October 12, 2026
Mumbai News Kannada
ಪ್ರಕಟಣೆ

ಮುಂಬಯಿಯಲ್ಲಿ ಆಗಸ್ಟ್ 26ರಂದು ‘ಕಲಾ ಸೌರಭ’ ಸಂಸ್ಥೆಯಿಂದ ‘ಸ್ವರ ಸಂಗೀತ ಗಾನಾಮೃತ – ನುಡಿ ನಮನ’ ಕಾರ್ಯಕ್ರಮ



ಹೊರನಾಡ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಹಾಗೂ ಮುಂಬೈ ನಗರಿಯ ಪ್ರತಿಷ್ಠಿತ ಕಲಾ ಸಂಸ್ಥೆಯಾದ ‘ಕಲಾ ಸೌರಭ’ ತನ್ನ 34ನೇ ವರ್ಷದ ಸರಣಿ ಕಾರ್ಯಕ್ರಮ “ಸಂಸ್ಕಾರ 2026” ರ 5ನೇ ವಿಶಿಷ್ಟ ಆವೃತ್ತಿಯನ್ನು ಆಯೋಜಿಸಿದೆ. ಈಗಾಗಲೇ ಮುಂಬೈ ಹಾಗೂ ಮಂಗಳೂರಿನಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಜನಮನ್ನಣೆ ಗಳಿಸಿರುವ ಎನ್ ಸಂಸ್ಥೆಯು, ಶಿರ್ಡಿಯ ಶ್ರೀ ಸಾಯಿಬಾಬಾ ಸಂಸ್ಥಾನಮ್ ಆಶ್ರಯದಲ್ಲಿ ರಾಮನವಮಿಯ ಶುಭ ದಿನದಂದು ಚಾಲನೆಗೊಂಡ ಈ ಸರಣಿಯ ಮುಂದಿನ ಭಾಗವಾಗಿ “ಸ್ವರ ಸಂಗೀತ ಗಾನಾಮೃತ – ನುಡಿ ನಮನ” ಸಾಂಸ್ಕೃತಿಕ ಪಯಣವನ್ನು ಹಮ್ಮಿಕೊಂಡಿದೆ.

ಈ ಅರ್ಥಪೂರ್ಣ ಕಾರ್ಯಕ್ರಮವು ಭಗವಂತನ ಪಾದಕಮಲಗಳಲ್ಲಿ ಐಕ್ಯರಾದ ಗಾನಲೋಕದ ಧ್ರುವತಾರೆಗಳಾದ ದಿ| ಎಸ್. ಜಾನಕಿ, ದಿ| ಎಸ್. ಪಿ. ಬಾಲಸುಬ್ರಹ್ಮಣ್ಯಮ್ ಹಾಗೂ ದಿ| ವಾಣಿ ಜಯರಾಮ್ ಅವರ ಸ್ಮರಣಾರ್ಥವಾಗಿ ನಡೆಯಲಿದೆ. ಕಲಾ ಸೌರಭ ತಂಡದ ರೂವಾರಿ, ಸಂಘಟಕ ಹಾಗೂ ಸಂಗೀತ ನಿರ್ದೇಶಕರಾದ ಪದ್ಮನಾಭ ಸಸಿಹಿತ್ಲು ಅವರ ವಿಶಿಷ್ಟ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮವು ಬರುವ ಬುಧವಾರ, 26/08/2026 ರಂದು ಅಪರಾಹ್ನ 3:00 ಗಂಟೆಗೆ ಮುಂಬೈನ ಸಾಂತಾಕ್ರೂಸ್ (ಪೂರ್ವ) ನ ಬಿಲ್ಲವ ಭವನದ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಜರುಗಲಿದೆ.

ಮುಂಬೈ, ಬೆಂಗಳೂರು ಮತ್ತು ಮಂಗಳೂರು ನಗರಗಳ ಸರಿಸುಮಾರು 50 ರಿಂದ 70 ರಷ್ಟು ಸುಪ್ರಸಿದ್ಧ ಗಾಯನ ಹಾಗೂ ನರ್ತನ ಕಲಾವಿದರು ಈ ಸಮಾರಂಭದಲ್ಲಿ ಭಾಗವಹಿಸಿ, ವೈವಿಧ್ಯಮಯ ಸಂಗೀತ-ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಜೊತೆಗೆ ವಿವಿಧ ಕನ್ನಡ ಮತ್ತು ತುಳು ಸಂಘ ಸಂಸ್ಥೆಗಳ ವೃಂದ ಗಾಯನದ ಮೂಲಕ ಈ ಅಮರ ಗಾಯಕರಿಗೆ ಭಾವಪೂರ್ಣ ನುಡಿನಮನ ಹಾಗೂ ಪುಷ್ಪಾರ್ಪಣೆ ಸಲ್ಲಿಕೆಯಾಗಲಿದೆ.

ಸಂಪೂರ್ಣ ಶಿಸ್ತುಬದ್ಧ ಹಾಗೂ ಸಂಗೀತಮಯವಾಗಿ ಜರುಗಲಿರುವ ಈ ಸಮಾರಂಭದಲ್ಲಿ ಪ್ರಾರ್ಥನೆ, ಉದ್ಘಾಟನೆ, ದೀಪಾರ್ಪಣೆ, ಪುಷ್ಪಾರ್ಪಣೆ, ನುಡಿ ನಮನ, ಸಂಸ್ಮರಣಾ ಗಾನಾರ್ಪಣೆ ಹಾಗೂ ಗೌರವ ವಂದನಾರ್ಪಣೆಗಳಂತಹ ಸಾಂಸ್ಕೃತಿಕ ಚಟುವಟಿಕೆಗಳು ನೆರವೇರಲಿವೆ. ಕಲಾ ಪೋಷಕರು ಹಾಗೂ ಸಾಧಕರು ಈ ಐತಿಹಾಸಿಕ ವೇದಿಕೆಯಲ್ಲಿ ಮುಖ್ಯ ಗೌರವಾನ್ವಿತರಾಗಿ ಉಪಸ್ಥಿತರಿದ್ದು, ತನು-ಮನ-ಧನದ ಸಹಕಾರ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.



Related posts

ಫೆ. 9. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮೀರಾ – ಭಾಯಂದರ್ ಶಾಖೆಯ ವಾರ್ಷಿಕೋತ್ಸವ

Mumbai News Desk

ಶ್ರೀ ಮಕ್ಕೆಕಟ್ಟು ಮೇಳ ಮತ್ತು ಶ್ರೀ ಹಟ್ಟಿಯಂಗಡಿ ಮೇಳದ ಪ್ರಮುಖ ಕಲಾವಿದರು ತಂಡ, ಜುಲೈ 9 ರಿಂದ 20 ರವರೆಗೆ  ಮಹಾನಗರದ ವಿವಿಧ ಉಪ ನಗರಗಳಲ್ಲಿ    ವೈಶಿಷ್ಟ್ಯ ಪೂರ್ಣವಾದ ಯಕ್ಷಗಾನ ಪ್ರದರ್ಶನ

Mumbai News Desk

ನಾಳೆ (ಮೇ. 29) ಮೂಡಬಿದ್ರೆ ಪುತ್ತಿಗೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪ್ರಥಮ ಪ್ರತಿಷ್ಠಾ ವರ್ಧಂತಿ ಉತ್ಸವ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ :ಫೆಬ್ರವರಿ 18 ರಂದು ಡೊಂಬಿವಲಿ ಸ್ಥಳೀಯ ಸಮಿತಿವತಿಯಿಂದ ಮಹಿಳಾ ಸದಸ್ಯರಿಗಾಗಿ ಹೂವಿನ ರಂಗೋಲಿ ಸ್ಪರ್ಧೆ :

Mumbai News Desk

ಮಾ.7: ಸಸಿಹಿತ್ಲು ಭಗವತಿಗೆ ಕಲಾಸೌರಭದ ಸ್ವರ ಸಂಗೀತಾಭಿಷೇಕಂ

Mumbai News Desk

ಮಲಾಡ್  ಪೂರ್ವ   ಶ್ರೀ ಮೂಕಾಂಬಿಕ ಮಂದಿರ : ಜೂ 9 ರಂದು   ಪ್ರತಿಷ್ಠಾ ಮಹೋತ್ಸವ.

Mumbai News Desk