November 12, 2026
Mumbai News Kannada
ಪ್ರಕಟಣೆ

ಡೊಂಬಿವಲಿ: ನ. 27, 28ರಂದು ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ 68ನೇ ವಾರ್ಷಿಕ ಮಹಾಪೂಜೆ





















ಡೊಂಬಿವಲಿ (ಪಶ್ಚಿಮ): ಇಲ್ಲಿನ ಕೋಪರ್ ನಿಲ್ದಾಣ ಹಾಗೂ ಕಿಡ್‌ಲ್ಯಾಂಡ್ ಹೈಸ್ಕೂಲ್ ಸಮೀಪದ ಟೆಲ್ಕೋಸ್‌ವಾಡಿಯ ನಾನಾ ಸ್ಮೃತಿ ಬಿಲ್ಡಿಂಗ್ ತಳಮಹಡಿಯಲ್ಲಿರುವ ಶ್ರೀ ರಾಧಾಕೃಷ್ಣ ಭಜನಾ ಮಂಡಳಿ (ರಿ.) ವತಿಯಿಂದ ನಿರ್ವಹಿಸಲ್ಪಡುತ್ತಿರುವ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ 68ನೇ ವಾರ್ಷಿಕ ಮಂಗಳೋತ್ಸವ (ಮಹಾಪೂಜೆ) ಇದೇ ನವೆಂಬರ್ 27ರ ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ನವೆಂಬರ್ 28ರ ಶನಿವಾರ ರಾತ್ರಿ 10 ಗಂಟೆಯವರೆಗೆ ವಿಜೃಂಭಣೆಯಿಂದ ಜರುಗಲಿದೆ.

ಶ್ರೀ ಪರಾಭವ ನಾಮ ಸಂವತ್ಸರದ ಕಾರ್ತಿಕ ಮಾಸ ಕೃಷ್ಣಪಕ್ಷ ಶರದೃತುವಿನ ಈ ಶುಭ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಕಾಶ್ ಭಟ್ ಕಾನಂಗಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.



















ಕಾರ್ಯಕ್ರಮಗಳ ವಿವರ:

  • ಶುಕ್ರವಾರ (ನ. 27): ಬೆಳಿಗ್ಗೆ 7 ಗಂಟೆಯಿಂದ ತೋರಣ ಮುಹೂರ್ತ, ಗಣಹೋಮ, ನವಕ ಪ್ರಧಾನ ಹೋಮ, ನವಕ ಕಲಶಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಮಹಾಮಂಗಳಾರತಿ ಜರುಗಲಿದೆ.
  • ಶನಿವಾರ (ನ. 28): ಬೆಳಿಗ್ಗೆ 6.30ರಿಂದ ಪ್ರಾತಃಕಾಲ ನಿತ್ಯಪೂಜೆ, ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಶ್ರೀ ಸತ್ಯನಾರಾಯಣ ಮಹಾಪೂಜೆ, ಬೆಳಿಗ್ಗೆ 11 ಗಂಟೆಗೆ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.15ಕ್ಕೆ ಮಹಾಪೂಜೆ ಮತ್ತು ಮಹಾಮಂಗಳಾರತಿ ಜರುಗಲಿದೆ. ಮಧ್ಯಾಹ್ನ 12.30ರಿಂದ 1.30ರವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ 1.30ರಿಂದ ಸಂಜೆ 7.30ರವರೆಗೆ ಶ್ರೀ ಶನಿಪೂಜೆ ಹಾಗೂ ಶನಿ ಗ್ರಂಥ ಪಾರಾಯಣ, ರಾತ್ರಿ 7.30ರಿಂದ 8.30ರವರೆಗೆ ರಂಗಪೂಜೆ ನಡೆಯಲಿದೆ. ರಾತ್ರಿ 8.30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಭಕ್ತಾಭಿಮಾನಿಗಳು ಬಂಧು-ಮಿತ್ರರೊಂದಿಗೆ ಆಗಮಿಸಿ ಶ್ರೀ ಮಹಾಗಣಪತಿ, ಶ್ರೀ ಶನೀಶ್ವರ ಹಾಗೂ ಪ್ರಧಾನ ದೇವರಾದ ಶ್ರೀ ರಾಧಾಕೃಷ್ಣ ದೇವರ ಕೃಪೆಗೆ ಪಾತ್ರರಾಗಿ ತೀರ್ಥ ಪ್ರಸಾದ ಸ್ವೀಕರಿಸಬೇಕೆಂದು ಮಂಡಳಿಯ ಗೌರವಾಧ್ಯಕ್ಷರಾದ ಡಾ. ದಿವಾಕರ್ ಟಿ. ಶೆಟ್ಟಿ ಇಂದ್ರಾಳಿ, ಅಧ್ಯಕ್ಷ ಸೋಮನಾಥ್ ಆರ್. ಪೂಜಾರಿ, ಉಪಾಧ್ಯಕ್ಷರಾದ ರವಿ ಸನಿಲ್ ಮತ್ತು ಪುರಂದರ್ ಜಿ. ಕೋಟ್ಯಾನ್, ಗೌರವ ಕಾರ್ಯದರ್ಶಿ ರಾಜೇಶ್ ಸಿ. ಕೋಟ್ಯಾನ್, ಜೊತೆ ಕಾರ್ಯದರ್ಶಿ ಭರತ್ ಕುಮಾರ್ ಪುಂಜಾಲಕಟ್ಟೆ, ಗೌರವ ಕೋಶಾಧಿಕಾರಿ ಪ್ರಸಾದ್ ಪೂಜಾರಿ ಹಾಗೂ ಜೊತೆ ಕೋಶಾಧಿಕಾರಿ ಕಾರ್ತಿಕ್ ದೇವಾಡಿಗ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಮಂಡಳಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.







































































































ಮಹಾಪೂಜೆ ಹಾಗೂ ವಿಶೇಷ ಪೂಜಾ ಸೇವೆಗಳನ್ನು ಸಲ್ಲಿಸಲಿಚ್ಛಿಸುವ ಭಕ್ತರು ಮುಂಚಿತವಾಗಿ ಆಡಳಿತ ಮಂಡಳಿಯನ್ನು (ಮೊಬೈಲ್: 98214 32035) ಸಂಪರ್ಕಿಸಬಹುದು.



Related posts

ಆಗಸ್ಟ್ 2 ಥಾಣೆಯಲ್ಲಿ : ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಇದರ ಜಂಟಿ ಆಯೋಜನೆಯಲ್ಲಿ “ರಾಮ ದರ್ಶನ- ಗದಾಯುದ್ಧ” ಯಕ್ಷಗಾನ ಪ್ರದರ್ಶನ.

Mumbai News Desk

ಪಲಾವಾ ಕನ್ನಡಿಗರ ಸಂಘ ಡೊಂಬಿವಲಿ: ಕನ್ನಡ ರಾಜ್ಯೋತ್ಸವದ ಆಚರಣೆ

Mumbai News Desk

ಇಂದು ಡೊಂಬಿ‌ವಲಿಯಲ್ಲಿ ಕಲಾ ಪ್ರಕಾಶ್ ಪ್ರತಿಷ್ಠಾನದಿಂದ ವಾಲಿ ಮೋಕ್ಷ ಯಕ್ಷಗಾನ ಪ್ರದರ್ಶನ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಜುಲೈ.20ಕ್ಕೆ ಆಟಿಡೊಂಜಿ ದಿನ

Mumbai News Desk

ವಜ್ರ ಮಹೋತ್ಸವದ ಸಂಭ್ರಮದಲ್ಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ,

Mumbai News Desk

ಡೊಂಬಿವಲಿ: “ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಆಶ್ರಯದಲ್ಲಿ ಜ. 3ರಂದು ಶ್ರೀ ಶನೀಶ್ವರ ಮಹಾಪೂಜೆ ಹಾಗೂ ಸತ್ಯನಾರಾಯಣ ಪೂಜೆ

Mumbai News Desk