ಜೇಸಿಐ ಕಾಪು ಘಟಕದ ನೇತೃತ್ವದಲ್ಲಿ ಸೆಪ್ಟೆಂಬರ್ 26ರ ಶನಿವಾರ ಜೇಸಿಐ ಉಡುಪಿ ಶಿವಳ್ಳಿ ಹಾಗೂ ಡಾ NSAM ಪ್ರಥಮ ದರ್ಜೆ ಕಾಲೇಜು ನಿಟ್ಟೆ ಇದರ ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೆಂಜರ್ಸ್ ಘಟಕ, IQAC
ಸಹಯೋಗದಲ್ಲಿ ಕಾಪು ಕಡಲ ಕಿನಾರೆ ಸ್ವಚ್ಛತೆಯನ್ನು ಮಾಡಿ, ತ್ಯಾಜ್ಯ ವಿಲೇವಾರಿ ಮಾಡಲಾಯಿತು.
ಕಾಪು ಪುರಸಭೆಯ ಮುಖ್ಯ ಅಧಿಕಾರಿ ನೀಲಕಂಠ ಮೇಸ್ತ ಅವರು ಮಾತನಾಡಿ ಭೂಮಿ ತಾಯಿಯ ಮಡಿಲಲ್ಲಿ ಕಸಗಳ ರಾಶಿ ಇದೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ನಮ್ಮ ಭಾರತ ದೇಶವನ್ನು ಸ್ವಚ್ಛ ಸುಂದರ ದೇಶವನ್ನಾಗಿಸೋಣ, ಎಲ್ಲರೂ ಮನೆಯಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ನೀಡಿದರೆ ಸ್ವಚ್ಛತಾ ಕಾರ್ಮಿಕರಿಗೆ ಸಹಕಾರಿಯಾಗುತ್ತದೆ, ಸ್ವಚ್ಛ ಸುಂದರ ಕಾಪು ಮಾಡಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಜೇಸಿಐ ಉಡುಪಿ ಶಿವಳ್ಳಿ ಘಟಕದ ಅಧ್ಯಕ್ಷ ವಿನೋದ್ ಶೆಟ್ಟಿ ಉಡುಪಿ, ವಲಯ 15ರ ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು, ಜೇಸಿಐ ಕಾಪು ಘಟಕದ ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ, ಪೂರ್ವಾಧ್ಯಕ್ಷ ಸುಧಾಕರ್ ಸಾಲ್ಯಾನ್, ರಮೇಶ್ ನಾಯ್ಕ್, ನಿಟ್ಟೆ ಕಾಲೇಜಿನ ಎನ್ ಎಸ್ ಎಸ್ ಸಂಯೋಜಕರಾದ ದಿವ್ಯಾಕ್ಷ ಪ್ರಭು, ರಿತು, ಸೃಜನ್, ರೋವರ್ಸ್ ಮತ್ತು ರೆಂಜರ್ಸ್ ಘಟಕದ ಸಂಯೋಜಕಿ ನಿಶ್ಮಿತಾ, ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿ ನಾಯಕ ರಾಹುಲ್ ನಾಯ್ಕ್, ರೋವರ್ಸ್ ಮತ್ತು ರೆಂಜರ್ಸ್ ಘಟಕದ ವಿದ್ಯಾರ್ಥಿ ನಾಯಕ ಶಮಂತ್, ಪುರಸಭೆ ಸಿಬ್ಬಂದಿಗಳು, ಪೌರಕಾರ್ಮಿಕರು, ಕರಾವಳಿ ಪಡೆಯ ಕೆ ಎನ್ ಡಿ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜೇಸಿಐ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಗೈದರು, ಎನ್ ಎಸ್ ಎಸ್ ವಿದ್ಯಾರ್ಥಿ ಸೌಮ್ಯ ಧನ್ಯವಾದಗೈದರು.



