
ಮುಂಬಯಿಯ ಅಂಧೇರಿ ಪಶ್ಚಿಮದಲ್ಲಿರುವ ಎಂ.ವಿ.ಎಂ. ಶೈಕ್ಷಣಿಕ ಸಂಕೀರ್ಣ ರಸ್ತೆಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ ಸಂಚಾಲಕರಾದ ಶ್ರೀಮದ್ಭಾರತ ಮಂಡಳಿ (ರಿ), ಮುಂಬಯಿ ಇದರ ವತಿಯಿಂದ 148ನೇ ವರ್ಷದ ‘ವಾರ್ಷಿಕ ಮಂಗಳೋತ್ಸವ’, ‘ಕುಮಾರವ್ಯಾಸ ಭಾರತ’ ಪುಣ್ಯಗ್ರಂಥ ಪಾರಾಯಣದ ಸಮಾಪ್ತಿ ಮಂಗಳೋತ್ಸವ ಹಾಗೂ 24ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವವು
ಫೆಬ್ರವರಿ 21ರ ಶನಿವಾರ ಸಾಯಂಕಾಲ 5.00 ಗಂಟೆಯಿಂದ ಪ್ರಾರಂಭಗೊಂಡು, ಫೆಬ್ರವರಿ 22ರ ಭಾನುವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿರುವುದು.

ಭಾನುವಾರ ಬೆಳಿಗ್ಗೆ 8.30ರಿಂದ ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪ್ರಧಾನ ಹೋಮ, ಉತ್ತರ ಪೂಜೆ ಹಾಗೂ ನವಕ ಕಲಶ ಪೂಜೆಗಳು ನೆರವೇರಲಿವೆ. ತದನಂತರ ಶ್ರೀ ಲಕ್ಷ್ಮೀನಾರಾಯಣ ದೇವರಿಗೆ ಪರಿವಾರ ಸಹಿತ ಪಂಚಾಮೃತ ಹಾಗೂ ಕಲಶಾಭಿಷೇಕ, ಮಹಾಪೂಜೆ ಮತ್ತು ದೇವರ ಉತ್ಸವ ಬಲಿ ಉತ್ಸವಗಳು ಜರುಗಲಿವೆ.
ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ, ಪ್ರಾರ್ಥನೆ ಹಾಗೂ ಹರಕೆ ಸಮರ್ಪಣೆ ನಡೆದ ಬಳಿಕ 1.00 ಗಂಟೆಯಿಂದ 3 ಗಂಟೆಯವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.
ಅಪರಾಹ್ನ 3ಗಂಟೆಗೆ ಅವಭೃಥ ಸ್ನಾನಕ್ಕೆ ಮೆರವಣಿಗೆ ಹೊರಡಲಿದ್ದು, ಸಾಯಂಕಾಲ 7 ಗಂಟೆಗೆ ರಂಗ ಪೂಜೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಊರಿನಿಂದ ಆಮಂತ್ರಿತರಾದ ಶ್ರೀಧರ್ ಉಡುಪ ಇವರಿಂದ ‘ಉತ್ಸವ ಬಲಿ-ದರ್ಶನ’ ಸೇವೆ ನಡೆಯಲಿದೆ.
ಈ ವರ್ಷದ ಪಾರಾಯಣದ ದೀಕ್ಷೆಯನ್ನು ಪಡೆದವರು :
ಮೂಳೂರು ವಿದ್ಯಾ ಪಿ. ಕಾಂಚನ್ (ಗ್ರಂಥ ವಾಚನ), ಬಂಟ್ವಾಡಿ ಸಂಜೀವ ಬಿ. ಚಂದನ್ (ಅರ್ಥ ವಿವರಣೆ) ಆಳಿಕೆ ಪುರಂದರ ಅಮೀನ್ (ಅರ್ಚಕ ಭಟ್)
ಎಚ್ ಮಹಾಬಲ ಮತ್ತು ಹರಿಶ್ಚಂದ್ರ ಕಾಂಚನ್( ಚಾಮರ ಸೇವಕರು )
ನಾಗೇಶ್ ಮಂಡನ್ (ಜನಮೇಜಾರಾಯ)
ವಾಸು ಉಪ್ಪೂರು (ಪೂಜಾ ಮೇಲ್ವಿಚಾರಕರು )

ಮಂಡಳಿಯ ಟ್ರಸ್ಟಿಗಳಾದ ಜಗನ್ನಾಥ್ ಪಿ. ಪುತ್ರನ್, ನಾಗೇಶ್ ಎಲ್. ಮೆಂಡನ್, ಗೋವಿಂದ್ ಎನ್. ಪುತ್ರನ್, ಹರಿಶ್ಚಂದ್ರ ಸಿ. ಕಾಂಚನ್, ಮೋಹನ್ ದಾಸ್ ಓಡಿ ಮೆಂಡನ್, ಅಧ್ಯಕ್ಷರಾದ ಜಗನ್ನಾಥ ಪಿ. ಪುತ್ರನ್, ಉಪಾಧ್ಯಕ್ಷರುಗಳಾದ ನಾಗೇಶ್ ಎಲ್. ಮೆಂಡನ್, ಲೋಕನಾಥ್ ಪಿ. ಕಾಂಚನ್, ಗೌರವ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಸಿ. ಕಾಂಚನ್, ಗೌರವ ಕೋಶಾಧಿಕಾರಿ ಕೇಶವ ಆರ್. ಪುತ್ರನ್, ಜತೆ ಕಾರ್ಯದರ್ಶಿಗಳಾದ ಸುರೇಂದ್ರನಾಥ್ ಹಳೆಯಂಗಡಿ, ಶ್ಯಾಮ್ ಕೆ. ಪುತ್ರನ್, ಜತೆ ಕೋಶಾಧಿಕಾರಿಗಳಾದ ಜಗನ್ನಾಥ್ ಆರ್. ಕಾಂಚನ್, ರಮೇಶ್ ಎಸ್. ಅಮೀನ್ ಅವರು ಸಮಸ್ತ ಭಕ್ತಾದಿಗಳು ಈ ಭಕ್ತಿಪೂರ್ವಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದುವಿನಂತಿಸಿದ್ದಾರೆ.

ವಿ . ಸೂ : ಭಕ್ತರು ಅನ್ನಸಂತರ್ಪಣೆ, ಪುಷ್ಪ ಸೇವೆ ಹಾಗೂ ಪ್ರಸಾದ ಸೇವೆಗಳಿಗಾಗಿ ತನು-ಮನ-ಧನದ ಕಾಣಿಕೆಗಳನ್ನು ನೀಡಿ ಸಹಕರಿಸಲು ಅವಕಾಶ ಕಲ್ಪಿಸಲಾಗಿದೆ.
ವಾರ್ಷಿಕ ಮಂಗಳೋತ್ಸವ ದಿನ ಶ್ರೀ ದೇವರ ಸಾನಿಧ್ಯದಲ್ಲಿ ಜರಗುವ ಸೇವೆಗಳ ವಿವರ:
ಅನ್ನ ಸಂತರ್ಪಣೆ – ರೂ. 30,000/,ಹೂವಿನ ಅಲಂಕಾರ – ರೂ.15,000/, ನೈವೇದ್ಯ ಪ್ರಸಾದ್ಯ – ರೂ. 15,000/ ಲಡ್ಡು ಸೇವೆ – ರೂ.10,000/ , ಒಂದು ಗೋಣಿ ಅಕ್ಕಿ ಸೇವೆ – ರೂ. 1500/, ಒಂದು ಡಬ್ಬಿ ಎಳ್ಳೆಣ್ಣೆ ಸೇವೆ – ರೂ. 2000 /
Please Send your contribution to following :
S. B. Accounts through NEFT, RTGS.
A/c Name : Shreemadbharath Mandali
Bank Name : Canara Bank, Andheri West
A/c No : 5309101002671,
IFSC Code : CNRB0002667.




