31.4 C
Mumbai
June 12, 2026
Mumbai News Kannada
ಮುಂಬಯಿ

ತುಳು ಸಂಘ, ಬೋರಿವಲಿ16ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ





ತುಳುನಾಡಿನ ತುಳುವರನ್ನು ಒಂದು ವೇದಿಕೆಯಲ್ಲಿ ಸೇರಿಸುವ ಉದ್ದೇಶ ನಮ್ಮದು – ವಿರಾರ್ ಶಂಕರ್ ಬಿಶೆಟ್ಟಿ 

ಮುಂಬಯಿನಾವು ನೋಡುತ್ತಿದ್ದಂತೆಯೇ ತುಳು ಸಂಘಬೋರಿವಲಿಗೆ 16ವರ್ಷ ಅರ್ಥಪೂರ್ಣವಾಗಿ ಕಳೆದು ಹೋಗಿದೆ.   ಇದರ ಸ್ಥಾಪಕರನ್ನು ಮೊದಲು ಅಭಿನಂದಿಸಬೇಕಾಗಿದೆ. ಸಂಘ ಸ್ಥಾಪನೆ ಮಾಡಿದ್ದರ ಮುಖ್ಯ ಉದ್ದೇಶ ನಮ್ಮ ಬೊರಿವಲಿಯ ಹಾಗೂ ತುಳುನಾಡಿನ ತುಳುವರನ್ನು ಒಂದು ವೇದಿಕೆಯಲ್ಲಿ ಸೇರಿಸುವುದು ಎಂದು ತುಳು ಸಂಘಬೋರಿವಲಿಯ ಗೌರವ  ಅಧ್ಯಕ್ಷರಾದ ವಿರಾರ್ ಶಂಕರ್ ಬಿಶೆಟ್ಟಿಯವರು ನುಡಿದರು. ತುಳು ಸಂಘ,  ಬೊರಿವಲಿ ಯ  16ನೇ   ವಾರ್ಷಿಕೋತ್ಸವ  ಸಮಾರಂಭವು  . 25ರಂದು  ಸಂಜೆ  ಗ್ಯಾನ್ ಸಾಗರ್ ಅಂಪಿ ಥೀಯೇಟರ್ಬೋರಿವಲಿ ಸಂಸ್ಕೃತಿ ಕೇಂದ್ರಬೋರಿವಲಿ (.) ಮುಂಬಯಿ ಇಲ್ಲಿ ಸಂಘದ  ಸಂಘದ  ಅಧ್ಯಕ್ಷರಾದ ಹರೀಶ್ ಮೈಂದನ್ ರ ಉಪಸ್ಥಿತಿಯಲ್ಲಿ ಜರಗಿದ್ದು ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾರ್ ಶಂಕರ್ ಬಿಶೆಟ್ಟಿಯವರುನಮ್ಮ ತುಳುನಾಡಿನವರು ಅಂದರೆ ನಾವು ಯಾವ ಜಾತಿಭೇದ ನೋಡದೆ ಒಂದೇ ತುಳು ಎನ್ನುವ ಭಾವನೆಯಿಂದ ಬದುಕಬೇಕು. ಬೊರಿವಲಿಯಲ್ಲೂ ಅದೇ ರೀತಿ ಎಲ್ಲರೂ ಒಟ್ಟಾಗಿ ಬದುಕಬೇಕು ಎನ್ನುವ ಉದ್ದೇಶದಿಂದ ಸಂಘ ಸ್ಥಾಪನೆಯಾಗಿದೆ. ಇಂದು ಇಲ್ಲಿ ತುಳು ಸಂಘದ ಜೊತೆಗೆ ಬೇರೆ ಬೇರೆ ಜಾತಿಯ ಗಣ್ಯಾತಿಗಣ್ಯರು ಸಹ ಸೇರಿರುವುದು ಸಂತೋಷದ ವಿಷಯ ನಾವು ನಮ್ಮ ಬೊರಿವಲಿಯಲ್ಲಿ ಸ್ಥಾಪನೆ ಮಾಡಿರುವ ಈ ಸಂಸ್ಥೆಯು ನಮ್ಮ ಪರಿಸರದ ಜನರಿಗೆ ಉಪಯೋಗವಾಗಲಿ ಎಂದು ಹಾರೈಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯುವಕರು ನಮ್ಮ ಬೊರಿವಲಿಯ ಈ ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು. 

ಮುಖ್ಯ ಅತಿಥಿಯಾಗಿ ಆಗಮಿಸಿದ  ಸಮಾಜ ಸೇವಕಸಾಫಲ್ಯ ಸೇವಾ ಸಂಘ ಮುಂಬಯಿಯ ಅಧ್ಯಕ್ಷ ಶ್ರೀನಿವಾಸ ಪಿಸಾಫಲ್ಯ ಮಾತನಾಡುತ್ತಾ   ಸಂಘದ ಬೆಳವಣಿಗೆ ಸುಲಭ ಸಾಧ್ಯವಲ್ಲ.  ಎಳೆಯ ಮಕ್ಕಳ ಬೆಳವಣಿಗೆಯಲ್ಲಿ ತಾಯಿಗೆ ಯಾವ ರೀತಿಯ ಕಷ್ಟವಿದೆಯೋ ಅದೇ ರೀತಿ ಇಂತಹ ಸಂಘಟನೆಗಳ ಬೆಳವಣೆಗೆಯಲ್ಲಿ ಪ್ರತಿಯೊಬ್ಬ ಸದಸ್ಯರಿಗೆ ಜವಾಬ್ದಾರಿ ಇದೆ. ಇದು ಕೇವಲ ವಾರ್ಷಿಕೋತ್ಸವದಂತಹ ಕಾರ್ಯಗಳಿಂದಲ್ಲ. ಯಶಸ್ವೀ ಸ್ವಚ್ಛತಾ ಕಾರ್ಯಕ್ರಮ ದಂತಹ ಅನೇಕ ಸಮಾಜಪರಶೈಕ್ಷಣೈಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನನ್ನ ಹಿಂದಿ ಮಾಸ್ಟರ್ ಈ ಸಮಾರಂಭದಲ್ಲಿದ್ದಾರೆ. ಬಹುಶಃ ನಮ್ಮ ಸಮಯದಲ್ಲಿ ವಿದ್ಯಾರ್ಜನೆಗೆ ಇಂತಹ ಪ್ರೋತ್ಸಾಹ ಸಿಗುತ್ತಿದ್ದಲ್ಲಿ ನಾವು ತುಂಬಾ  ಸಂತೋಷ ಪಡುತ್ತಿದ್ದೆವು. ಆ ಸಮಯದಲ್ಲಿ ಇಂತಹ ವೇದಿಕೆಯಿರಲಿಲ್ಲ. ಆದರೆ ಇದೀಗ ಅದೆಷ್ಟೋ  ಸೌಲಭ್ಯಗಳಿವೆ. ಮಕ್ಕಳು ಇದರ ಪ್ರಯೋಜನ ಪಡೆಯಬೇಕು.  ನಾನು ಈ ಸಂಘದ ಸದಸ್ಯನಾಗಿದ್ದೇನೆ ಎನ್ನಲು ಸಂತೋಷವಾಗಿತ್ತಿದೆ ಎನ್ನುತ್ತಾ ನಾವು ನಮ್ಮ ಬಾಷೆಧರ್ಮ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ ಎಂದರು.

 ಸಮಾರಂಭದ ಗೌರವ ಅಥಿತಿಗಳಾಗಿ ಖ್ಯಾತ ಹೋಟೇಲು ಉದ್ಯಮಿಶಿವ ಸಾಗರ್ ಫುಡ್ಸ್ & ರಿಸಾರ್ಟ್ಸ್ ಸಮೂಹದ  ಎನ್ಟಿಪೂಜಾರಿಯವರು  ಮಾತನಾಡುತ್ತಾ ಕೇವಲ ಸಂಘವನ್ನು ಕಟ್ಟುವುದು ಮುಖ್ಯವಲ್ಲಅದನ್ನು ದೀರ್ಘಕಾಲದವರೆಗೆ ಬೆಳೆಸಿ ಮುಂದಕ್ಕೆ ಕೊಂಡೊಯ್ಯುವುದು ಬಹಳ ಮುಖ್ಯ ಎಂದು ತುಳು ಸಂಘದ ಸದಸ್ಯರು ಭಾವಿಸುತ್ತಾರೆ. ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಂಘದ ಬೆಳವಣಿಗೆಗೆ ಶ್ರಮಿಸಿದ ಗಣ್ಯರನ್ನು ಸನ್ಮಾನಿಸಿದ್ದು  ಅಭಿನಂದನೀಯ.ಮುಂಬೈನಲ್ಲಿ ನೆಲೆಸಿರುವ ನಮ್ಮ ಸಮುದಾಯದವರು ತಮ್ಮ ಊರಿನ ಸಂಘಗಳ ಮೂಲಕ ನಮ್ಮ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ.  ಇಂತಹ ಸಂಘಗಳು ನಮ್ಮ ಮುಂದಿನ ಪೀಳಿಗೆಗೆ ನಮ್ಮ ಭಾಷೆ ಮತ್ತು ಸಂಪ್ರದಾಯಗಳನ್ನು ಕಲಿಸಲು ಸಹಕಾರಿಯಾಗಿವೆ ಎಂದರು.

 ಗೌರವ ಅಥಿತಿ ಗೋಕುಲ್ ಎಂಟರ್ಪ್ರೈಸಸ್ ಇದರ ಎಂ.ಡಿಗೋಪಾಲಕೃಷ್ಣ ಜಿಗಾಣಿಗ ಮಾತನಾಡಿ ನಾನು 25-30 ವರ್ಷಗಳ ಹಿಂದೆ ಜಯರಾಜ್ ನಗರದಲ್ಲಿ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ನಾನು ಇಲ್ಲೇ ಇದ್ದೆ. ನಮಗೆ ಈ ತುಳು ಲಿಪಿ ಮತ್ತು ತಿಗಳಾರಿ ಲಿಪಿ ಬಗ್ಗೆ 1350 ನೇ ಇಸವಿಯಲ್ಲೇ ತಿಳಿದುಬಂದಿದೆ. ನಮ್ಮ ತುಳುವಿನ ರಾಜಧಾನಿಯಾದ ಬಾರಕೂರಿನ ಸಮೀಪ 365 ದೇವಸ್ಥಾನಗಳಿವೆ. ಅಲ್ಲಿ ತುಳು ಲಿಪಿಯ ಬಗ್ಗೆ ಕಲ್ಲುಗಳಲ್ಲಿ ಬರೆದಿರುವುದನ್ನು ಈಗಲೂ ಕಾಣಬಹುದು. ಆದರೆ ಈಗ ನಮ್ಮ ತುಳುವರ ಸಂಖ್ಯೆ ಕಡಿಮೆಯಾಗುತ್ತಿದೆ.  ನಮ್ಮ ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಬೇರೆಯವರ ಸಂಖ್ಯೆ ಹೆಚ್ಚಾಗುತ್ತಿದೆ ಸಂಘದ  16 ಮಹಿಳಾ ಸದಸ್ಯರು ದೀಪದೊಂದಿಗೆ ವೇದಿಕೆಗೆ ಆಗಮಿಸಿದ ಬಳಿಕಅತಿಥಿಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಸಂಘದ ಅಧ್ಯಕ್ಷರಾದ ಹರೀಶ್ ಮೈಂದನ್ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಎಚ್ ಎಸ್ ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ಚಿತ್ರಾರ್ಥ್ ಎಂಆರ್ ಹಾಗೂ ಎಸ್ ಎಸ್ ಸಿ ಯಲ್ಲಿ ಉತ್ತಮ ಅಂಕಗಳಿಸಿದ ಸಮೀಕ್ಷಾ ಜಯರಾಮ್ ಶೆಟ್ಟಿ ಹಾಗೂ ಇತರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಮುಖ್ಯ ಅತಿಥಿಯನ್ನು ಜೊತೆ ಕಾರ್ಯರ್ಶಿ ತಿಲ್ಲೋತ್ತಮ ವೈದ್ಯ ಪರಿಚಯಿಸಿದ್ದುಗೌರವ ಅತಿಥಿಗಳನ್ನು ಮಹಿಳಾ ಕಾರ್ಯದರ್ಶಿ ವಿಜಯಲಕ್ಷ್ಮಿ ದೇವಾಡಿಗ ಮತ್ತು ಸಂಘದ ಉಪಾಧ್ಯಕ್ಷರಾದ ರಜಿತ್ ಸುವರ್ಣ ಪರಿಚಯಿಸಿದರು.

ಸಂಘದಲ್ಲಿ ವಿವಿಧ ಜವಾಬ್ಧಾರಿಯನ್ನು ವಹಿಸಿ ಸುದೀರ್ಘ ಕಾಲದಿಂದ ಸೇವೆ ಮಾಡುತ್ತಾ ಬಂದಿರುವ ಸಂಘದ ಮಾಜಿ ಕೋಶಾಧಿಕಾರಿ ಚಂದ್ರಹಾಸ ಬೆಳ್ಚಡಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ,  ಗೌಕೋಶಾಧಿಕಾರಿ ದಿವಾಕರ ಬಿಕರ್ಕೇರ ಮತ್ತು  ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸವಿತ ಸಿಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತುಉಪಸ್ಥಿತರಿದ್ದ ಸಂಘಸಂಸ್ಥೆಯ ಪ್ರತಿನಿಧಿಗಳನ್ನುಪ್ರಯೋಜಕರನ್ನು ಗೌರವಿಸಲಾಯಿತು.

ಲಕ್ಷ್ಮೀ ದೇವಾಡಿಗ ಪ್ರಾರ್ಥನೆ ಮಾಡಿದರು. ತುಳು ಸಂಘ ಬೊರಿವಲಿಯ ಉಪಾಧ್ಯಕ್ಷ ರಜಿತ್ ಸುವರ್ಣಗೌಪ್ರಕಾರ್ಯದರ್ಶಿಕೃಷ್ಣರಾಜ್ ಸುವರ್ಣ,  ಗೌಕೋಶಾಧಿಕಾರಿ ದಿವಾಕರ ಕರ್ಕೇರ , ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ,   ಮಹಿಳಾ ವಿಭಾಗದ ಕಾರ್ಯದರ್ಶಿ ವಿಜಯಲಕ್ಷ್ಮೀ ದೇವಾಡಿಗಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾರಾಘವ ಎಂ., ಜೊತೆ ಕೋಶಾಧಿಕಾರಿ ಟಿವಿಪೂಜಾರಿ,  ,  ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ  ಕಸ್ತೂರಿ ಎಸ್ಶೆಟ್ಟಿಲಕ್ಷ್ಮಿ ದೇವಾಡಿಗಸರಸ್ವತಿ ರಾವ್ವೇದ ಶೆಟ್ಟಿ ಚಂದ್ರಶೇಖರ್ ದೇವಾಡಿಗ ಅನಿಲ್ ಕುಮಾರ್ ಶೆಟ್ಟಿ ಕೃಷ್ಣರಾಜ ಸುವರ್ಣ ದಿವಾಕರ್ ಕರ್ಕೇರ ಬಾಲಕೃಷ್ಣ ಬಂಗೇರ ಚಂದ್ರಹಾಸ್ ಬೆಲ್ಚಡ ಸುರೇಶ್ ಪೂಜಾರಿವಸುಧಾ ಪೈ ವಿಜಯ್ ಕುಮಾರ್ ಮುಲ್ಕಿ ಜಯರಾಮ ಶೆಟ್ಟಿ ಮೊದಲಾದವರು ಸಹಕರಿಸಿದರು. 

ತುಳು ಸಂಘಬೋರಿವಲಿಯ ಸದಸ್ಯರಿಂದ ಶೈಲಜಾ ಹೆಗ್ಡೆ ತಂಡನಲ್ಲಸೋಪಾರಾ ,  ಚಿಣ್ಣರ ಬಿಂಬ  ನಲ್ಲಸೋಪಾರಾ ತಂಡ ಮತ್ತು ಬಿಲ್ಲವರ ಅಸೋಸಿಯೇಷನ್ ತಂಡದಿಂದ ವಿವಿಧ ನೃತ್ಯ ಕಾರ್ಯಕ್ರಮ ನಡೆಯಿತು.

ಯುವ ವಿಭಾಗದ ಕಾರ್ಯಧ್ಯಕ್ಷ ನ್ಯಾಯವಾದಿ ರಾಘವ ಎಂ  ಕಾರ್ಯಕ್ರಮ ನಿರೂಪಿಸಿದರೆಗೌರವ ಕಾರ್ಯದರ್ಶಿ ಕ್ರಷ್ಣರಾಜ್ ಸುವರ್ಣ ವಂದಿಸಿದರು.

ಮನೋರಂಜನೆಯ ಅಂಗವಾಗಿ ಕರುಣಾಕರ ಕಾಪು ನಿರ್ದೇಶನದ ಯುಅರ್ಚಂದನ್ ಬರೆದ  “ಕೋರ್ದಬ್ಬು ತನಿಮಾನಿಗ“, ತುಳು ನಾಟಕ ಪ್ರಸ್ತುತಗೊಂಡಿತು. 

******

ಬೋರಿವಲಿ ತುಳು ಸಂಘ ಸ್ಥಾಪನೆಯಾಗಿ ಇಂದಿಗೆ 16ವರ್ಷ ಸಂದಿದೆ. ಮಹಿಷಮರ್ಧಿನಿ ದೇವಿಯ ಆಶೀರ್ವಾದದೊಂದಿಗೆ ಈ ಸಂಘಟನೆಯ ಶುಭಾರಂಭವಾಗಿದೆ. ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಕ್ಲೀನ್-ಅಪ್ ಡ್ರೈವ್ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುಮಾರು 500 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರುಮುಂಬೈ ಮುನ್ಸಿಪಲ್ ಕಾರ್ಪೊರೇಷನ್ಅಗ್ನಿಶಾಮಕ ದಳ ಮತ್ತು ವಕೀಲರು ಕೈಜೋಡಿಸಿದ್ದರು. ಮಹಿಳೆಯರಿಗಾಗಿ ಇತ್ತೀಚೆಗೆ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಯುವ ತುಳು ಸಮೂಹದ ವತಿಯಿಂದಲೂ ಕ್ರೀಡಾಕೂಟಗಳು ನಡೆದಿವೆ. ಅರಿಶಿನ-ಕುಂಕುಮ ಮತ್ತು ಅಟಿಡೊಂಜಿ ಕೂಟದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಮ್ಮ ಈ ತುಳು ಸಂಘವು ಜಾತಿ-ಮತ ಬೇಧವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಒಂದು ‘ಕಾಸ್ಮೋಪಾಲಿಟನ್‘ ಸಂಘಟನೆಯಾಗಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಸಹಕಾರ ಹೀಗೆ ಇರಲಿ.ಯುವ ಜನಾಂಗವು ನಮ್ಮ ಸಮಿತಿಯಲ್ಲಿ ಸದಸ್ಯರಾಗಿ ಕ್ರೀಯಾಶೀಲರಾಗುವುದರೊಂದಿಗೆನಮ್ಮ ಸಂಘಕ್ಕೆ ಇನ್ನಷ್ಟು ಶಕ್ತಿ ತುಂಬುವುದುಈ ಬಗ್ಗೆ ನಾವು ಮುಂದೆ ಪ್ರಯತ್ನಿಸಲಿದ್ದು ಇಲ್ಲಿರುವ ತುಳು ನಾಡಿನ ಎಲ್ಲಾ ಪೋಷಕರು ಕೂಡಾ ಈ ಬಗ್ಗೆ ಸಹಕರಿಸಬೇಕಾಗಿ ವಿನಂತಿ.– ಹರೀಶ್ ಮೈಂದನ್ಅಧ್ಯಕ್ಷರುತುಳು ಸಂಘ ಬೊರಿವಲಿ

 ವರದಿ : ಈಶ್ವರ ಎಂಐಲ್




Related posts

ಶಹಾಡ್: ಶ್ರೀ ಮೂಕಾಂಬಿಕಾ ದೇವಸ್ಥಾನದ 64ನೇ ವಾರ್ಷಿಕ ಮಹಾಪೂಜೆ ಸಂಪನ್ನ

Mumbai News Desk

ಬಂಟರ ಸಂಘ ಮುಂಬಯಿ ; ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯಿಂದ ಆಟಿಡೊಂಜಿ – ಬಂಟ ಕೂಟ ಮತ್ತು ಡಾ| ಆರ್ ಕೆ ಶೆಟ್ಟಿ ಪ್ರಾಯೋಜಿತ “ಸಂಜೀವಿನಿ” ಲೋಕಾರ್ಪಣೆ.

Mumbai News Desk

ಮೊಗವೀರ  ವ್ಯವಸ್ಥಾಪಕ ಮಂಡಳಿಯಲ್ಲಿ  ” ಆಟಿಡ ಒಂಜಿ ಕೂಟ “

Mumbai News Desk

ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ರಜತ ಮಹೋತ್ಸವ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಸಮಾವೇಶ, ಗೋಷ್ಠಿ, ಪುಸ್ತಕ ಬಿಡುಗಡೆಗೆ, ಕವಿ ಗೋಷ್ಠಿ

Mumbai News Desk

ಕರ್ನಾಟಕ ಸಂಘ ಪನ್ವೆಲ್ ಗಣೇಶೋತ್ಸವ, ಸತ್ಯನಾರಾಯಣ ಮಹಾಪೂಜೆ,ಮಾತಾ ಕಿ ಚೌಕಿ, ಭಕ್ತಿ ಸಂಭ್ರಮದೊಂದಿಗೆ ಆಚರಣೆ .

Mumbai News Desk

ಮದರ್ ಇಂಡಿಯಾ ದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆ ನಿರಂತರವಾಗಿರಲಿ -ಸುರೇಂದ್ರ ಪೂಜಾರಿ ಮುಂಬೈ :

Mumbai News Desk