28 C
Mumbai
September 27, 2026
Mumbai News Kannada
ಕರ್ನಾಟಕ

ಮೊಟ್ಟ ಮೊದಲ ಬಾರಿಗೆ ಶ್ರೀ ರಾಘವೇಂದ್ರ ಮಹಿಮೆ ಯಕ್ಷಗಾನ ರೂಪಕದಲ್ಲಿ



10ಲಕ್ಷ ಹಣ ಪಾಪದಿಂದ ಗಳಿಸಿ, 1ಲಕ್ಷ ದಾನ ಮಾಡಿದರೆ ಪುಣ್ಯ ಬರವುದಿಲ್ಲ, ದೇವರೆ ಎಲ್ಲರಿಗೂ ಗಾಡ್ ಫಾದರ್-ನ್ಯಾಯಮೂರ್ತಿ ಶ್ರೀಶಾನಂದ

ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಸ್ಪಂದನಾ ಸೇವಾ ಸಮಿತಿ ವತಿಯಿಂದ ನಂದ್ರೊಳ್ಳಿ ಸೀತಾರಾಮಶೆಟ್ಟಿ ವಿರಚಿತ ಶ್ರೀ ರಾಘವೇಂದ್ರ ಮಹಿಮೆ ಯಕ್ಷಗಾನ ಕಾರ್ಯಕ್ರಮ.

ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀಶಾನಂದರವರು, ನ್ಯಾಯಮೂರ್ತಿಗಳಾದ ರಾಜೇಶ್ ರೈರವರು, ಮಂತ್ರಾಲಯ ಮಠ ಪ್ರತಿನಿಧಿ ಎಸ್.ಎನ್.ವೆಂಕಟೇಶಾಚಾರ್ಯ, ಶಾಸಕರುಗಳಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್,ಉದ್ಯಮಿ ರಾಜೇಶ್ ಶೆಟ್ಟಿ, ಹೋಟೆಲ್ ಮತ್ತು ಬೇಕರಿ, ಕಾಂಡಿಮೆಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರತಾಪ್ ಶೆಟ್ಟಿ, ಪ್ರಭು, ಕರುಣಕರ್ ಶೆಟ್ಟಿ ಸ್ಪಂದನಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ ಪೈ ರವರು ದೀಪ ಬೆಳಗಿಸಿ ಉದ್ಘಾಟಸಿ, ಯಕ್ಷಗಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನ್ಯಾಯಮೂರ್ತಿ ಶ್ರೀಶಾನಂದರವರು ಮಾತನಾಡಿ
ಅಂದಿನ ಕಾಲದಲ್ಲಿ ಭಾಗವತರ ಕಥೆಯಲ್ಲಿ ರೋಗ ವಾಸಿ ಮಾಡುವ ತಂತ್ರಗಳು ಇರುತ್ತಿತು.
ಒಳ್ಳೆಯವರನ್ನ ರಕ್ಷಣೆಬೇಕಾದದ್ದು ದೇವರ ಕೆಲಸ, ಭಕ್ತರ ಮಾತನ್ನ ಸುಳ್ಳು ಮಾಡಬಾರದು ಎಂಬ ನಂಬಿಕೆ. ಪ್ರಹ್ಲಾದ ಮಾತು ಮೀರಬಾರದು ಎಂದು ಹಿರಣ್ಯಕಶಿಪು ಸಂಹಾರ ಮಾಡಿದರು ನರಸಿಂಹ ದೇವರು.
ಎಷ್ಟೆ ಕಷ್ಟ ಬಂದರು ನರಸಿಂಹ ದೇವರ ಮೊರೆ ಹೋಗಬೇಕು. ಪುಣ್ಯ ಮತ್ತು ಪಾಪಗಳು ಬೇರೆ. 10ಲಕ್ಷ ಹಣ ಪಾಪದಿಂದ ಗಳಿಸಿ, 1 ಲಕ್ಷ ದಾನ ಮಾಡಿದರೆ ಪುಣ್ಯ ಬರುವುದಿಲ್ಲ.

ವ್ಯಾಸರಾಯರು , ವ್ಯಾಸರಾಜರಾಗಿ ಮುಂದಿನ ಅವತಾರದಲ್ಲಿ ಶ್ರೀ ಗುರುರಾಘವೇಂದ್ರರಾಗಿ ಜನಿಸುತ್ತಾರೆ. ಮಂಚಾಲೆ ಅಂತಹ ಕಾಡಿನಲ್ಲಿ ಇದ್ದರು ಭಕ್ತರು ಬಿಡಲ್ಲಿಲ, ಮುಸ್ಲಿಂರು ಸಹ ನಂಬುತ್ತಾರೆ ರಾಯರನ್ನ, ಥಾಮಸ್ ಮೆನ್ರೂರವರು ಅಪಾರ ಭಕ್ತರಾಗಿದ್ದರು.

ಸಕಲ ಸಂಕಷ್ಟಗಳ ನಿವಾರಣೆ ಮಾಡಲು ಗುರುಗಳಾದ ರಾಯರಿದ್ದಾರೆ. ಏಕಾದಶಿ ದಿನ ಮಾಡುವ ಒಳ್ಳೆಯ ಕೆಲಸಕ್ಕೆ ಪುಣ್ಯಪ್ತಾಪ್ತಿಯಾಗುತ್ತದೆ. ಯಾರಿಗೆ ಗಾಡ್ ಫಾದರ್ ಇಲ್ಲ ಬೇಸರ ಮಾಡಿಕೊಳ್ಳಬಾರದು, ಗಾಡ್ ನಮ್ಮ ಫಾದರ್.

ರಾಘವೇಂದ್ರ ಮಹಿಮೆ ಯಕ್ಷಗಾನದಲ್ಲಿ ಮುಂದಿನ ದಿನಗಳಲ್ಲಿ ನ್ಯಾಯಮೂರ್ತಿ ರಾಜೇಶ್ ರೈ ರವರು ವೇಷ ಹಾಕಲಿದ್ದಾರೆ.

ಡಾ.ಸಿ.ಎನ್.ಅಶ್ವಥ್ ನಾರಾಯಣ್ ರವರು ಮಾತನಾಡಿ ಗುರುರಾಘವೇಂದ್ರ ಮಹಿಮೆ ಯಕ್ಷಗಾನ ಸ್ಪರೂಪದಲ್ಲಿ ನೋಡುವಂತಾಗಿದೆ. ಎಲ್ಲರ ಶ್ರಮದಿಂದ ಮಾತ್ರ ಯಕ್ಷಗಾನದ ಮೂಲಕ ರಾಯರ ದರ್ಶನವಾಗುತ್ತಿದೆ. ಸಜ್ಜನರು ಹೆಚ್ಚಾಗಲಿ, ದುಜ್ಜನರು ನಾಶವಾಗಲಿ ಎಂದು ಹೇಳಿದರು.

ಸಾಮಾಜಿಕ ಸೇವಾ ಸ್ಪಂದನಾ ಪ್ರಶಸ್ತಿ
1)ಗೋವಿಂದ ಬಾಬು ಪೂಜಾರಿ, ಚೆಫ್ ಟಾಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು.
2) ಕೆ.ವೆಂಕಟೇಶ್, ಪೊಲೀಸ್ ಇನ್ಸ್ ಪೆಕ್ಟರ್.
ಯಕ್ಷಕಲಾ ಸೇವಾ ಸ್ಪಂದನಾ ಪ್ರಶಸ್ತಿ
1)ವಿಜಯ ಗಾಣಿಗ ಜೀಜಮಕ್ಕಿ, ಯಕ್ಷಗಾನ ಸ್ತ್ರೀ ವೇಷಧಾರಿಗಳು.
2) ಶ್ರೀಮತಿ ಅರ್ಪಿತಾ ಹೊಳ್ಳ, ಯಕ್ಷಗಾನ ಸೇವೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಚಿತ್ರ, ವರದಿ: ನಾರಾಯಣ್, ಬೆಂಗಳೂರು



Related posts

ಸಚಿವ ಡಿ. ಸುಧಾಕರ್ ನಿಧನ: ಹಿರಿಯೂರು ಶಾಸಕ ಹಾಗೂ ರಾಜ್ಯದ ಯೋಜನೆ ಮತ್ತು ಸಾಂಖಿಕ ಸಚಿವ ಇನ್ನಿಲ್ಲ

Mumbai News Desk

ಕರ್ನಾಟಕ : ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆ – ಹುಬ್ಬಳ್ಳಿ ಗಲಭೆ ಸೇರಿ 43 ಕೇಸ್ ವಾಪಸ್ ಆದೇಶ ರದ್ದುಗೊಳಿಸಿದ ಹೈಕೋರ್ಟ್

Mumbai News Desk

ಕರ್ನಾಟಕ : ಏಪ್ರಿಲ್ 9 ರಂದು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ

Mumbai News Desk

ಉಡುಪಿ: ಡೇವಿಡ್‌ ಡಿಸೋಜಾ ಕೊಲೆ ಪ್ರಕರಣದ ಶೂಟರ್‌ ಕಾಲಿಗೆ ಪೊಲೀಸ್‌ ಗುಂಡೇಟು, ಇಬ್ಬರು ಆರೋಪಿಗಳು ಪರಾರಿ

Mumbai News Desk

ತುಳುವಿಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಿ: ಸಿಎಂಗೆ ಸುನಿಲ್ ಕುಮಾರ್ ಮನವಿ

Mumbai News Desk

ಧರ್ಮಸ್ಥಳ ಬುರುಡೆ ಕೇಸ್ನಲ್ಲಿ ಮೇಜರ್ ಟ್ವಿಸ್ಟ್, ಮಾಸ್ಕ್ ಮ್ಯಾನ್ ಅರೆಸ್ಟ್.

Mumbai News Desk