October 25, 2026
Mumbai News Kannada
ತುಳುನಾಡು

ಮೂಲ್ಕಿಯಲ್ಲಿ ಉಚಿತ ಕಣ್ಣು ಪರೀಕ್ಷೆ, ಕನ್ನಡಕ ವಿತರಣೆ ಹಾಗೂ ಸಕ್ಕರೆ ಕಾಯಿಲೆ ಪರೀಕ್ಷಾ ಶಿಬಿರ



ಮೂಲ್ಕಿ: ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಮೂಲ್ಕಿ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ ಮೂಲ್ಕಿ ಇದರ ಸಹಯೋಗದಲ್ಲಿ, ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸಹಕಾರದೊಂದಿಗೆ ನೇತ್ರ ಚಿಕಿತ್ಸಾ ವಿಭಾಗದ ತಜ್ಞ ವೈದ್ಯರುಗಳಿಂದ ಉಚಿತ ಕಣ್ಣು ಪರೀಕ್ಷೆ, ಉಚಿತ ಕನ್ನಡಕ ವಿತರಣೆ ಹಾಗೂ ಸಕ್ಕರೆ ಕಾಯಿಲೆ ಪರೀಕ್ಷಾ ಶಿಬಿರವು ಮೂಲ್ಕಿ ಬಿಲ್ಲವ ಸಂಘದಲ್ಲಿ ಜರುಗಿತು.

ಲಯನ್ ಪ್ರವೀಣ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಹ್ರಷಿಕೇಶ್ ಅಮೀನ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ರಮೇಶ್ ರಾಥೋಡ್, ವಲಯಾಧ್ಯಕ್ಷ ಸಂದೀಪ್ ಸುವರ್ಣ, ಹರ್ಷರಾಜ್ ಶೆಟ್ಟಿ ಜಿ.ಎಂ., ಯತೀಶ್ ಕುಮಾರ್ ಕೊಲೆಕಾಡಿ ಹಾಗೂ ಲಿಯೋ ಅಧ್ಯಕ್ಷೆ ಶ್ರದ್ಧಾ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದಯ ಅಮೀನ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು. ಸುಮಾರು 200 ಮಂದಿ ಶಿಬಿರಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.



Related posts

ಸಾಲ್ಯಾನ್ ಮೂಲಸ್ಥಾನ ಕದಿಕೆ, ಹಳೆಯಂಗಡಿ – ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಪ್ರೋತ್ಸಾಹ ಧನ ವಿತರಣೆ.

Mumbai News Desk

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ದಲ್ಲಿ ಬ್ರಹ್ಮಕಲಶೋತ್ಸವದ ನಾಲ್ಕನೇ ದಿನದ ಸಮಾರಂಭ;

Mumbai News Desk

ಕಾಪು: ಜನ ಮೆಚ್ಚಿದ ತಹಶೀಲ್ದಾರ್ ಡಾ. ಪ್ರತಿಭಾ ಅವರಿಗೆ ಆತ್ಮೀಯ ಬೀಳ್ಕೊಡುಗೆ

Mumbai News Desk

ಕಾಪುವಿನ ಅಮ್ಮನ ಸನ್ನಿಧಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಉದ್ಘಾಟನೆ, ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ; ಡಾ. ಮೋಹನ್ ಆಳ್ವ ಸಹಿತ ಗಣ್ಯರಿಂದ ಅಕ್ಷರ ನಮನ

Mumbai News Desk

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ದಲ್ಲಿ ಬ್ರಹ್ಮಕಲಶೋತ್ಸವ; ಶುಭಾರಂಭ

Mumbai News Desk

ಸ್ಯಾಬ್ರ ಕಟ್ಟೆ: ನಿವೃತ ಹಿರಿಯ ಬ್ಯಾಂಕ್ ಅಧಿಕಾರಿ ಗಳಿಗೆ ಸನ್ಮಾನ

Mumbai News Desk