October 23, 2026
Mumbai News Kannada
ಮುಂಬಯಿ

ಪೊಲಿಪು ಶಾಲಾ ಹಳೆ ವಿದ್ಯಾರ್ಥಿ ಸಂಘ ಮುಂಬೈ ಶಾಖೆಯ ವಾರ್ಷಿಕ ಮಹಾಸಭೆ



ಪೊಲಿಪು ಶಾಲಾ ಹಳೆ ವಿದ್ಯಾರ್ಥಿ ಸಂಘ ಮುಂಬೈ ಶಾಖೆಯ 72ನೇ ವಾರ್ಷಿಕ ಮಹಾಸಭೆಯು 11.10.2026ರಂದು ನೀಲಾಧರ ಎಸ್. ಕುಂದರ್ ಅವರ ಅಧ್ಯಕ್ಷತೆಯಲ್ಲಿ ಅಂಧೇರಿ ಪಶ್ಚಿಮ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮೊಗವೀರ ಭವನದಲ್ಲಿ ಜರಗಿತು.

ಅಧ್ಯಕ್ಷರು ಉಪಸ್ಥಿತರಿದ್ದ ಸದಸ್ಯರನ್ನು ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಎಲ್ಲಾ ಹಳೆ ವಿದ್ಯಾರ್ಥಿ ಸದಸ್ಯರಿಗೆ ಆಯುರಾರೋಗ್ಯ, ಸುಖ-ಸಂಪತ್ತು ನೀಡಿ ಕಾಪಾಡಲೆಂದು ಶ್ರೀ ಲಕ್ಷ್ಮೀನಾರಾಯಣ ದೇವರಲ್ಲಿ ಪ್ರಾರ್ಥಿಸಲಾಯಿತು. ಪ್ರಧಾನ ಕಾರ್ಯದರ್ಶಿ ನಿತಿನ್ ಪಿ. ಕೋಟ್ಯಾನ್ 71ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿ ಮತ್ತು ವಾರ್ಷಿಕ ವರದಿಯನ್ನು ವಾಚಿಸಿದರು. ಪ್ರಧಾನ ಕೋಶಾಧಿಕಾರಿ ನರೇಶ್ ಕೆ. ಸುವರ್ಣ 31.03.2026ರಂದು ಅಂತ್ಯಗೊಂಡ ವಾರ್ಷಿಕ ಆಯವ್ಯಯ ಹಾಗೂ ಆಸ್ತಿ-ಪಾಸ್ತಿಗಳ ವಿವರವನ್ನು ಸಭೆಯ ಮುಂದಿಟ್ಟರು.

ಪ್ರತಿ ವರ್ಷದಂತೆ ಶಾಲಾ ಮಕ್ಕಳಿಗೆ ನೀಡಲಾಗುವ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ಪುಸ್ತಕ ವಿತರಣೆಯ ಮೊತ್ತವನ್ನು ಪ್ರಧಾನ ಸಭೆಗೆ ಕಳುಹಿಸಿಕೊಡಬೇಕೆಂದು ನಿರ್ಧರಿಸಲಾಯಿತು. ಪೊಲಿಪು ಶಾಲೆ ಹಳೆ ವಿದ್ಯಾರ್ಥಿ ಸಂಘ (ಪೊಲಿಪು) ಹಾಗೂ ಮುಂಬೈ ಶಾಖೆಯ ಅಮೃತ ಮಹೋತ್ಸವ ಸಮಾರಂಭವನ್ನು 2028ರ ಜನವರಿ ತಿಂಗಳಲ್ಲಿ ಜಂಟಿಯಾಗಿ ಆಚರಿಸುವ ಬಗ್ಗೆ ಪ್ರಧಾನ ಸಭೆಗೆ ತಿಳಿಸಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಪೊಲಿಪು ಶಾಲಾ ಶತ, ವಜ್ರ, ಸ್ವರ್ಣ ಸಂಭ್ರಮ ಸಮಿತಿಯ ಮುಂಬೈ ಶಾಖೆಯ ಅಧ್ಯಕ್ಷರಾದ ಸುರೇಂದ್ರ ಎನ್. ಸುವರ್ಣ ಅವರು, ಪ್ರಧಾನ ಸಭೆಯಿಂದ ಬಂದ 31.03.2026ರಂದು ಅಂತ್ಯಗೊಂಡ ಆಯವ್ಯಯ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿದರು. ಅಲ್ಲದೆ, ಪ್ರಾಥಮಿಕ ಶಾಲೆಯಿಂದ ಜೂನಿಯರ್ ಕಾಲೇಜಿನವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ, ವಾರ್ಷಿಕ ಪರೀಕ್ಷೆಯ ಫಲಿತಾಂಶ ಹಾಗೂ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸಮಿತಿ ಶ್ರಮಿಸುತ್ತಿರುವ ಕುರಿತು ಸಮಗ್ರ ವಿವರ ನೀಡಿದರು.

ಇದೇ ಸಂದರ್ಭದಲ್ಲಿ, ಪೊಲಿಪು ಶಾಲಾ ಹಳೆ ವಿದ್ಯಾರ್ಥಿ ಸಂಘ ಮುಂಬೈ ಶಾಖೆಯ ಜೊತೆ ಕಾರ್ಯದರ್ಶಿ ದಯಾವತಿ ಎಂ. ಸುವರ್ಣ ಅವರು 2025ರಲ್ಲಿ ಜರಗಿದ ಮೊಗವೀರ ವ್ಯವಸ್ಥಾಪಕ ಮಂಡಳಿಯ ನೂತನ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿ, ಮೂರು ವರ್ಷಗಳ ಅವಧಿಗೆ ಮಂಡಳಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಅಧ್ಯಕ್ಷರು ಸಭೆಯ ಗಮನಕ್ಕೆ ತಂದು, ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

2026–27 ಮತ್ತು 2027–28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ:

  • ಅಧ್ಯಕ್ಷರು: ನೀಲಾಧರ ಎಸ್. ಕುಂದರ್
  • ಉಪಾಧ್ಯಕ್ಷರು: ದಿವಾಕರ್ ಜಿ. ಶೆಟ್ಟಿ
  • ಪ್ರಧಾನ ಕಾರ್ಯದರ್ಶಿ: ನಿತಿನ್ ಪಿ. ಕೋಟ್ಯಾನ್
  • ಜೊತೆ ಕಾರ್ಯದರ್ಶಿ: ದಯಾವತಿ ಎಂ. ಸುವರ್ಣ
  • ಪ್ರಧಾನ ಕೋಶಾಧಿಕಾರಿ: ನರೇಶ್ ಕೆ. ಸುವರ್ಣ
  • ಜೊತೆ ಕೋಶಾಧಿಕಾರಿ: ಜಗನ್ನಾಥ್ ಕೆ. ಕುಂದರ್
  • ಕಾರ್ಯಕಾರಿ ಸಮಿತಿ ಸದಸ್ಯರು: ಹರಿಣಾಕ್ಷಿ ಎನ್. ಕುಂದರ್, ದಾಮೋದರ್ ಎಸ್. ಕಾಂಚನ್, ರಮೇಶ್ ಕೆ. ಅಮೀನ್
  • ಪಾರುಪತ್ಯಗಾರರು: ದೇಜಪ್ಪ ಕೆ. ಕಾಂಚನ್, ಸುರೇಂದ್ರ ಎನ್. ಸುವರ್ಣ, ವಿಜಯ ಟಿ. ಸುವರ್ಣ
  • ಲೆಕ್ಕಪರಿಶೋಧಕರು: ಸುಧಾಕರ್ ಕೆ. ಸುವರ್ಣ, ಮೋಹನ್ ಜಿ. ಪುತ್ರನ್

ಸಭೆಯಲ್ಲಿ ಉಪಸ್ಥಿತರಿದ್ದ ತುಕಾರಾಂ ಜೆ. ಮೆಂಡನ್, ದೇಜಪ್ಪ ಕೆ. ಕಾಂಚನ್, ಸುರೇಂದ್ರ ಎನ್. ಸುವರ್ಣ, ಉಮೇಶ್ ಕೆ. ಮೆಂಡನ್, ವಿಜಯ ಟಿ. ಸುವರ್ಣ, ದಿನೇಶ್ ಕೆ. ಮೆಂಡನ್ ಹಾಗೂ ಶ್ರೀಧರ್ ಎನ್. ಕರ್ಕೇರ ಅವರು ಹಳೆ ವಿದ್ಯಾರ್ಥಿ ಸಂಘ ಹಾಗೂ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.

ಅಧ್ಯಕ್ಷೀಯ ಭಾಷಣದಲ್ಲಿ ನೀಲಾಧರ ಎಸ್. ಕುಂದರ್ ಮಾತನಾಡಿ, “ನಮ್ಮ ಸಂಘ ಹಾಗೂ ಪೊಲಿಪು ಶಾಲೆಯ ಪ್ರಗತಿಗಾಗಿ ಹಳೆ ವಿದ್ಯಾರ್ಥಿಗಳಾದ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು” ಎಂದು ಕರೆ ನೀಡಿದರು.

ಪ್ರಧಾನ ಕಾರ್ಯದರ್ಶಿ ನಿತಿನ್ ಪಿ. ಕೋಟ್ಯಾನ್ ಧನ್ಯವಾದ ಸಮರ್ಪಿಸಿದರು. ಬಳಿಕ ಸಭೆಯು ಮುಕ್ತಾಯಗೊಂಡಿತು.



Related posts

ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ: ದತ್ತು ಸ್ವೀಕಾರ ಮತ್ತು ದೀಪಾವಳಿ ಆಚರಣೆ

Mumbai News Desk

ಮುಂಬಯಿ ಸ್ವರ್ಣೋದ್ಯಮಿ ಶ್ರೀಧರ ವಿ. ಆಚಾರ್ಯ ಅವರಿಗೆ ‘ಬಿ. ಹರಿಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿ’ ಪ್ರದಾನ

Mumbai News Desk

ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನ ಸುವರ್ಣ ಮಹೋತ್ಸವ ನಿಮಿತ್ತ ಪೂರ್ವಬಾವಿ ಸಭೆ

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾ ಭಾಯಂದರ್ 16ನೇ ವಾರ್ಷಿಕ ಪಾದಯಾತ್ರೆ.

Mumbai News Desk

ಎಸ್.ಎಸ್.ಸಿ ಪರೀಕ್ಷೆಯಲ್ಲಿ ಸಾನ್ವಿ ಸುರೇಶ್ ಪೂಜಾರಿಗೆ ಶೇ.91.60 ಅಂಕ.

Mumbai News Desk

ಕಲಾ ಜಗತ್ತು ಮುಂಬಯಿ ಮತ್ತು ಡಾ. ಸದಾನಂದ ಶೆಟ್ಟಿ ಅಭಿನಂದನಾ ಬಳಗ ಇವರ ಸಹಯೋಗದಲ್ಲಿ ಡಾ. ಸದಾನಂದ ಶೆಟ್ಟಿ ಯವರಿಗೆ ಹೃದಯಸ್ಪರ್ಶಿ ಅಭಿನಂದನಾ ಸಮಾರಂಭ.

Mumbai News Desk