
ಡೊಂಬಿವಲಿ: ಇಲ್ಲಿನ ಪ್ರತಿಷ್ಠಿತ ಹೋಟೆಲ್ ಉದ್ಯಮಿ, ಯಕ್ಷಕಲಾ ಸಂಘಟಕ ಹಾಗೂ ಕಲಾಪ್ರೇಮಿ, ಡೊಂಬಿವಲಿಯ ಹೋಟೆಲ್ ಮಾತೋಶ್ರೀಯ ಮಾಲಕರಾದ ಶ್ರೀ ರತ್ನಾಕರ ಹೆಗ್ಡೆ ಯವರ ವ್ಯವಸ್ಥಾಪಕತ್ವ ಹಾಗೂ ಸಂಯೋಜನೆಯಲ್ಲಿ ನಾಳೆ ತಾ. 15-07-2026 ನೇ ಬುಧವಾರ ಸಂಜೆ 4 ಕ್ಕೆ ಡೊಂಬಿವಲಿ (ಪೂರ್ವ)ದ ಮಾತೋಶ್ರೀ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅದ್ದೂರಿ ಬಡಗು ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.

ನಡೂರು ಮಂದಾರ್ತಿ ಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ‘ಶ್ರೀ ಕಾಜಳ್ಳಿ ಕ್ಷೇತ್ರ ಮಹಾತ್ಮೆ’ ಎಂಬ ಪುಣ್ಯಕಥಾ ಪ್ರಸಂಗವು ಪ್ರದರ್ಶನಗೊಳ್ಳಲಿದೆ. ಇದೇ ಸುಸಂದರ್ಭದಲ್ಲಿ ಮಹಿಷಾಸುರ ಖ್ಯಾತಿಯ ಜನಪ್ರಿಯ ಯಕ್ಷಗಾನ ಕಲಾವಿದರಾದ ಶ್ರೀ ನಂದೀಶ್ ಕುಮಾರ್ ಜನ್ಸಾಲೆ ಇವರನ್ನು ಅತಿಥಿ ಗಣ್ಯರ ಹಸ್ತದಿಂದ ಸನ್ಮಾನಿಸಿ ಗೌರವಿಸಲಾಗುವುದು.

ಸನ್ಮಾನ ಸಭಾ ಕಾರ್ಯಕ್ರಮದ ಅತಿಥಿ ಗಣ್ಯರು:
ಶ್ರೀ ರತ್ನಾಕರ ಹೆಗ್ಡೆ (ಹೋಟೆಲ್ ಮಾತೋಶ್ರೀ, ಡೊಂಬಿವಲಿ)
ಶ್ರೀ ಸುಕುಮಾರ್ ಶೆಟ್ಟಿ (ಅಧ್ಯಕ್ಷರು, ಕರ್ನಾಟಕ ಸಂಘ, ಡೊಂಬಿವಲಿ)
ಶ್ರೀ ಅಜಿತ್ ಶೆಟ್ಟಿ (ಅಧ್ಯಕ್ಷರು, ಹೋಟೆಲ್ ಅಸೋಸಿಯೇಷನ್, ಡೊಂಬಿವಲಿ)
ಶ್ರೀ ಸುಬ್ಬಯ್ಯ ಶೆಟ್ಟಿ (ಹೋಟೆಲ್ ಉದ್ಯಮಿ, ಕಲ್ಯಾಣ್)
ಶ್ರೀ ಭಾಸ್ಕರ್ ಶೆಟ್ಟಿ (ಗುರುದೇವ್ ಹೋಟೆಲ್, ಕಲ್ಯಾಣ್)
ಶ್ರೀ ಆರ್ಡಿ ಉದಯ ಶೆಟ್ಟಿ (ಹೋಟೆಲ್ ಉದ್ಯಮಿ, ಉಲ್ಲಾಸನಗರ)
ಶ್ರೀ ದಿವಾಕರ ಶೆಟ್ಟಿ ಇಂದ್ರಾಳಿ (ಹೋಟೆಲ್ ಐಶ್ವರ್ಯ, ಡೊಂಬಿವಲಿ)
ಶ್ರೀ ಕಿಶೋರ್ ಶೆಟ್ಟಿ (ಹೋಟೆಲ್ ಪ್ರೆಸ್ಟೀಜ್, ಡೊಂಬಿವಲಿ)
ಶ್ರೀ ವಿಜಿತ್ ಶೆಟ್ಟಿ (ಹೋಟೆಲ್ ದ್ವಾರಕಾ, ಡೊಂಬಿವಲಿ)
ಶ್ರೀ ಕರುಣಾಕರ್ ಶೆಟ್ಟಿ (ಹೋಟೆಲ್ ಸುಯೋಗ್, ಡೊಂಬಿವಲಿ)
ಶ್ರೀ ಆನಂದ ಶೆಟ್ಟಿ (ಅಧ್ಯಕ್ಷರು, ಬಂಟರ ಸಂಘ, ಡೊಂಬಿವಲಿ)
ಶ್ರೀ ಸತೀಶ್ ಶೆಟ್ಟಿ (ಕೆ. ಎನ್. ಪಾರ್ಕ್, ಉದ್ಯಮಿ, ಕಲ್ಯಾಣ್)
ಶ್ರೀ ಪ್ರಭಾಕರ್ ಶೆಟ್ಟಿ (ಹೋಟೆಲ್ ಅಂಬಿಕಾ, ಡೊಂಬಿವಲಿ)
ಶ್ರೀ ತುಕಾರಾಂ ರೈ (ಹೋಟೆಲ್ ರೀಜೆನ್ಸಿ, ಡೊಂಬಿವಲಿ)
ಶ್ರೀ ಸದಾನಂದ ಶೆಟ್ಟಿ (ಅಧ್ಯಕ್ಷರು, ಅಯ್ಯಪ್ಪ ಮಂದಿರ, ಡೊಂಬಿವಲಿ)
ಶ್ರೀ ಸುಧೀರ್ ಶೆಟ್ಟಿ (ಹೋಟೆಲ್ ಉದ್ಯಮಿ, ಉಲ್ಲಾಸನಗರ)
ಶ್ರೀ ಸದಾನಂದ ಶೆಟ್ಟಿ (ಡಾಲ್ಫಿನ್ ಹೋಟೆಲ್, ಉಲ್ಲಾಸನಗರ)
ಶ್ರೀ ಮೋಹನ್ ಶೆಟ್ಟಿ (ಸಾಯಿದೀಪ್ ಲಾಡ್ಜಿಂಗ್, ಡೊಂಬಿವಲಿ)
ಶ್ರೀ ಸತೀಶ್ ಶೆಟ್ಟಿ (ಹೋಟೆಲ್ ಇಡೋ, ಡೊಂಬಿವಲಿ)
ಶ್ರೀ ರಾಜೀವ ಭಂಡಾರಿ (ಹೋಟೆಲ್ ಅನ್ನಪೂರ್ಣ, ಡೊಂಬಿವಲಿ)
ಶ್ರೀ ವೇಣುಗೋಪಾಲ್ ರೈ (ಹೋಟೆಲ್ ಉದ್ಯಮಿ, ಡೊಂಬಿವಲಿ)
ಶ್ರೀ ಅರುಣ್ ಶೆಟ್ಟಿ (ಹೋಟೆಲ್ ಕುಶಾಲ, ಡೊಂಬಿವಲಿ)
ಕಾರ್ಯಕ್ರಮದಲ್ಲಿ ನಾಡಿನ ಹಾಗೂ ಸ್ಥಳೀಯ ಉದ್ಯಮ ರಂಗದ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.

ವಿಶೇಷ ಸೂಚನೆ:
ಈ ಯಕ್ಷಗಾನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಹೋಟೆಲ್ ಮಾತೋಶ್ರೀ ಇದರ ಆಡಳಿತ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದ ವ್ಯವಸ್ಥಾಪಕರಾಗಿದ್ದು, ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ. ಯಕ್ಷಗಾನ ಪ್ರದರ್ಶನದ ಕೊನೆಯಲ್ಲಿ ಸರ್ವರಿಗೂ ಪ್ರೀತಿಯ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮಾಹಿತಿ: ಸೀತಾರಾಮ್ ಶೆಟ್ಟಿ ಆರೂರು.





