29 C
Mumbai
August 21, 2026
Mumbai News Kannada
ಸುದ್ದಿ

ಮೊಗವೀರ ವ್ಯವಸ್ಥಾಪಕ ಮಂಡಳಿ ಮಾಜಿ ಅಧ್ಯಕ್ಷ, ಅಪರೂಪದ ಸಾಧಕ ಹೊಸಬೆಟ್ಟು ಕೆ. ಆರ್. ಪುತ್ರನ್ ನಿಧನ





ಮೊಗವೀರ ವ್ಯವಸ್ಥಾಪಕ ಮಂಡಳಿ ಇದರ ಮಾಜಿ ಅಧ್ಯಕ್ಷ ಹೊಸಬೆಟ್ಟು ಕೆ. ಆರ್. ಪುತ್ರನ್(94) ಅವರು ಇಂದು ಮಂಗಳೂರಿನಲ್ಲಿ ನಿಧನರಾದರು. ಮೊಗವೀರ ಮಂಡಳಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ 3 ದಶಕಗಳ ಕಾಲ ತಮ್ಮ ಸಮಯವನ್ನು ನೀಡಿ ಮಂಡಳಿಯನ್ನು ತಮ್ಮ ಶಿಸ್ತು ಬದ್ಧ ನೀತಿಯಿಂದ ಸಮೃದ್ಧ ಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

ಸಿ ಎ ಕಂಪನಿಯಲ್ಲಿ ಕೆಳಸ್ಥರದ ಸಿಬ್ಬಂದಿಯಾಗಿ ಸೇರಿ ತಮ್ಮ ಪ್ರತಿಭೆ ಮತ್ತು ಸಾಧನೆಯಿಂದ ಸಿ ಎ ಪದವಿ ಗಳಿಸಿ ಅದೇ ಕಂಪೆನಿಯಲ್ಲಿ ಪಾಲುದಾರರಾಗಿ ನೇಮಕಗೊಂಡ ಓರ್ವ ಅಪರೂಪದ ರಾತ್ರಿ ಶಾಲೆಯ ವಿದ್ಯಾರ್ಥಿ.

ಅನೇಕ ಸಂಘಟನೆಗಳಿಗೆ ಆರ್ಥಿಕ ಮಾರ್ಗದರ್ಶಕ ರಾಗಿದ್ದ ಅವರ ನಿಧನಕ್ಕೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಗಣೇಶ್ ಕಾಂಚನ್ ಹಾಗೂ ಸದಸ್ಯರು, ವಿವಿಧ ಸಂಘಟನೆಗಳ ಮುಖ್ಯಸ್ಥರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಪುತ್ರನ್ ಅವರು ಓರ್ವ ಪುತ್ರ ಹಾಗೂ ಈರ್ವರು ಪುತ್ರಿಯರನ್ನು ಹಾಗೂ ಬಂಧು ಬಾಂಧವರನ್ನು ಅಗಲಿದ್ದಾರೆ.



Related posts

ಉಡುಪಿ : ಅಕ್ಷತಾ ಪೂಜಾರಿ ಮೇಲೆ ಹಲ್ಲೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ – ಕೋಟ ಶ್ರೀನಿವಾಸ ಪೂಜಾರಿ

Mumbai News Desk

ಸಂಗೀತ ಲೋಕದ ಧ್ರುವತಾರೆ ಆಶಾ ಭೋಂಸ್ಲೆ ಇನ್ನಿಲ್ಲ: ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ

Mumbai News Desk

ಕೊಂಕಣ ರೈಲ್ವೆ ವಿಲೀನಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ: ಕರಾವಳಿ ಅಭಿವೃದ್ಧಿಗೆ ಲೋಕಸಭೆಯಲ್ಲಿ ಬಲವಾದ ಮಂಡನೆ

Mumbai News Desk

‘ಜಯಲಕ್ಷ್ಮೀ ಎಸ್ ಜೋಕಟ್ಟೆಯವರ ಕವಿತೆಗಳು’ ಕೃತಿ ಬಿಡುಗಡೆ

Mumbai News Desk

ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ಕೆ.ಪಿ. ಆಚಾರ್ಯ ನಿಧನ

Mumbai News Desk

ಮಂಗಳೂರಿನಲ್ಲಿ ಕುಲಾಲ ಭವನ ಲೋಕಾರ್ಪಣೆ: ಸಮಾಜ ಬಾಂಧವರ ಕನಸು ನನಸು

Mumbai News Desk