
ಮಂಗಳೂರು: ಬೊಕ್ಕಪಟ್ಣ ಬೋಳೂರಿನ ಶ್ರೀ ರಾಮಾಂಜನೇಯ ತಾಲೀಮು ಮತ್ತು ವ್ಯಾಯಾಮ ಶಾಲೆಯ ಸ್ಥಾಪಕ, ಶಿಕ್ಷಕ ಮಾಸ್ಟರ್ ಬಿ. ಸೀತಾರಾಮ್ ಕುಲಾಲ್ ಅವರ ಧರ್ಮಪತ್ನಿ ಸುಂದರಿ ಎಸ್. ಕುಲಾಲ್ (71) ಅವರು ಅ. 7ರಂದು ಬಿಕರ್ಣಕಟ್ಟೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರು ಪತಿ, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಸುಂದರಿ ಎಸ್. ಕುಲಾಲ್ ಅವರ ನಿಧನಕ್ಕೆ ಶ್ರೀ ರಾಮಾಂಜನೇಯ ತಾಲೀಮು ಮತ್ತು ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಬಿ. ಪ್ರೇಮಾನಂದ ಕುಲಾಲ್, ಕಾರ್ಯದರ್ಶಿ ಬಿ. ನಾಗೇಶ್ ಕುಲಾಲ್ ಹಾಗೂ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಹಾಗೂ ಪದಾಧಿಕಾರಿಗಳು ಮತ್ತು ಶಕ್ತಿನಗರದ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಸುಂದರ್ ಕುಲಾಲ್ ಹಾಗೂ ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.



