
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇದರ ಆಶ್ರಯದಲ್ಲಿ ಜುಲೈ 19, 2026ರ ಭಾನುವಾರದಂದು ಬೆಳಿಗ್ಗೆ 11.30 ಗಂಟೆಗೆ ಮಂಗಳೂರಿನ ಪದವು ಶಾಲೆಯ ಬಳಿ ಇರುವ ಸಿ.ಒ.ಡಿ.ಪಿ ಮದರ್ ತೆರೇಸಾ ಹಾಲ್ನಲ್ಲಿ ವಿಶೇಷವಾಗಿ ‘ಆಟಿಡೊಂಜಿ ದಿನ’ ಉದ್ಘಾಟನೆ ಹಾಗೂ ‘ಆಟಿಡ ಮದಿಪು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತದನಂತರ ಮಧ್ಯಾಹ್ನ 1.00 ಗಂಟೆಯಿಂದ ಸಾಂಪ್ರದಾಯಿಕ ಆಟಿದ ಕೂಟ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಗೂ ಗಣ್ಯ ಉಪಸ್ಥಿತರಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್, ಮಂಗಳೂರಿನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರಾದ ಕೆ. ಚಿತ್ತರಂಜನ್, ಮೂಡಾ ಮಾಜಿ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್, ಮತ್ತು ಅಲಂಗಾರ್ ಮರೋಳಿಯ ಜ್ವಾಲಾ ಮಹಾಮಾಯಿ ಕಾಲಭೈರವ ದೇವಸ್ಥಾನದ ಅಧ್ಯಕ್ಷರಾದ ಎಮ್. ಸತೀಶ್ ಅವರು ಭಾಗವಹಿಸಲಿದ್ದಾರೆ. ಮೂಲತ್ವ ಫೌಂಡೇಶನ್ನ ಪ್ರಕಾಶ್ ಮೂಲತ್ವ ಹಾಗೂ ಸರ್ವ ಸದಸ್ಯರು ಈ ಆಟಿ ಸಂಭ್ರಮದ ಕಾರ್ಯಕ್ರಮಕ್ಕೆ ಸರ್ವರನ್ನೂ ಪ್ರೀತಿಯಿಂದ ಸ್ವಾಗತಿಸಿದ್ದಾರೆ.





