ಪರಮಪೂಜ್ಯ ಶ್ರೀ ಶ್ರೀ ಶ್ರೀ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮಿಜಿ ಯವರ ಶಿಷ್ಯ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ರ ದಿವ್ಯ ಉಪಸ್ಥಿತಿ ಹಾಗೂ ಅವರ ಅಮೃತಹಸ್ತದಿಂದ 1ನೆಯ ಫೆಬ್ರವರಿ 2026 ರಂದು ಉದ್ಘಾಟನೆಗೊಂಡು ಪೂಜ್ಯ ಶ್ರೀ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ
ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ , ವಿದ್ಯಾವಿಹಾರ್ ಇದರ ಆಡಳಿತ ಮೊಕ್ತೇಸರ
ಶ್ರೀ ಹರಿದಾಸ ಗೋಪಾಲ ಶೆಟ್ಟಿ
ಇವರ ಸಂಪೂರ್ಣ ಸಹಕಾರದೊಂದಿಗೆ
ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ
ಪ್ರಭು ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮ ಚರಿತ್ರೆ ಶ್ರೀ ರಾಮ ಕಥಾ ಹೃದಯಂ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ ಹದಿಮೂರನೆಯ ಪ್ರಸ್ತುತಿ ‘ಸೇತು ಬಂಧ ಅಂಗದ ಸಂಧಾನ’ ಎಂಬ ತಾಳಮದ್ದಲೆ ಪ್ರಸಂಗವು ದಿನಾಂಕ 23-08-2026 ರ ಭಾನುವಾರದಂದು 2:15ಕ್ಕೆ ಸರಿಯಾಗಿ
ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ, ಗಾಂವ್ದೇವಿ ವಿದ್ಯಾವಿಹಾರ್ (ಪಶ್ಚಿಮ)ಇಲ್ಲಿ ಜರುಗಲಿರುವುದು.
ಈ ಕಾರ್ಯಕ್ರಮದ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಲಿಮ್ಕಾ ಬುಕ್ ದಾಖಲೆ ನಿರ್ಮಿತ ರಂಗಕರ್ಮಿ ವಿಜಯಕುಮಾರ ಶೆಟ್ಟಿ ತೋನ್ಸೆ, ಮತ್ತು ಕನ್ನಡ ಸಂಘ ,
ವರ್ತಕ ನಗರ, ಥಾಣೆ – ಇದರ ಮಾಜಿ ಅಧ್ಯಕ್ಷರೂ , ಥಾಣೆ ಬಂಟ್ಸ್ ಇದರ ವಲಯ ಕಾರ್ಯಾಧ್ಯಕ್ಷರೂ ಆಗಿರುವ ಜಯಂತ್ ಶೆಟ್ಟಿ ಇವರು ಆಗಮಿಸಲಿರುವರು.
ಆ ದಿನ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಇವರ ಆಶಯದಂತೆ ಮುಂಬೈ ಮಹಾನಗರದ ಹಿರಿಯ ಯಕ್ಷಗಾನ ಕಲಾವಿದರುಗಳಾದ ರವೀಂದ್ರ ಪೈ (ಕಲಾವಿದರು), ನಿತ್ಯಪ್ರಕಾಶ ಶೆಟ್ಟಿ (ಹಿಮ್ಮೇಳವಾದಕರು), ಸಂತೋಷ ಕುಮಾರ್ ದೇವಾಡಿಗ (ಪ್ರಸಿದ್ಧ ಸ್ತ್ರೀ ಪಾತ್ರಧಾರಿ) , ಹರೀಶ ಶೆಟ್ಟಿ ಕಟೀಲು (ಭಾಗವತರು),
ಜಯರಾಮ ನಾಯಕ್ (ಕಲಾವಿದರು), ಗಂಗಾಧರ ಸುವರ್ಣ (ಭಾಗವತರು), ರಾಘು ಪೂಜಾರಿ, (ಕಲಾವಿದರು), ನಾಗೇಶ್ ಕುಮಾರ್ ಪೊಳಲಿ (ಯಕ್ಷಪ್ರಿಯ ಬಳಗ),
ಯಶವಂತ ಪೂಜಾರಿ, (ಕಲಾವಿದರು), ಪ್ರಕಾಶ ಪೂಜಾರಿ (ನೇಪಥ್ಯ ಕಲಾವಿದರು)
ಇವರನ್ನು ಸಪತ್ನೀಕರಾಗಿ ಗೌರವಿಸಲಾಗುವುದು.
ಜೈ ಗುರುದೇವ ಮಕ್ಕಳ ಭಜನಾ ತಂಡ ನವಿ ಮುಂಬೈ ಇವರಿಂದ ಶ್ರೀ. ರಾಮ ಸಂಕೀರ್ತನೆ ನಡೆಯಲಿದೆ
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಗೌರವದ ಉಪಸ್ಥಿತಿಯೊಂದಿಗೆ ಸಹಕರಿಸಬೇಕಾಗಿ ವಾಸು ಮಾರ್ನಾಡ್ , ಸುರೇಶ್ ನಂದ್ರೊಳ್ಳಿ ವಿನಂತಿಸಿದ್ದಾರೆ.




