ಎತ್ತುವ ಮೂಲಕ ಹೊಸ ಗೇಮ್ಸ್ ದಾಖಲೆ ಬರೆದ ಚಾನು, ಕ್ಲೀನ್‌ ಆ್ಯಂಡ್‌ ಜರ್ಕ್‌ ವಿಭಾಗದಲ್ಲಿ 105 ಕೆ.ಜಿ. ಎತ್ತುವಲ್ಲಿ ಯಶಸ್ವಿಯಾದರು. ಈ ಮೂಲಕ ಒಟ್ಟು 190 ಕೆ.ಜಿ. ಭಾರ ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದು ಬಂಗಾರಕ್ಕೆ ಮುತ್ತಿಟ್ಟರು. ದ್ವಿತೀಯ ಸ್ಥಾನ ಪಡೆದ ನೈಜೀರಿಯಾದ ರುಥ್‌ ನ್ಯೊಂಗ್‌ (168 ಕೆ.ಜಿ.) ಅವರಿಗಿಂತ ಚಾನು ಬರೋಬ್ಬರಿ 22 ಕೆ.ಜಿ. ಹೆಚ್ಚು ಭಾರ ಎತ್ತಿ ಅದ್ಭುತ ಮೇಲುಗೈ ಸಾಧಿಸಿದರು.
ಈ ಗೆಲುವಿನೊಂದಿಗೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 3ಕ್ಕೆ ಏರಿಕೆಯಾಗಿದ್ದು, ಶನಿವಾರ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಝಂಡು ಕುಮಾರ್‌ ಕಂಚಿನ ಪದಕ ಗೆದ್ದುಕೊಂಡಿದ್ದರು.
ಮೀರಾಬಾಯಿ ಚಾನು ಅವರಿಗೆ ಇದು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸಿಕ್ಕ ಒಟ್ಟಾರೆ 4ನೇ ಪದಕವಾಗಿದೆ. ಅವರು 2014ರಲ್ಲಿ ಬೆಳ್ಳಿ (48 ಕೆ.ಜಿ.), 2018ರಲ್ಲಿ ಚಿನ್ನ (48 ಕೆ.ಜಿ.) ಮತ್ತು 2022ರಲ್ಲಿ ಚಿನ್ನ (49 ಕೆ.ಜಿ.) ಗೆದ್ದಿದ್ದರು. ಇದರ ಜೊತೆಗೆ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 1 ಚಿನ್ನ ಮತ್ತು 2 ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಾನು ಅವರ ಈ ಐತಿಹಾಸಿಕ ಸಾಧನೆಯನ್ನು ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಭಾರತೀಯ ವೇಟ್‌ಲಿಫ್ಟಿಂಗ್‌ನ ಹೊಸ ಅಧ್ಯಾಯ ಹಾಗೂ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಪ್ರದರ್ಶನ ಎಂದು ಅಭಿನಂದಿಸಿದ್ದಾರೆ.



Related posts

ಸಾಫಲ್ಯ ಸೇವಾ ಸಂಘ ಮುಂಬೈ ‘ಸಾಫಲ್ಯ ಕ್ರೀಡಾ ಸ್ಪರ್ಧೆ – 2026’

Mumbai News Desk

*ಸರ್ವ ಬಂಟರ ಕ್ರೀಡಾ ಕೂಟದ *ವಾರ್ಷಿಕ ಕ್ರಿಕೆಟ್ ಬಂಟ್ಸ್ ಕಪ್,*ಸತತ ಎರಡನೆಯ ಬಾರಿ  ” ಜಲದುರ್ಗಾ “ತಂಡಕ್ಕೆ ಟ್ರೋಫ಼ಿ

Mumbai News Desk

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ 5ನೇ ಟಿ20 ಪಂದ್ಯ ರದ್ದು : ಭಾರತದ ಮುಡಿಗೆ ಟಿ20 ಸರಣಿ

Mumbai News Desk

ಮುಂಬೈ : 18ನೇ ನ್ಯಾಯವಾದಿ ಎ.ಆರ್. ಕುದ್ರೋಳಿ ಸ್ಮಾರಕ ಫುಟ್ಬಾಲ್ ಪಂದ್ಯಾಟ : ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಗೆ ಚಾಂಪಿಯನ್ ಪಟ್ಟ

Mumbai News Desk

ಸುರತ್ಕಲ್ ಬಂಟ್ಸ್ ಕ್ರಿಕೆಟ್ ಜೆರ್ಸಿ ಹಾಗೂ ಟ್ರೋಫಿ ಅನಾವರಣ

Mumbai News Desk

ಬೊಯಿಸರ್ ನಲ್ಲಿ ತುಂಗಾ ಪ್ರೀಮಿಯರ್   ಲೀಗ್ ಕ್ರಿಕೆಟ್ ಟೂರ್ನಮೆಂಟ್ ಆರಂಭ.

Mumbai News Desk